Advertisement
ಅಯೋಧ್ಯೆ ರಾಮಮಂದಿರ ವಿಚಾರದಲ್ಲಿ ಪ್ರಾಕೃತಿಕ ನಿಯಮ ಸಾರ್ವಕಾಲಿಕ ಅನ್ನೋದು ಮತ್ತೂಮ್ಮೆ ಪ್ರಕೃತಿಯೇ ಸಾಬೀತುಪಡಿಸಿದೆ. ಒಂದು ಕಾಲದ ರಾಮ ಮಂದಿರ ಮಸೀದಿಯಾಯ್ತು, ಈಗ ರಾಮಮಂದಿರ ಮತ್ತೆ ತಲೆ ಎತ್ತಿದೆ. ಅದು ಭವ್ಯವಾಗಿ, ದೊಡ್ಡದಾಗಿ, ವಿಶ್ವವೇ ತಲೆ ಎತ್ತಿ ನೋಡುವಂತಾಗಿದೆ.
ಪ್ರತೀ ಬಾರಿ ರಾಮಮಂದಿರ ವಿಚಾರ ಬಂದಾಗ, ಕಹಿ ಅನು ಭವಿಸುತ್ತಿದ್ದ ಅದೆಷ್ಟೋ ಜನರಿಗೆ ರಾಮಮಂದಿರ ಕೇವಲ ಮಂದಿರವಲ್ಲ, ಅಸ್ಮಿತೆ. ನೀವು ಗಮನಿಸಿದ್ದಿರೋ ಇಲ್ಲವೋ, ರಾಮಮಂದಿರದ ಲೋಕಾರ್ಪ ಣೆಯ ದಿನಾಂಕ ಘೋಷಣೆಯಾದ ಕ್ಷಣದಿಂದಲೂ ಭಾರತದ ಬಹುತೇಕ ಜನರು ಆ ದಿನಕ್ಕಾಗಿ ಕಾಯುತ್ತಿದ್ದಾರೆ. ತಮ್ಮ ವಾಟ್ಸ್‌ಆ್ಯಪ್ ಸ್ಟೇಟಸ್‌ನಲ್ಲಿ, ಫೇ ಸ್ ಬುಕ್, ಎಕ್ಸ್, ಇನ್‌ಸ್ಟಾಗ್ರಾಂನಲ್ಲಿ ಒಂದಲ್ಲ ಒಂದು ಪೋಸ್ಟ್ ಮಾಡು ತ್ತಲೇ ಇದ್ದಾರೆ. ಇದು ಯಾವುದೋ ವ್ಯಕ್ತಿಯ ಕಾರಣಕ್ಕಾಗಿ ಅಲ್ಲ, ಯಾರನ್ನೋ ಮೆಚ್ಚಿಸಬೇಕೆಂದು ಅಲ್ಲ. ಮನಸ್ಸಿನ ಸಂತೋಷಕ್ಕಾಗಿ, ಮನಸ್ಸಿನ ಅಪೇಕ್ಷೆಗಾಗಿ.
Related Articles
Advertisement
ಬಡವರ ಕನಸೂ ನನಸು
ಅಯೋಧ್ಯೆಯಲ್ಲಿ ನಿರ್ಮಾಣ ವಾಗಿರುವ ರಾಮಮಂದಿರ ಕೇವಲ ಆಧ್ಯಾತ್ಮಿಕ ವಿಚಾರ ಗಳಿಗೆ ಮಾತ್ರವೇ ಪ್ರಾಮುಖ್ಯ ಪಡೆದುಕೊಳ್ಳುತ್ತಿಲ್ಲ. ವ್ಯಾಪಾರ-ವಹಿವಾಟು ದೃಷ್ಟಿಯಿಂದಲೂ ಮುಖ್ಯವಾಗು ತ್ತಿದೆ. ರಾಮಮಂದಿರ ನಿರ್ಮಾಣದಿಂದ ಅನೇಕ ಬಡವರ ಬೊಗಸೆ ತುಂಬಲಿದೆ. ಬಡವರ ಕನಸುಗಳು ರಾಮನಿಂದ ನನಸಾಗಲಿದೆ. ಇದು ನಿಶ್ಚಿತ.
