ಹಳೆಯಂಗಡಿ: ಕ್ರೀಡಾ ಕ್ಷೇತ್ರದಲ್ಲಿ ವಯೋಮಾನದ ಇತಿಮಿತಿ ಇಲ್ಲ, ನಮ್ಮ ಮನೋವಿಕಾಸಕ್ಕೆ ಪೂರಕವಾಗಿ ಮಕ್ಕಳಿಂದ ಹಿರಿಯರ ವರೆಗೂ ಮುಕ್ತವಾಗಿ ಕ್ರೀಡೆಯಲ್ಲಿ ತೊಡಗಿಸಿಕೊಂಡರೇ ಸದೃಢರಾಗುತ್ತೇವೆ, ಗ್ರಾಮೀಣ ಭಾಗದಲ್ಲಿ ಕ್ರಿಕೆಟ್‌ನಂತೆ ಇನ್ನಿತರ ದೇಶೀಯ ಕ್ರೀಡೆಗಳಿಗೂ ಪ್ರೋತ್ಸಾಹ ಸಿಗುವಂತಾಗಬೇಕು ಎಂದು ಬಿಜೆಪಿ ಹಿಂದುಳಿದ ವರ್ಗಗಳ ಮೋರ್ಚಾದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ವಿನೋದ್ ಎಸ್. ಸಾಲ್ಯಾನ್ ಬೆಳ್ಳಾಯರು ಹೇಳಿದರು.
ಅವರು ತೋಕೂರಿನ ಸುಬ್ರಹ್ಮಣ್ಯ ಫ್ರೆಂಡ್ಸ್ ಕ್ಲಬ್‌ನ ಸಂಯೋಜನೆಯಲ್ಲಿ ಸರಕಾರಿ ಹಿರಿಯ ಪ್ರಾಥಮಿಕ ಹಿಂದೂಸ್ಥಾನಿ ಶಾಲೆಯ ಮೈದಾನದಲ್ಲಿ ಜರಗಿದ 4ನೇ ವರ್ಷದ ಭಾರೀಶ್ ಟ್ರೋಫಿ ಕ್ರಿಕೆಟ್ ಪಂದ್ಯಾಟದ ಸಮಾರೋಪದಲ್ಲಿ ಮಾತನಾಡಿದರು.
ಪಡುಪಣಂಬೂರು ಗ್ರಾಮ ಪಂಚಾಯತ್ ಅಧ್ಯಕ್ಷ ಮೋಹನ್‌ದಾಸ್ ಅಧ್ಯಕ್ಷತೆ ವಹಿಸಿದ್ದರು. ಭಾರೀಶ್ ಟ್ರೋಫಿಯನ್ನು ತೋಕೂರು ಶ್ರೀ ಸುಬ್ರಹ್ಮಣ್ಯ ಮಹಾಗಣಪತಿ ನ್ಪೋರ್ಟ್ಸ್ ಕ್ಲಬ್ ಹಾಗೂ ದ್ವಿತೀಯ ಪ್ರಶಸ್ತಿಯನ್ನು ಫೇಮಸ್ ಯೂತ್ ಕ್ಲಬ್ ನಗದು ಬಹುಮಾನದೊಂದಿಗೆ ಟ್ರೋಫಿಯನ್ನು ಪಡೆದುಕೊಂಡಿತು.
ಮೆಸ್ಕಾಂ ಸಲಹಾ ಸಮಿತಿ ಸದಸ್ಯ ಧರ್ಮಾನಂದ ಶೆಟ್ಟಿಗಾರ್, ಎಸ್.ಎಸ್.ಎಂ. ಜಿ. ನ್ಪೋರ್ಟ್ ಕ್ಲಬ್‌ನ ಅಧ್ಯಕ್ಷ ರತನ್‌ಶೆಟ್ಟಿ, ರಾಜೇಶ್ ಕಾಮತ್ ಮಂಗಳೂರು, ಗಣೇಶ್ ಕುಮಾರ್ ಬೆಂಗಳೂರು, ಶೇಖರ್ ಪೂಜಾರಿ, ಸುಬ್ರಹ್ಮಣ್ಯ ಫ್ರೆಂಡ್ಸ್ ಕ್ಲಬ್‌ನ ಲೋಹಿತ್ ದೇವಾಡಿಗ, ವಿಶಾಲ್ ಕಿರೋಡಿಯನ್, ಮಹೇಶ್ ಬೆಳ್ಚಡ, ಸುಖಾನಂದ ಶೆಟ್ಟಿ, ವೀಕ್ಷಿತ್ ದೇವಾಡಿಗ, ಅರಾ#ಜ್, ಕಿರಣ್ ಬೆಳ್ಚಡ, ದೀಪಕ್ ದೇವಾಡಿಗ, ಗೌತಮ್ ಬೆಳ್ಚಡ ಉಪಸ್ಥಿತರಿದ್ದರು. ಪ್ರವೀಣ್ ಪಾವಂಜೆ ನಿರೂಪಿಸಿದರು.