Advertisement
ಈ ನಿಟ್ಟಿನಲ್ಲಿ ನ್ಯೂಯಾರ್ಕ್ನ ವಿಶ್ವ ಸಂಸ್ಥೆಯ ‘ಪರ್ಮನೆಂಟ್ ಮಿಷನ್ ಆಫ್ ಇಂಡಿಯಾ’ ಮುಖ್ಯ ಕಚೇರಿ ಪ್ರಥಮ ವಿಶ್ವಧ್ಯಾನ ದಿನದ ಆಚರಣೆಗೆ ಸಿದ್ಧವಾಗುತ್ತಿದೆ. ಮಾನಸಿಕ ಹಾಗೂ ದೈಹಿಕ ಆರೋಗ್ಯದ ಮೇಲೆ ಪರಿವರ್ತನಕಾರಕ ಲಾಭ ಮತ್ತು ಶಾಂತಿ, ಐಕ್ಯತೆ ಪೋಷಿಸುವ ನಿಟ್ಟಿನಲ್ಲಿ ಮುಂದಿನ ಪ್ರತಿ ವರ್ಷ ಜಾಗತಿಕ ಆಚರಣೆಗೆ ಇದು ನಾಂದಿಯಾಗಲಿದೆ.
ಆಧುನಿಕ ಜಗತ್ತಿನಲ್ಲಿ ಒತ್ತಡ, ಹಿಂಸಾಚಾರ, ವಿಶ್ವಾಸದ ಕೊರತೆ ದೊಡ್ಡ ಸವಾಲುಗಳು. ಇವುಗಳನ್ನು ಎದುರಿಸಲು ಧ್ಯಾನದ ಅಗತ್ಯವಿದೆ. ಈ ನಿಟ್ಟಿನಲ್ಲಿ ವಿಶ್ವಸಂಸ್ಥೆ ವಿಶ್ವ ಧ್ಯಾನದ ದಿನವನ್ನು ಸರ್ವಾನಮತದಿಂದ ಒಪ್ಪಿ ಮಹತ್ತರ ಹೆಜ್ಜೆಯಾಗಿದೆ. ಜಾಗತಿಕ ಶಾಂತಿ ಸ್ಥಾಪನೆ ಜತೆಗೆ ಮಾನಸಿಕ ಸ್ಪಷ್ಟತೆ, ಭಾವನಾತ್ಮಕ ಸದೃಢತೆ, ಸಾಮಾಜಿಕ ಸಾಮರಸ್ಯ ಬೆಳೆಸಲು ಇದು ಸಹಕಾರಿ. ಧ್ಯಾನದಿಂದ ಮನಸ್ಸಿನ ಶಾಂತತೆ, ಉನ್ನತ ದೃಷ್ಟಿಕೋನ ಹಾಗೂ ಸಹಾನುಭೂತಿ ಬೆಳೆಸುತ್ತದೆ. ಸಾಮರಸ್ಯ ಬೆಸೆದು ಶಾಶ್ವತ ಶಾಂತಿ ನೆಲೆಸಲು ಪ್ರೇರಣೆಯಾಗಲಿದೆ. ರಾಷ್ಟ್ರೀಯತೆ, ಸಂಸ್ಕೃತಿ ಮತ್ತು ನಂಬಿಕೆ ಗಡಿಗಳನ್ನು ಮೀರಿ ಸಾರ್ವತ್ರಿಕ ಪರಿಹಾರ ಒದಗಿಸಲಿದೆ.
Related Articles
-ಶ್ರೀ ರವಿಶಂಕರ್ ಗುರೂಜಿ,
ಆರ್ಟ್ ಆಫ್ ಲಿವಿಂಗ್ ಸಂಸ್ಥಾಪಕ
Advertisement