Advertisement
ವರ್ಧಂತ್ಯುತ್ಸವ ನಿಮಿತ್ತ ಮಾ.2ರಂದು ಬೆಳಗ್ಗೆ 8ಕ್ಕೆ ತಿರುಪತಿ ತಿರುಮಲ ದೇವಸ್ಥಾನದಿಂದ ಬಂದ ಶ್ರೀನಿವಾಸ ದೇವರ ಶೇಷವಸ್ತ್ರಗಳನ್ನು ರಾಯರ ಮೂಲಬೃಂದಾವನಕ್ಕೆ ಸಮರ್ಪಣೆ ಮಾಡಲಾಗುವುದು. ಅದೇ ದಿನ ಮಠದ ಪ್ರಾಕಾರದಲ್ಲಿ ಚೆನ್ನೈನ ರಾಘವೇಂದ್ರ ಸ್ವಾಮಿ ನಾದಹಾರ ಸೇವಾ ಟ್ರಸ್ಟ್‌ನ 450 ಕಲಾವಿದರಿಂದ ನಾದಹಾರ ಸಂಗೀತ ಕಾರ್ಯಕ್ರಮ ನಡೆಯಲಿದೆ. ಕಳೆದ 16 ವರ್ಷದಿಂದಲೂ ಈ ಸಂಸ್ಥೆಯ ಕಲಾವಿದರು ನಾದಹಾರ ಸಂಗೀತ ಸೇವೆ ಸಲ್ಲಿಸುತ್ತ ಬಂದಿದ್ದಾರೆ.
* ಫೆ.25ರಂದು ಸಂಜೆ 6ಕ್ಕೆ ಚೆನ್ನೈನ ವಿದ್ವಾನ್ ಶೇಖ್ ಮೆಹಬೂಬ್ ಸುಭಾನಿ ಮತ್ತು ತಂಡದಿಂದ ನಾದಸ್ವರಂ ಕಾರ್ಯಕ್ರಮ ನಡೆಯಲಿದೆ. 7 ಗಂಟೆಗೆ ಮಠದ ಕಾರ್ಯಕ್ರಮ ನಡೆಯಲಿದೆ. * ಫೆ.26ರಂದು ಸಂಜೆ 6ಗಂಟೆಗೆ ಬೆಂಗಳೂರಿನ ಚೈತ್ರಾವಾಣಿ ಅವರಿಂದ ಕರ್ನಾಟಕ ಶಾಸ್ತ್ರೀಯ ಸಂಗೀತ, 7:30ಕ್ಕೆ ಬೆಂಗಳೂರಿನ ಜಾದೂಗಾರ ಕದಂಬ ಶ್ರೀನಿವಾಸ ಅವರಿಂದ ಜಾದು ಪ್ರದರ್ಶನ, 9 ಗಂಟೆಗೆ ಮೈಸೂರಿನ ಶ್ರೀ ದುರ್ಗಾ ನೃತ್ಯ ಅಕಾಡೆಮಿ ಚಾರಿಟೇಬಲ್ ಟ್ರಸ್ಟ್‌ನ ತಂಡದಿಂದ ಭರತನಾಟ್ಯ ಕಾರ್ಯಕ್ರಮ ನಡೆಯಲಿದೆ.
Related Articles
Advertisement
* ಫೆ.28ರಂದು ಸಂಜೆ 6 ಗಂಟೆಗೆ ಚನ್ನರಾಯಪಟ್ಟಣದ ಶ್ವೇತಾ ಭಾರದ್ವಾಜ ಅವರಿಂದ ಭರತನಾಟ್ಯ, ಹುಬ್ಬಳ್ಳಿಯ ಭಾವದೀಪ ಶಿಕ್ಷಣ ಸಂಸ್ಥೆಯಿಂದ ಹರಿಸರ್ವೋತ್ತಮ ಸಾಂಸ್ಕೃತಿಕ ನಾಟಕ ಮತ್ತು ಇತರ ಕಾರ್ಯಕ್ರಮಗಳು ನಡೆಯಲಿವೆ. 9 ಗಂಟೆಗೆ ರಾಯಚೂರಿನ ಜಿ. ಸುಮೇಧ ಅವರಿಂದ ಹಿಂದೂಸ್ತಾನಿ ಶಾಸ್ತ್ರೀಯ ಸಂಗೀತ ಕಾರ್ಯಕ್ರಮ ನಡೆಯುವುದು.
* ಫೆ.29ರಂದು ಸಂಜೆ 6ಗಂಟೆಗೆ ಕರ್ನೂಲ್‌ನ ವಿದ್ವಾನ್ ರಾಮಕೃಷ್ಣ ವರಪ್ರಸಾದ ಅವರಿಂದ ಭಕ್ತಿಗೀತೆ ಗಾಯನ, 7:30ಕ್ಕೆ ಹುಬ್ಬಳ್ಳಿಯ ಬಾಲಚಂದ್ರ ನಾಕೋಡ್ ಮತ್ತು ಅರ್ಪಿತಾ ಪ್ರಹ್ಲಾದ ಜೋಶಿ ಅವರಿಂದ ಹಿಂದೂಸ್ತಾನಿ ಶಾಸ್ತ್ರೀಯ ಸಂಗೀತ, 9 ಗಂಟೆಗೆ ಬೆಂಗಳೂರಿನ ನಮ್ರತಾ ಅವರಿಂದ ಭರತನಾಟ್ಯ ಪ್ರದರ್ಶನ ನಡೆಯಲಿದೆ.
