ಮುಂಬಯಿ: ಶ್ರೀ ರಾಮನಾಥ ದೇವಸ್ಥಾನ ಮಹಾಜನ್ಸ್ ಮುಂಬಯಿ ಕುಳಾವಿ ಸಮಿತಿಯವರ ವಾರ್ಷಿಕೋತ್ಸವ ಮತ್ತು ಶ್ರೀ ಸತ್ಯನಾರಾಯಣ ಮಹಾಪೂಜೆಯು ಡಿ. 24ರಂದು ವಡಾಲದ ಶ್ರೀ ರಾಮಮಂದಿರದ ದ್ವಾರಕನಾಥ ಭವನದಲ್ಲಿ ಅದ್ದೂರಿ ಯಾಗಿ ನಡೆಯಿತು.
ವೇ|ಮೂ| ಡೊಂಬಿವಲಿಯ ತ್ರಿವಿಕ್ರಮ ಆಚಾರ್ಯ ಅವರ ಮಾರ್ಗದರ್ಶನದಲ್ಲಿ ಜಯಂತಿ ಮತ್ತು ವೇ|ಮೂ| ಮೋಹನ್‌ದಾಸ್ ಆಚಾರ್ಯ ಅವರು ಪೂಜಾ ವಿಧಿ-ವಿಧಾನಗಳನ್ನು ನೆರವೇರಿಸಿದರು.
ಈ ಸಂದರ್ಭದಲ್ಲಿ ಮುಂಬಯಿಯ ಜಿಎಸ್‌ಬಿ ಸಮಾಜದ ಬಾಲಾಜಿ ಸೇವಾ ಸಮಿತಿ ಶ್ರೀ ವೆಂಕಟ ರಮಣ ಭಜನ ಮಂಡಳಿ ವಸಾಯಿರೋಡ್ ಇವರಿಂದ ಸುಮಾರು ಎರಡು ತಾಸು ಭಜನ ಕಾರ್ಯಕ್ರಮ ಜರಗಿತು. ಈ ಮಂಡಳಿಯ ಸದಸ್ಯರು ಕನ್ನಡ, ಕೊಂಕಣಿ, ಮರಾಠಿ, ಹಿಂದಿ ಭಜನೆಗಳನ್ನು ಹಾಡಿ ಅಲ್ಲಿ ನೆರೆದ ನೂರಾರು ಸಭಿಕರ ಮನಸೆಳೆದರು. ಹಾರ್ಮೋನಿಯಂನಲ್ಲಿ ವಿನಾಯಕ ವಸಂತ ಪ್ರಭು, ತಬಲಾದಲ್ಲಿ ರಾಜೇಶ್ ಪೈ, ಪಖ್ವಾಜ್‌ನಲ್ಲಿ ಗಣೇಶ್ ಪೈ ಮತ್ತು ಅಶೋಕ್ ಶಿಂಧೆ ಸಹಕರಿಸಿದರು.
ಪೂಜಾ ವಿಧಿ-ವಿಧಾನಗಳನ್ನು ನೆರವೇರಿಸಿದ ವಡಾಲ ಶ್ರೀ ರಾಮ ಮಂದಿರದ ಪ್ರಧಾನ ಅರ್ಚಕ 52 ವರ್ಷ ಸೇವೆ ಸಲ್ಲಿಸಿ ನಿವೃತ್ತರಾದ ವೇ|ಮೂ| ಮೋಹನ್‌ದಾಸ್ ಆಚಾರ್ಯ ದಂಪತಿಯನ್ನು ಶ್ರೀ ರಾಮನಾಥ ಮುಂಬಯಿ ಸಮಿತಿಯವರಿಂದ ಅಧ್ಯಕ್ಷ ಡಾ| ವಿನಾಯಕ ವಿ. ಪೈ ಅವರು ಶಾಲು ಹೊದೆಸಿ, ಫಲಪುಷ್ಪವನ್ನಿತ್ತು ಗೌರವಿಸಿದರು.
ಆನಂತರ ಶ್ರೀ ಸತ್ಯನಾರಾಯಣ ಮಹಾಪೂಜೆ ಮತ್ತು ಶ್ರೀ ಲಕ್ಷ್ಮೀನಾರಾಯಣ ಶಾಂತೇರಿ ಕಾಮಾಕ್ಷೀ ರಾಮನಾಥ ದೇವರಿಗೆ ಆರತಿ ಬೆಳಗಿಸಲಾಯಿತು. ಸಮಿತಿಯವರಿಗೆ, ಭಜನ ಮಂಡಳಿ ಮತ್ತು ಸೇವಾದಾರದಿಗೆ ಪ್ರಸಾದ ವಿತರಿಸಲಾಯಿತು.
ಕೊನೆಯಲ್ಲಿ ರಾಮನಾಥ ಕುಳಾವಿ ಸಮಿತಿಯ ವರಿಂದ ಫಲಾಹಾರ ಮತ್ತು ಅನ್ನಸಂತರ್ಪಣೆಯ ವ್ಯವಸ್ಥೆಯನ್ನು ಮಾಡಲಾಗಿತ್ತು.
ಮುಂಬಯಿ ರಾಮನಾಥ ಕುಳಾವಿಯ ಅಧ್ಯಕ್ಷ ಡಾ| ವಿನಾಯಕ ಎ. ಪೈ, ಕಾರ್ಯದರ್ಶಿ ಗೋಪಾಲಕೃಷ್ಣ ವಿ. ಕಿಣಿ, ಸಂಚಾಲಕ ಪ್ರಕಾಶ್ ಎಂ. ಪೈ, ಕೋಶಾಧಿಕಾರಿ ರಮೇಶ್ ನಾಯಕ್ ಮತ್ತು ಸದಸ್ಯರಾದ ನಿತ್ಯಾನಂದ ಶೆಣೈ, ರಮೇಶ್ ಭಟ್ ಮತ್ತು ಎಲ್ಲ ಸದಸ್ಯರ ಉಸ್ತುವಾರಿಯಲ್ಲಿ ಈ ಧಾರ್ಮಿಕ ಕಾರ್ಯಕ್ರಮ ಯಶಸ್ವಿಯಾಗಿ ಜರಗಿತು. ಕಾರ್ಯಕ್ರಮಕ್ಕೆ ವಡಾಲ ಶ್ರೀ ರಾಮ ಮಂದಿರದ ಪದಾಧಿಕಾರಿಗಳು ಮತ್ತು ಬಾಲಾಜಿ ಸೇವಾ ಸಮಿತಿ ವಸಾಯಿರೋಡ್‌ನ ಪದಾಧಿಕಾರಿಗಳು ಮತ್ತು ಸದಸ್ಯರು ಉಪಸ್ಥಿತರಿದ್ದರು. ಶ್ರೀ ಸತ್ಯನಾರಾಯಣ ಮತ್ತು ಶ್ರೀ ಲಕ್ಷ್ಮೀನಾರಾಯಣ ಶಾಂತೇರಿ ಕಾಮಾಕ್ಷೀ ರಾಮನಾಥ ದೇವರ ಅಲಂಕೃತ ಮಂಟಪ ಎಲ್ಲರ ಮೆಚ್ಚುಗೆಗೆ ಪಾತ್ರವಾಯಿತು.