ಇನ್ನೊಂದು ವಿಚಾರ ಹೇಳಲೇಬೇಕು. ಭದ್ರತೆಯ ದೃಷ್ಟಿ ಯಿಂದ ಅಯೋಧ್ಯೆ ತುಂಬ ಸೇಫ್. ಅಯೋಧ್ಯೆಗೆ ಯಾವುದೇ ಕಡೆಯಿಂದಲೂ ಬಾಂಬ್‌ಗಳನ್ನು ತರಲು ಸಾಧ್ಯ ವಿಲ್ಲ. ಅತ್ಯುನ್ನತ ತಂತ್ರಜ್ಞಾನದ ಸಹಾಯದಿಂದ ಅಯೋಧ್ಯೆ ಯನ್ನು ರಕ್ಷಿಸಲಾಗುತ್ತಿದೆ. ಕೇವಲ ಭದ್ರತೆಗಾಗಿ ಅಂದಾಜು 90 ಕೋಟಿ ರೂಪಾಯಿ ಖರ್ಚು ಮಾಡಲಾಗುತ್ತಿದೆ. ಇದು ಕಣ್ಣಿಗೆ ಕಾಣುವ ಭದ್ರತಾ ವ್ಯವಸ್ಥೆ. ಆದರೆ ಕಣ್ಣಿಗೆ ಕಾಣದ ಶಕ್ತಿಯೊಂದಿದೆ. ಅದಕ್ಕಿಂತಲೂ ಪರಮಶಕ್ತಿ ಇನ್ನೊಂದಿಲ್ಲ. ಅದಕ್ಕೆ ಜೀವಂತ ಉದಾಹರಣೆಯೂ ಇದೆ.
ಹನುಮನ ರಕ್ಷಣೆ
ರಾಮಜನ್ಮಭೂಮಿ ಕಾಂಪೌಂಡ್ ಬಳಿ ಬಾಂಬ್ ಸ್ಫೋಟಿಸಲು ಉಗ್ರರು 1998ರಲ್ಲಿ ಯತ್ನಿಸಿದ್ದರು. ಬಾಂಬ್‌ಗಳನ್ನು ಅಯೋ ಧ್ಯೆಯ ಹನುಮಾನ್ ಗಢಿ ದೇವಾಲಯದ ಕಾಂಪೌಂಡ್ ಬಳಿ ಎಸೆದಿದ್ದರು. ಆದರೆ ಭಗವಾನ್ ಆಂಜನೇಯನ ರಕ್ಷಣೆ ಅಯೋಧ್ಯೆಗೆ ಇರುವುದರಿಂದ ಆ ಬಾಂಬ್‌ಗಳು ಸ್ಫೋಟವಾಗಲೇ ಇಲ್ಲ! ಉಗ್ರರು ಪೊಲೀಸರ ಕೈಗೆ ಸಿಕ್ಕಿ ಬಿದ್ದರು. ಆ ಬಾಂಬ್‌ಗಳು ಏಕೆ ಸ್ಫೋಟಗೊಳ್ಳಲಿಲ್ಲ ಎನ್ನುವುದಕ್ಕೆ ಉತ್ತರವೇ ದೈವಶಕ್ತಿ. ಈ ದೈವಶಕ್ತಿಯಿಂದಲೇ ಶ್ರೀರಾಮ ಮಂದಿರ ನಿರ್ಮಾಣವಾಗುತ್ತಿದೆ. ಈ ಎಲ್ಲ ಕಾರಣಗಳಿಂದಲೇ ಅಯೋಧ್ಯೆ ಭಾರತೀಯರ ಅಸ್ಮಿತೆಯಾಗಿದೆ ಹಾಗೂ ಸನಾತನ ಧರ್ಮದ ಕಳಶಪ್ರಾಯವಾಗಿದೆ.
ಶ್ರೀರಾಮ ಪ್ರಾಣ ಪ್ರತಿಷ್ಠಾಪನೆಯ ದಿನ (ಜನವರಿ 22) ಮನೆ ಮನೆಯಲ್ಲೂ ಶ್ರೀರಾಮನನ್ನು ಕಾಣಿರಿ. ಮನೆಯಲ್ಲಿ ದೀಪ ಹಚ್ಚುವ ಮೂಲಕ ಶ್ರೀರಾಮನನ್ನು ಪೂಜಿಸಿ, ಧ್ಯಾನಿಸಿ, ಸಮರ್ಪಿಸಿಕೊಳ್ಳಿ.
ಜಗದ್ಗುರು ಶ್ರೀ ವಚನಾನಂದ ಸ್ವಾಮೀಜಿ, ವೀರಶೈವ ಲಿಂಗಾಯತ ಪಂಚಮಸಾಲಿ ಪೀಠ, ಹರಿಹರ