ಮುಂಬಯಿ: ವಿದ್ಯಾ ವಿಹಾರ್ ಪೂರ್ವದ ಸ್ಟೇಷನ್ ರೋಡ್ ನಲ್ಲಿರುವ ಶ್ರೀ ಶಾಸ್ತ ಸೇವಾ ಸಮಿತಿಯ ವಾರ್ಷಿಕ ಶ್ರೀ ಅಯ್ಯಪ್ಪ ಸ್ವಾಮಿ ಮಹಾಮಂಡಲ ಸೇವಾ ಪೂಜೆಯು ಡಿ. 9ರಂದು ಮುಂಜಾನೆ 5 ರಿಂದ ವಿವಿಧ ಧಾರ್ಮಿಕ, ಸಾಂಸ್ಕೃತಿಕ ಕಾರ್ಯಕ್ರಮಗಳೊಂದಿಗೆ ತಿಲಕ್ ನಗರ ರೈಲು ನಿಲ್ದಾಣ ಸಮೀಪದ ನ್ಯೂ ತಿಲಕ್ ನಗರದ ಗ್ರೌಂಡ್‌ನ ಸಾಯಿನಾಥ್‌ಕ್ರೀಡಾ ಮಂಡಳದ ಸಂಕುಲದಲ್ಲಿ ನಡೆಯಿತು.
ದಿ| ಪಿ. ಆರ್. ಸೂರ್ಯ ನಾರಾಯಣ ಮೂರ್ತಿ ಗುರುಸ್ವಾಮಿ ಅವರ ಆಶೀರ್ವಾದಗಳೊಂದಿಗೆ ಮಣಿ ಕಂಠ ಗುರುಸ್ವಾಮಿ ಮುಲುಂಡ್, ಡೊಂಬಿವಲಿ ಆಜೆªಪಾಡಾದ ಹೆಬ್ರಿ ನಾರಾಯಣ ಗುರುಸ್ವಾಮಿ ಅವರ ನೇತೃತ್ವದಲ್ಲಿ ಘನ್ಸೋಲಿ ಶ್ರೀ ಮೂಕಾಂಬಿಕಾ ಮಂದಿರದ ಅರ್ಚಕ ಗುರುಪ್ರಸಾದ್ ಭಟ್ ಅವರ ಮುಂದಾಳತ್ವದಲ್ಲಿ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ನೆರವೇರಿತು.
ಧಾರ್ಮಿಕ ಕಾರ್ಯಕ್ರಮವಾಗಿ ಮುಂಜಾನೆ 5ರಿಂದ ನಾರಿಕೇಳ ಗಣ ಹೋಮ, ಶರಣು ಘೋಷ, ಬೆಳಗ್ಗೆ 6 ರಿಂದ ರುದ್ರಾಭಿಷೇಕ, ಪಂಚಾಮೃತ ಅಭಿಷೇಕ, ಬೆಳಗ್ಗೆ 7 ರಿಂದ ಐರೋಲಿಯ ಭಕ್ತವೃಂದದವರಿಂದ ವಿಷ್ಣು ಸಹಸ್ರನಾಮ, ಬೆಳಗ್ಗೆ 9 ರಿಂದ ದೀಪಾರಾಧನೆ, ಅಯ್ಯಪ್ಪ ಸಹಸ್ರನಾಮ, ಪೂರ್ವಾಹ್ನ 10.30 ರಿಂದ ಥಾಣೆಯ ಚಂದ್ರಶೇಖರ ಅವರಿಂದ ಸ್ಯಾಕೊÕಫೋನ್ ವಾದ್ಯ ಸಂಗೀತ, ಮಧ್ಯಾಹ್ನ 12.45 ರಿಂದ ನೈವೇದ್ಯಾಭಿಷೇಕ, ಮಹಾಪೂಜೆ, ಮಹಾ ಆರತಿ, ಮಧ್ಯಾಹ್ನ 1ರಿಂದ ಪಲ್ಲಪೂಜೆ ನಡೆಯಿತು.
ಮಧ್ಯಾಹ್ನ 1.15 ರಿಂದ ಮಹಾ ಅನ್ನಸಂತರ್ಪಣೆಯನ್ನು ಆಯೋಜಿಸಲಾ ಗಿದ್ದು, ಸಾವಿರಾರು ಭಕ್ತಾದಿಗಳು ಪಾಲ್ಗೊಂಡು ಪ್ರಸಾದ ಸ್ವೀಕರಿಸಿದರು. ಅಪರಾಹ್ನ 2 ರಿಂದ ಶ್ರೀ ಮೂಕಾಂಬಿಕಾ ಭಜನಾ ಮಂಡಳಿ ಘನ್ಸೋಲಿ ಇವರಿಂದ ಗಾನಾಮೃತ, ಅಪರಾಹ್ನ 3 ರಿಂದ ಶ್ರೀ ಮಣಿಕಂಠ ಭಜನಾ ಮಂಡಳಿಯವರಿಂದ ಭಜನಾಮೃತವು ಸಂತದಾಸ ಶಿಬರೂರು ಸುರೇಶ್ ಎಲ್. ಶೆಟ್ಟಿ ಮತ್ತು ತಂಡದವರಿಂದ ನಡೆಯಿತು.
