ಅನ್ನ, ಅರಿವು, ಅಕ್ಷರ, ಆಸರೆ ನೀಡುವ ಮೂಲಕ 87 ವರ್ಷಗಳ ಕಾಲಶ್ರೀ ಸಿದ್ಧಗಂಗಾ ಮಠದಲ್ಲಿ ಜಾತ್ಯಾತೀತವಾಗಿ ಜ್ಞಾನದ ಗಂಗೆ ಹರಿಸಿರುವವಿಶ್ವ ರತ್ನ ಡಾ.ಶ್ರೀ ಶಿವಕುಮಾರ ಸ್ವಾಮೀಜಿಗಳು ಸಾಮಾಜಿಕ,ಧಾರ್ಮಿಕ, ವೈಚಾರಿಕ ಕ್ಷೇತ್ರಗಳಲ್ಲೂ ಅಮೂಲ್ಯ ಸೇವೆ ಮಾಡುತ್ತಾ ಬೇಡಿಬಂದ ಭಕ್ತರ ಇಷ್ಟಾರ್ಥ ಸಿದ್ಧಿಸಲು 111 ವರ್ಷಗಳ ಕಾಲ ಅಹಿರ್ನಿಷಿಕಾಯಕ ಮಾಡಿದ ಶ್ರೀಗಳು ಅಜರಾಮರರು.
12 ನೇ ಶತಮಾನದ ಬಸವಾದಿ ಶರಣರ ನುಡಿಮುತ್ತು ವಚನಗಳ ಹಣತೆಯಂತಿರುವ ನಿತ್ಯ ಕಾಯಕ ಯೋಗಿ ಯಾಗಿ ಕಲಿಯುಗದನಡೆದಾಡುವ ದೇವರೆಂದು ಹೆಸರಾಗಿ, ಶ್ರೀ ಸಿದ್ಧಗಂಗಾ ಮಠದಮಠಾಧ್ಯಕ್ಷರಾಗಿ 87 ವರ್ಷಗಳ ಕಾಲ ಸುಧೀರ್ಘ ಸೇವೆ ಸಲ್ಲಿಸಿದ್ದಾರೆ.
ಬೆಳಗಿನ ಜಾವವೇ ಎದ್ದು, ತಮ್ಮ ನಿತ್ಯದ ಕಾಯಕ ಆರಂಭಿಸುತ್ತಿದ್ದಶ್ರೀಗಳು ದಣಿವಾರಿಸಿಕೊಳ್ಳದೆ ಕಾಯಕದಲ್ಲಿ ನಿರತರಾಗುತ್ತಿದ್ದರು,ಅವರ ನಿತ್ಯದ ಚಟುವಟಿಕೆ ನೋಡುತ್ತಿದ್ದ ಇಂದಿನ ಯುವಸಮೂಹಕ್ಕೆ ಆಶ್ಚರ್ಯ ಉಂಟಾಗುತ್ತಿತ್ತು ಇಂತಹ ಶಕ್ತಿ ಆರೋಗ್ಯದಸ್ಥಿರತೆ ಕಾಪಾಡಿಕೊಂಡಿರುವುದರ ಹಿಂದೆ ಅವರ ಶಿಸ್ತಿನ ಜೀವನಆಹಾರ ಪದ್ಧತಿ ಶಿವ ಪೂಜಾದಿ, ಧ್ಯಾನ ಅವರ ಆರೋಗ್ಯದಗುಟ್ಟಾಗಿತ್ತು ಎನ್ನುತ್ತಾರೆ ಭಕ್ತರು.
