Advertisement

ಭಕ್ತರ ಮೂಲಸೌಕರ್ಯಕ್ಕೆ ಹೆಚ್ಚಿನ ಆದ್ಯತೆ

12:31 AM Mar 28, 2022 | Team Udayavani |

ಏನೇನು ಬದಲಾವಣೆ?
ಭಕ್ತರಿಗಾಗಿ ವಸತಿ ಗೃಹಗಳು, ನೀರಿನ ಸೌಲಭ್ಯ, ಅನ್ನಛತ್ರ ಭವನ, ಭಕ್ತರು ದೇವರ ದರ್ಶನಕ್ಕಾಗಿ ಸಾಲಿನಲ್ಲಿ ನಿಲ್ಲಲು ಸೂಕ್ತ ನೆರಳಿನ ವ್ಯವಸ್ಥೆ.

Advertisement

ವಿಮಾನ ಗೋಪುರ ಕಾಮಗಾರಿ ಪ್ರಗತಿಯಲ್ಲಿ
ಆಂಧ್ರದ ತಿರುಮಲೆಯಂತೆ ಖ್ಯಾತಿ ಗಳಿಸಿರುವ ಇನ್ನೊಂದು ಯಾತ್ರಾ ಸ್ಥಳವೆಂದರೆ ಅದು ಕೋಲಾರ ಜಿಲ್ಲೆ ಮಾಲೂರು ತಾಲೂಕಿನ ಚಿಕ್ಕತಿರುಪತಿಯ ಪ್ರಸನ್ನ ವೆಂಕಟರಮಣಸ್ವಾಮಿ ದೇವಾಲಯ. ದೇಗುಲ ಭೂಮಿ ತೆರವು ಮಾಡಿ, ಅಭಿವೃದ್ಧಿ ಕಾರ್ಯಗಳು ಆರಂಭವಾಗಿವೆ. ಆ ಪೈಕಿ ಕಳೆದ ಹತ್ತಾರು ವರ್ಷಗಳಿಂದ ಅಗಬೇಕಾಗಿದ್ದ ದೇವಾಲಯ ಸುತ್ತಲಿನ ಕಾಂಪೌಂಡ್‌ ಗೋಡೆ ಕಾಮಗಾರಿ ಆರಂಭವಾಯಿತಾದರೂ ಅನುದಾನದ ಕೊರತೆಯಿಂದ ನಿಂತ ನೀರಾಗಿದೆ. ದೇವಾಲಯದ ಮುಂಭಾಗದಲ್ಲಿ 108 ಅಡಿಗಳ ವಿಮಾನ ಗೋಪುರ ಕಾಮಗಾರಿಯು ಸ್ಥಳೀಯ ಶಾಸಕರ ಉಸ್ತುವಾರಿಯಲ್ಲಿ ಪ್ರಗತಿಯ ಹಂತದಲ್ಲಿದೆ.

ಅನುದಾನದ ಅಗತ್ಯವಿದೆ
ದೇವಾಲಯ ಗರ್ಭಗುಡಿಯು ಶಿಥಿಲವಾಗಿರುವ ಬಗ್ಗೆ ವರದಿ ಆಧರಿಸಿದ ಧಾರ್ಮಿಕ ದತ್ತಿ ಪೀಠವು ಸಂಪೂರ್ಣ ಪರಿಶೀಲನೆ ನಡೆಸಿತ್ತಾದರೂ ಯಾವುದೇ ಆದೇಶ ನೀಡದೆ ಮೌನವಾಗಿದೆ. 108 ಅಡಿಗಳ ವಿಮಾನ ಗೋಪುರ 28 ಕೋಟಿ ರೂ. ತಡೆಗೋಡೆ ನಿರ್ಮಾಣದ ಜತೆಗೆ ಭಕ್ತರೇ ನೀಡಿರುವ ಅನ್ನದಾನ ಛತ್ರದ 2.37 ಕೋಟಿ ರೂ. ಮೊತ್ತದ ವಿವಿಧ ಕಾಮಗಾರಿ, ದೇಗುಲ ಹುಂಡಿ ಹಣದಲ್ಲಿ ನಡೆಯುತ್ತಿದೆ. ಸರ್ಕಾರವು ವಿಶೇಷ ಅನುದಾನ ಅಥವಾ ದೇವಾಲಯ ಹುಂಡಿ ಹಣ, ಅನ್ನದಾನದ ಛತ್ರದ ಹಣದಲ್ಲಿಯಾದರೂ ಮೂಲ ಸೌಲಭ್ಯ ಕಲ್ಪಿಸಿದಲ್ಲಿ ರಾಜ್ಯದಲ್ಲಿಯೇ ಮಾದರಿ ಯಾತ್ರ ಸ್ಥಳ ಆಗುವುದರಲ್ಲಿ ಯಾವುದೇ ಸಂದೇಹವಿ ಲ್ಲ. ದೇವಾಲಯ ಸುತ್ತಲೂ ಇರುವ 16 ಎಕರೆ ಜಾಗದಲ್ಲಿ ಧಾರ್ಮಿಕ ಮಂದಿರಗಳು ಪ್ರವಚನ ಆಲಯಗಳು, ಕಲ್ಯಾಣ ಮಂಟಪಗಳನ್ನು ನಿರ್ಮಿಸಲು ಅವಕಾಶವಿದ್ದು, ಇದೆಲ್ಲ ದೇವಾಲಯದ ಅರ್ಥಿಕ ಅಭಿವೃದ್ಧಿಗೆ ಅನುಕೂಲವಾಗಲಿದೆ.

Advertisement

Udayavani is now on Telegram. Click here to join our channel and stay updated with the latest news.

Next