* ಮಾರ್ಚ್ 1ರಂದು ಸಂಜೆ 6ಗಂಟೆಗೆ ಬೆಂಗಳೂರಿನ ರಾಮಕಲಾ ತಂಡದಿಂದ ದಾಸವಾಣಿ ಕಾರ್ಯಕ್ರಮ, ಬೆಂಗಳೂರಿನ ಶೃಶ್ರಾವ್ಯ ಆಚಾರ್ ಅವರಿಂದ ಭಕ್ತಿಗೀತೆಗಳ ಕಾರ್ಯಕ್ರಮ ನಡೆಯಲಿದೆ. ಹೈದರಾಬಾದ್‌ನ ನಾಟ್ಯಾರ್ಪಣ ನೃತ್ಯ ಅಕಾಡೆಮಿ ತಂಡದಿಂದ ಕುಚೂಪುಡಿ ನೃತ್ಯ ಪ್ರದರ್ಶನ ನಡೆಯಲಿದೆ.
* ಮಾ.2ರಂದು ಸಂಜೆ 6 ಗಂಟೆಗೆ ಮಂತ್ರಾಲಯದ ಕಡಪ ಹನುಮಂತಾಚಾರ್ ಅವರಿಂದ ವೀಣಾವಾದನ ನಡೆಯಲಿದೆ.
ಗಣ್ಯರಿಗೆ ಸನ್ಮಾನ: ಬೆಂಗಳೂರಿನ ವಿದ್ವಾನ್‌ರಾದ ವಿಷ್ಣುದಾಸ ನಾಗೇಂದ್ರಾ ಚಾರ್, ರಘುಪತಿ ಉಪಾಧ್ಯಾಯ, ಉಡುಪಿಯ ವಿದ್ವಾನ್ ಬಿ.ಆರ್.ಗೋಪಾಲಾಚಾರ್ಯ, ತಿರುಪತಿಯ ವಿದ್ವಾನ್ ಡಾ| ರಾಮಲಾಲ್ ಶರ್ಮಾ, ಬೆಂಗಳೂರಿನ ವಿದ್ವಾನ್ ಗೋವಿಂದ ಭಟ್, ರಾಯಚೂರಿನ ಮಠಾಧಿ ಕಾರಿ ವಿಜೇಯಂದ್ರಾಚಾರ್, ಬೆಂಗಳೂರಿನ ಕೃಷ್ಣಾರಾಜ ಕುಟ್ಟಪಾಡಿ ಅವರಿಗೆ ಮಂತ್ರಾಲಯದ ಶ್ರೀರಾಯರ ಮಠದ ಯೋಗೀಂದ್ರ ಮಂಟಪದಲ್ಲಿ ನಡೆಯಲಿರುವ ಅಭಿನಂದನಾ ಮತ್ತು ಅಭಿವಂದನಾ ಕಾರ್ಯಕ್ರಮದಲ್ಲಿ ಸನ್ಮಾನಿಸಲಾಗುತ್ತದೆ.
ತೆಲಂಗಾಣದ ರಾಜ್ಯಪಾಲ ಡಾ| ತಮಿಳಸಾಯಿ ಸೌಂದರ್ಯರಾಜನ್, ಸಭಾಪತಿ ವಿಶ್ವೇಶ್ವರ ಹೆಗಡೆ ಕಾಗೇರಿ, ಉಪ ಮುಖ್ಯಮಂತ್ರಿ ಗೋವಿಂದ ಕಾರಜೋಳ, ತಮಿಳುನಾಡಿನ ಉಪಮುಖ್ಯಮಂತ್ರಿ ಒ.ಪೆನ್ನಾರಸೆಲ್ವಂ, ಆಂಧ್ರಪ್ರದೇಶದ ಸಚಿವರಾದ ಪೆಡ್ಡಿರೆಡ್ಡಿ ರಾಮಚಂದ್ರ ರೆಡ್ಡಿ, ಗುಮ್ಮನೂರು ಜೈರಾಮ್, ಕರ್ನೂಲ್ ಸಂಸದ ಕೆ.ಸಂಜೀವ ಕುಮಾರ, ಬೆಂಗಳೂರಿನ ಪೊಲೀಸ್ ಕಮಿಷನರ್ ಭಾಸ್ಕರ್‌ರಾವ್, ತಮಿಳುನಾಡಿನ ಶಾಸಕ ಕೆ.ಕುಪ್ಪನ್, ಕೇರಳದ ಐ.ಜಿ.ಎಚ್.ವೆಂಕಟೇಶ, ಟಿಟಿಡಿ ಹೆಚ್ಚುವರಿ ಕಾರ್ಯನಿರ್ವಾಹಕ ಅ ಧಿಕಾರಿ ಅನಿಲ ಕುಮಾರ ಸಿಂಗಹಾಳ ಸೇರಿದಂತೆ ಅನೇಕರು ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ ಎಂದು ಮಠದ ಪ್ರಕಟಣೆ ತಿಳಿಸಿದೆ.