ದೇವಸ್ಥಾನದ ಮುಂಭಾಗ ನವೀಕರಣ, ಆನೆಕಟ್ಟೆ ಮಂಟಪ, ಹಸು ಕಟ್ಟುವ ತಾಣ, ವಿಶಾಲ ಪಾರ್ಕಿಂಗ್, ಹಿಂಭಾಗದಲ್ಲಿಯೂ ಮಹಾದ್ವಾರ, ಹೈಟೆಕ್ ಶೌಚಾಲಯ, ಹಳೆಯ ಸೌಪರ್ಣಿಕ ಅತಿಥಿಗೃಹವನ್ನು ಕೆಡವಿ, 60 ಕೋಣೆಯ ಬೃಹತ್ ವಸತಿ ಗೃಹ ನಿರ್ಮಾಣ. ಜಡ್ಕಲ್‌ನಲ್ಲಿ ದೇಗುಲ ಗೋಶಾಲೆ, ಹಾಲ್ಕಲ್‌ನಲ್ಲಿ ಸಂಸ್ಕೃತ ಪಾಠಶಾಲೆ.
Advertisement
ಮಲ್ಟಿ ಲೆವೆಲ್ ಪಾರ್ಕಿಂಗ್ ವ್ಯವಸ್ಥೆ ದೇವಸ್ಥಾನಕ್ಕೆ ದೇಶದ ನಾನಾ ಕಡೆಗಳಿಂದ ಭಕ್ತರು ಆಗಮಿಸುತ್ತಿದ್ದು, ವಾಹನ ನಿಲುಗಡೆಗೆ ಸಮಸ್ಯೆಯಾಗುತ್ತಿದೆ. ಜಾಗದ ಕೊರತೆಯೂ ಇದ್ದು, ಅದಕ್ಕಾಗಿ ಮಲ್ಟಿ ಲೆವೆಲ್ ಪಾರ್ಕಿಂಗ್ ವ್ಯವಸ್ಥೆ ಮಾಡುವ ಯೋಜನೆಯಿದೆ. ದೇಗುಲದ ವತಿಯಿಂದ ಜನರಿಗೆ ಅನುಕೂಲವಾಗುವಂತೆ ಆರೋಗ್ಯ ಕ್ಷೇತ್ರಕ್ಕೆ ಸಂಬಂಧಿಸಿದಂತೆ 50 ಬೆಡ್‌ಗಳ ಆಸ್ಪತ್ರೆ, ಜಡ್ಕಲ್‌ನಲ್ಲಿ 9 ಎಕರೆ ಜಾಗಕ್ಕಾಗಿ ಡಿಸಿಗೆ ಪತ್ರ ಬರೆಯಲಾಗಿದ್ದು, ಗೋಶಾಲೆ ನಿರ್ಮಾಣ, ಹಾಲ್ಕಲ್‌ನಲ್ಲಿ ದಾನಿಯೊಬ್ಬರ ಜಾಗದಲ್ಲಿ ಸಂಸ್ಕೃತ ಪಾಠಶಾಲೆ ಮಾಡುವ ಯೋಜನೆಯಿದೆ.
ರಾಜ್ಯದಲ್ಲಿಯೇ ಹೆಚ್ಚು ಆದಾಯ ಬರುವ ದೇಗುಲಗಳಲ್ಲಿ ಕೊಲ್ಲೂರು ಸಹ ಒಂದಾಗಿದೆ. ಆದರೆ ಕೊರೊನಾ ಹಿನ್ನೆಲೆಯಲ್ಲಿ ವಾರ್ಷಿಕ ಆದಾಯದಲ್ಲಿ ಗಣನೀಯ ಕುಸಿತ ಕಂಡಿದೆ. ಹಿಂದೆ ವಾರ್ಷಿಕ 54-53 ಕೋ.ರೂ. ಬರುತ್ತಿತ್ತು. ಆದರೆ ಕಳೆದ ಬಾರಿ ಕೇವಲ 23 ಕೋ.ರೂ. ಸಂಗ್ರಹವಾಗಿದೆ. ದೇವಸ್ಥಾನದಲ್ಲಿ ಈಗಾಗಲೇ ಸಮಗ್ರ ಅಭಿವೃದ್ಧಿ ಕಾರ್ಯ ನಡೆಯುತ್ತಿದೆ. ಸರಕಾರ ದಿಂದ 110 ಕೋ.ರೂ. ದೈವಸಂಕಲ್ಪದಡಿ ನೀಡಿದರೆ ಮಲ್ಟಿಲೆವೆಲ್ ಪಾರ್ಕಿಂಗ್, ಗೋಶಾಲೆ, ಶೌಚಾಲಯ, ದೇಗುಲ ನವೀಕರಣ ಇನ್ನಿತರ ಸಾಕಷ್ಟು ಯೋಜನೆಗಳಿವೆ.
-ಕೆರಾಡಿ ಚಂದ್ರಶೇಖರ ಶೆಟ್ಟಿ, ದೇವಸ್ಥಾನದ ವ್ಯವಸ್ಥಾಪನ ಸಮಿತಿ ಅಧ್ಯಕ್ಷ