Advertisement

ಶ್ರೀ ರಾಘವೇಂದ್ರ ಸಪ್ತಾಹ ಮಹೋತ್ಸವಕ್ಕೆ ಚಾಲನೆ

12:30 AM Mar 10, 2019 | Team Udayavani |

ಉಡುಪಿ: ಶ್ರೀ ರಾಘವೇಂದ್ರ ಗುರುಸಾರ್ವಭೌಮರ ವೇದಾಂತ ಸಾಮ್ರಾಜ್ಯ ಪಟ್ಟಾಭಿಷೇಕ ಮತ್ತು ಜನ್ಮದಿನಗಳ ಸಂಸ್ಮರಣೆಗಾಗಿ ಆಚರಿಸುವ 26ನೇ ಶ್ರೀ ರಾಘವೇಂದ್ರ ಸಪ್ತಾಹ ಮಹೋತ್ಸವವನ್ನು ಶ್ರೀಕೃಷ್ಣ ಮಠದ ರಾಜಾಂಗಣದಲ್ಲಿ ಪರ್ಯಾಯ ಶ್ರೀ ಪಲಿಮಾರು ಮಠಾಧೀಶ ಶ್ರೀ ವಿದ್ಯಾಧೀಶತೀರ್ಥ ಶ್ರೀಪಾದರು ಗುರುವಾರ ಉದ್ಘಾಟಿಸಿದರು.

Advertisement

ಆಶೀರ್ವಚನ ನೀಡಿದ ಅದಮಾರು ಮಠದ ಕಿರಿಯ ಯತಿ ಶ್ರೀ ಈಶಪ್ರಿಯತೀರ್ಥ ಶ್ರೀಪಾದರು, ನಾವು ಯಾವುದೇ ಕೆಲಸ ಮಾಡಿದರೂ ಮಾಡ ದಿದ್ದರೂ ದೋಷ ಅಂಟಿಕೊಳ್ಳುತ್ತದೆ. ಹಾಗಾಗಿ ಯಾವುದನ್ನು ಮಾಡಿದರೂ ಅದನ್ನು ನಾನಾಗಿಯೇ ಮಾಡಿದ್ದಲ್ಲ; ಅದಕ್ಕೆ ಭಗವಂತನೇ ಶಕ್ತಿ ಕೊಟ್ಟವನು ಎಂಬ ಅನುಸಂಧಾನ ನಮ್ಮಲ್ಲಿರಬೇಕು. ಆಗ ದೋಷಗಳು ಅಂಟುವುದಿಲ್ಲ. ಯೋಗಿಯಾದ ಶ್ರೀಕೃಷ್ಣನ ಉಪಾಸನೆ ಎಲ್ಲ ಸಂದರ್ಭಗಳಲ್ಲಿಯೂ ಇರಬೇಕು. ಶ್ರೀಕೃಷ್ಣನ ಅನುಪಮ ಭಕ್ತರಾದ ಶ್ರೀ ಗುರು ರಾಘವೇಂದ್ರರ ಆರಾಧನೆಯಿಂದಲೂ ದೋಷ ಮುಕ್ತರಾಗೋಣ ಎಂದರು.

ಅದಮಾರು ಮಠದ ಹಿರಿಯ ಯತಿ ಶ್ರೀ ವಿಶ್ವಪ್ರಿಯತೀರ್ಥ ಶ್ರೀಪಾದರು, ಶ್ರೀ ಗುರುಸಾರ್ವ ಭೌಮ ದಾಸ ಸಾಹಿತ್ಯ ಪ್ರಾಜೆಕ್ಟ್‌ನ ವಿಶೇಷಾಧಿಕಾರಿ ಕೆ. ಅಪ್ಪಣಾಚಾರ್ಯ ಉಪಸ್ಥಿತರಿದ್ದರು. 

ಶ್ರೀಮಠದ ಆಡಳಿತಾಧಿಕಾರಿ ಪ್ರಹ್ಲಾದ ಆಚಾರ್ಯ ನಿರ್ವಹಿಸಿದರು. ಅರ್ಚಕ ಪರಿಮಾಳಾಚಾರ್ಯ ಪ್ರಾಸ್ತಾವಿಕವಾಗಿ ಮಾತನಾಡಿದರು.

Advertisement

Udayavani is now on Telegram. Click here to join our channel and stay updated with the latest news.

Next