ಸಂಜೆ 4.30 ರಿಂದ ನೆರೂಲ್ ಶ್ರೀ ಮಹಾಕಾಳೇಶ್ವರ ಭಜನಾ ಮಂಡಳಿಯವರಿಂದ ಕೀರ್ತನಾ ಮೃತ, ಸಂಜೆ 6ರಿಂದ ಧಾರ್ಮಿಕ ಸಭೆ ಮತ್ತು ಗುರುವಂದನ ಕಾರ್ಯಕ್ರಮ ನೆರವೇರಿತು. ಸಂಜೆ 7 ರಿಂದ ಶ್ರಿ ಶಾಸ್ತ ಸೇವಾ ಸಮಿತಿ ಭಜನಾ ಮಂಡಳಿ ವಿದ್ಯಾವಿಹಾರ್ ಇದರ ಸತೀಶ್ ಸ್ವಾಮಿ ಇರ್ವತ್ತೂರು ಇವರಿಂದ ಹರಿನಾಮ ಸಂಕೀರ್ತನೆ, ರಾತ್ರಿ 8.30 ರಿಂದ ಅಯ್ಯಪ್ಪ ಅಲಂಕಾರ ಪೂಜೆ, ಡೊಂಬಿವಲಿ ಆಜೆªಪಾಡಾ ಶ್ರೀ ಅಯ್ಯಪ್ಪ ಮಂದಿರದ ನಾರಾಯಣ ಗುರುಸ್ವಾಮಿ ಇವರಿಂದ ಮಹಾಮಂಗಳಾರತಿ, ರಾತ್ರಿ 9 ರಿಂದ ಮಹಾಮಂಗಳಾರತಿ, ತೀರ್ಥ ಪ್ರಸಾದ ವಿತರಣೆ ನಡೆಯಿತು. ಈ ಎಲ್ಲಾ ಧಾರ್ಮಿಕ ಕಾರ್ಯಕ್ರಮಗಳಲ್ಲಿ ಸ್ಥಳೀಯ ಉದ್ಯಮಿಗಳು, ವಿವಿಧ ಕ್ಷೇತ್ರಗಳ ಗಣ್ಯರು, ವಿವಿಧ ಸಂಘಟನೆಗಳ ಪದಾಧಿಕಾರಿಗಳು, ಸದಸ್ಯರು, ದಾನಿಗಳು ಹಾಗೂ ಭಕ್ತಾದಿಗಳು ಪಾಲ್ಗೊಂಡು ಕಾರ್ಯಕ್ರಮದ ಯಶಸ್ಸಿಗೆ ಸಹಕರಿಸಿದರು.
ಸಮಿತಿಯ ಗೌರವಾಧ್ಯಕ್ಷ ಅಡ್ವೆ ದಿವಾಕರ ಶೆಟ್ಟಿ ಗುರುಸ್ವಾಮಿ, ಅಧ್ಯಕ್ಷ ಬೆಳ್ಮಣ್ ಪಾಂಡು ಶೆಟ್ಟಿ, ಉಪಾಧ್ಯಕ್ಷ ಪುತ್ತೂರು ಚಂದ್ರಶೇಖರ ರೈ, ಕಾರ್ಯದರ್ಶಿ ಗಿರೀಶ್ ಆರ್. ಶೆಟ್ಟಿ, ಕೋಶಾಧಿಕಾರಿ ಮರವೂರು ಸುದೇಶ ಶೆಟ್ಟಿ, ಜತೆ ಕೋಶಾಧಿಕಾರಿ ಎಲ್ಲೂರು ಶೇಖರ ಸಾಲ್ಯಾನ್, ಜತೆ ಕಾರ್ಯದರ್ಶಿ ಮಲ್ಲಿಕಾರ್ಜುನ ಗೌಡ, ಕಾರ್ಯಕಾರಿ ಸಮಿತಿಯ ಸದಸ್ಯರುಗಳಾದ ಅನೆಲಾ ಮಂಟಮೆ ಸದಾಶಿವ ಶೆಟ್ಟಿ, ಪೆರ್ಡೂರು ಸದಾನಂದ ಕುಲಾಲ್, ಕೊಲ್ಲೂರು ವೆಂಕಟೇಶ್ ಶೆಟ್ಟಿ, ಬೋಳ ಸಂತೋಷ್ ಸಾಲ್ಯಾನ್, ಎಳತ್ತೂರು ಪ್ರಸಾದ್ ಶೆಟ್ಟಿ, ಪುರುಷೋತ್ತಮ ಆಚಾರ್ಯ ಮೈಸೂರು, ಸಂತೆಕಟ್ಟೆ ನಿತ್ಯಾನಂದ ಶೆಟ್ಟಿ, ಕುಂಬ್ಳೆ ವಿಶ್ವನಾಥ ರೈ, ಗಣೇಶ್ ಶೆಟ್ಟಿ ಅನೆಲಾ ಮಂಟಮೇ, ಹರೀಶ್ ಕುರ್ಕಾಲ್, ಸಂಜೀವ ಸಾಲ್ಯಾನ್ ಮೊದಲಾದವರು ಕಾರ್ಯಕ್ರಮದ ಯಶಸ್ಸಿಗೆ ಸಹಕರಿಸಿದರು.
ಚಿತ್ರ-ವರದಿ: ಸುಭಾಷ್ ಶಿರಿಯಾ