ಡಾ.ಶ್ರೀ ಶಿವಕುಮಾರ ಸ್ವಾಮೀಜಿಗಳು ಪ್ರತಿದಿನ ಬೆಳಗಿನ ಜಾವ3.30ಕ್ಕೆ ಎದ್ದು ತಮ್ಮ ದಿನಚರಿಯನ್ನು ಆರಂಭಿಸುತ್ತಿದ್ದರು, ಶರಣರ,ಸಂತರ ತತ್ವ ಪಠಣವನ್ನು ಕೆಲಹೊತ್ತು ಮಾಡುತ್ತಿದ್ದರು, ನಂತರ ತಮ್ಮದಿನನಿತ್ಯದ ಕಾರ್ಯವಾದ ಶೌಚ ಸ್ನಾನ ವಿಧಿ ವಿಧಾನಗಳನ್ನು ಮುಗಿಸಿಬೆಳಿಗ್ಗೆ 5.30ಕ್ಕೆ ಸಾಮೂಹಿಕ ಶಿವಪೂಜೆ ಮಾಡುತ್ತಿದ್ದರು.ಈ ಸಂದರ್ಭದಲ್ಲಿ ಹಳೇ ಮಠದಲ್ಲಿ ಹಲವಾರು ಭಕ್ತರುಸ್ವಾಮೀಜಿಗಳ ಜೊತೆ ಶಿವಪೂಜೆಯಲ್ಲಿ ತಲ್ಲೀನರಾಗುತ್ತಿದ್ದರು.
ಬೆಳಿಗ್ಗೆ 6 ಗಂಟೆಗೆ ಒಂದು ಇಡ್ಲಿ, ಒಂದು ಲೋಟ ಬೇವಿ ಚಕ್ಕೆಕಶಾಯ ಸೇವಿಸಿ ಒಂದು ಪೀಸ್ ಪಪ್ಪಾಯ ಹಣ್ಣು ಸೇವಿಸುತ್ತಿದ್ದರು,ನಂತರ ಬೆಳಿಗ್ಗೆ 6.30ಕ್ಕೆ ನಡೆಯುವ ಶ್ರೀಮಠದ ಆವರಣದಲ್ಲಿನಡೆಯುವ ಸಾಮೂಹಿಕ ಪ್ರಾರ್ಥನೆಯಲ್ಲಿ ಭಾಗವಹಿಸುತ್ತಿದ್ದರು.
ದೇಶ ಭಕ್ತಿ ದೇಶಾಭಿಮಾನವನ್ನು ಬೆಳೆಸಿಕೊಳ್ಳಬೇಕು, ವಿಜ್ಞಾನತಂತ್ರಜ್ಞಾನಗಳು ಎಷ್ಟೇ ಬೆಳವಣಿಗೆಯಾದರೂ ನಮ್ಮ ಮೂಲಸಂಸ್ಕೃತಿ ಪರಂಪರೆಯನ್ನು ಮರೆಯಬಾರದು ಎನ್ನುವ ಜಾಗೃತಿಸಂದೇಶಗಳನ್ನು ಬಿತ್ತುತ್ತಲೇ ಇದ್ದರು.
ಹಿರಿಯರ ಮಾರ್ಗದರ್ಶನದಲ್ಲಿ ಸಿದ್ಧಲಿಂಗ ಶ್ರೀಗಳು: ಶ್ರೀ ಕ್ಷೇತ್ರಸಿದ್ಧಗಂಗಾ ಮಠದಲ್ಲಿ ಹಿರಿಯ ಶ್ರೀಗಳು ಶಿವೈಕ್ಯರಾದ ಮೇಲೆಅವರ ಸ್ಥಾನದಲ್ಲಿ ಕಿರಿಯ ಶ್ರೀಗಗಳಾಗಿದ್ದ ಶ್ರೀ ಸಿದ್ಧಲಿಂಗ ಸ್ವಾಮೀಜಿಯವರು ಕಾರ್ಯನಿರ್ವಹಿಸುತ್ತಿದ್ದು ಮಠಾಧ್ಯಕ್ಷರಾಗಿ ಹಿರಿಯಶ್ರೀಗಳ ಹಾದಿಯಲ್ಲಿ ಮಠವನ್ನು ಮುನ್ನೆಡಸುತ್ತಿದ್ದಾರೆ, ಈಗಶ್ರೀಮಠಕ್ಕೆ ಬರುವ ಭಕ್ತರ ಸಂಖ್ಯೆಯಲ್ಲಿಯೂ ಹೆಚ್ಚಳ ವಾಗಿದೆ.
ಚಿ.ನಿ.ಪುರುಷೋತ್ತಮ್