Advertisement

ಭಾರತೀಯ ಸಂಸ್ಕೃತಿಗೆ ಅದ್ವೈತ ಸಿದ್ಧಾಂತದ ಕೊಡುಗೆ ಅಪಾರ: ಡಾ|ಜೋಶಿ

05:17 PM May 06, 2017 | |

ಮುಂಬಯಿ: ಹಿಂದು ಧರ್ಮವನ್ನು ಪುನರ್‌ ಪ್ರತಿಷ್ಠಾಪಿಸಿದ ಮಹಾನ್‌ ದಾರ್ಶನಿಕ ಶ್ರೀ ಆದಿ ಶಂಕರಾಚಾರ್ಯರಾಗಿದ್ದು, ಭಾರತೀಯ ಸಂಸ್ಕೃತಿಗೆ ಅದ್ವೈತ ಸಿದ್ಧಾಂತದ ಕೊಡುಗೆಯನ್ನು ನೀಡಿದ್ದಾರೆ ಎಂದು ಆದಿ ಶ್ರೀ ಶಂಕರಾಚಾರ್ಯರ ತತ್ವಜ್ಞಾನದ ಅಭ್ಯಾಸಕ ಡಾ| ಎ. ಆರ್‌. ಜೋಶಿ ನುಡಿದರು.

Advertisement

ಎ. 29ರಿಂದ ಮೇ 1ರವರೆಗೆ ಡೊಂಬಿವಲಿ ಪೂರ್ವದ ಅಗರ್‌ವಾಲ್‌ ಸಭಾಗೃಹದಲ್ಲಿ ಶ್ರೀ ಆದಿ ಶಂಕರಾಚಾರ್ಯ ಸೇವಾ ಸಮಿತಿ ಆಯೋಜಿಸಿದ ಆದಿ ಶ್ರೀ ಶಂಕರಾಚಾರ್ಯ ಜಯಂತಿ ಉತ್ಸವದಲ್ಲಿ ಶ್ರೀ ಶಂಕರರ ನೂರಾರು ಅನುಯಾಯಿಗಳನ್ನು ಉದ್ದೇಶಿಸಿ ಮಾತನಾಡಿದ ಅವರು, ಆಚಾರ್ಯರ ಪರಂಪರೆಯಲ್ಲಿ ಕೇಳಿ ಬರುವ ಮೊದಲ  ಹೆಸರು ಆದಿ ಶಂಕರಾಚಾರ್ಯರದ್ದಾಗಿದ್ದು, ಅವರ ತತ್ವಗಳು ಯಾವುದೇ ಒಂದು ಧರ್ಮ, ಜಾತಿ, ಉಪ ಜಾತಿಗಳಿಗೆ ಸೀಮಿತವಾಗಿಲ್ಲ. ಆದಿ ಶ್ರೀ ಶಂಕರಾಚಾರ್ಯರು ಇಡೀ ಪ್ರಪಂಚವೇ ಗೌರವಿಸುವ ಮಹಾನ್‌ ತತ್ವಜ್ಞಾನಿಯಾಗಿದ್ದರು. ಕೇವಲ 32 ವರ್ಷದ ಬದುಕಿನಲ್ಲಿ ಶತಮಾನಗಳು ನೆನಪಿಸಿಕೊಳ್ಳುವಷ್ಟು ಸಾಧನೆಯನ್ನು ಶಂಕರಾಚಾರ್ಯರು ಮಾಡಿ ಪ್ರತಿಯೊಬ್ಬರು ಅವರ ತತ್ವಗಳನ್ನು ಜೀವನದಲ್ಲಿ ಅಳವಡಿಸಿಕೊಂಡು ಸಾರ್ಥಕ ಜೀವನ ಸಾಗಿಸಬೇಕು ಎಂದು ಕರೆ ನೀಡಿದರು.

ಎ. 29ರಂದು ಸಂಜೆ ಶ್ರೀ ಆದಿ ಶಂಕರಾಚಾರ್ಯರ ಉತ್ಸವದ ಮೂರ್ತಿಯ ಭವ್ಯ ಮೆರವಣಿಗೆ ಯೊಂದಿಗೆ ಪ್ರಾರಂಭವಾದ ಜಯಂತಿ ಉತ್ಸವದಲ್ಲಿ ಕಾಕಡಾರತಿ, ರುದ್ರಾಭಿಷೇಕ, ರುದ್ರಸ್ವಾಹಾಕಾರ ಹೋಮ, ಭಜನೆ, ನಾಮಸ್ಮರಣೆ ಮೊದಲಾದ ಕಾರ್ಯಕ್ರಮಗಳು ಜರಗಿದವು. ನಿಲೇಶ್‌ ಪುರೋಹಿತ ಅವರ ಸರೋದ್‌ ವಾದನ ಗಮನ ಸೆಳೆಯಿತು. ಸಂಸ್ಥೆಯ ಪದಾಧಿಕಾರಿಗಳಾದ ಅಜಿತ್‌  ಉಮಾರಾಶಿ, ಎಸ್‌. ಎ. ಪುರೋಹಿತ, ಎಲ್‌. ಎಸ್‌. ಕುಲಕರ್ಣಿ, ವಿದ್ಯಾ ಕುಲಕರ್ಣಿ, ಅನುರಾಧಾ ಉಮಾ ರಾಣಿ ಮೊದಲಾದವರು ಕಾರ್ಯಕ್ರಮದ
ಯಶಸ್ಸಿಗೆ ಸಹಕರಿಸಿದರು. ಭಕ್ತರು ಅಧಿಕ ಸಂಖ್ಯೆಯಲ್ಲಿ  ಪಾಲ್ಗೊಂಡು ಪ್ರಸಾದ  ಸ್ವೀಕರಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next