Advertisement

ಈಳಿಗನೂರು ಶ್ರೀ ಮಾರುತೇಶರ ರಥೋತ್ಸವ

02:39 PM Dec 11, 2021 | Team Udayavani |

ಕಾರಟಗಿ: ತಾಲೂಕಿನ ಈಳಿಗನೂರು ಗ್ರಾಮದ ಶ್ರೀ ಮಾರುತೇಶ್ವರನ 9ನೇ ವರ್ಷದ ರಥೋತ್ಸವ ಅಪಾರ ಭಕ್ತ ಸಮೂಹದ ಜಯಘೋಷಗಳೊಂದಿಗೆ ಶುಕ್ರವಾರ ಶ್ರದ್ಧಾಭಕ್ತಿಯಿಂದ ಅದ್ಧೂರಿಯಾಗಿ ನಡೆಯಿತು.

Advertisement

ರಥೋತ್ಸವದ ಅಂಗವಾಗಿ ಗ್ರಾಮದ ಆರಾಧ್ಯ ದೈವ ಶ್ರೀ ಮಾರುತೇಶ್ವರ ದೇವಸ್ಥಾನದಲ್ಲಿ ಬೆಳಗ್ಗೆಯಿಂದ ವಿಶೇಷ ಪೂಜೆ ಸೇರಿದಂತೆ ವಿವಿಧ ಧಾರ್ಮಿಕ ಪೂಜಾ ಕೈಂಕರ್ಯಗಳು ಜರುಗಿದವು.

ಬೆಳಗ್ಗೆ 10 ಗಂಟೆ ನಂತರ ಮಾರುತೇಶ್ವರ ಉಚ್ಛ್ರಾಯ ಎಳೆಯಲಾಯಿತು. ಇಳಿಸಂಜೆ ಸಹಸ್ರಾರು ಭಕ್ತರ ಸಮ್ಮುಖದಲ್ಲಿ 9ನೇ ವರ್ಷದ ಮಾರುತೇಶ್ವರನ ರಥೋತ್ಸವ ವಿಜೃಂಭಣೆಯಿಂದ ಜರುಗಿತು. ದೇವಸ್ಥಾನದ ಮುಂಭಾಗದ ರಥಬೀದಿಯಲ್ಲಿ ವಿರಾಜಮಾನವಾಗಿ ಹೊರಟ ರಥ ಭಕ್ತಸಮೂಹದ ಜಯಘೋಗಳ ಮಧ್ಯ ನಿಧಾನವಾಗಿ ಬನ್ನಿ ಮಹಾಂಕಾಳಿ ಕಟ್ಟೆ ತಲುಪಿ ಪೂಜೆ ಸಲ್ಲಿಸಿ ಮರಳಿ ಸ್ವಸ್ಥಾನಕ್ಕೆ ಬಂದು ತಲುಪಿತು. ರಥೋತ್ಸವದಲ್ಲಿ ಪಾಲ್ಗೊಂಡ ಹಾಗೂ ರಥ ಬೀದಿಯಲ್ಲಿ ಮನೆ ಮಾಳಿಗೆಗಳ ಮೇಲೆ ನಿಂತ ಭಕ್ತ ಸಮೂಹ ರಥಕ್ಕೆ ಹೂವು, ಬಾಳೆಹಣ್ಣು, ಉತ್ತತ್ತಿ ಸಮರ್ಪಿಸಿ ಧನ್ಯತೆ ಮೆರೆದರು.

ದೇವಸ್ಥಾನ ಸೇವಾ ಸಮಿತಿ ಸದಸ್ಯರು, ಗ್ರಾಮದ ಮುಖಂಡರು, ಕಾರಟಗಿ, ಸಿದ್ದಾಪುರ, ಉಳೇನೂರು, ಬೆನ್ನೂರು ಸೇರಿದಂತೆ ವಿವಿಧೆಡೆಯಿಂದ ಆಗಮಿಸಿದ್ದ ಭಕ್ತರು ರಥೋತ್ಸವದಲ್ಲಿ ಪಾಲ್ಗೊಂಡು ಧನ್ಯತಾಭಾವ ಮೆರೆದರು.

Advertisement

Udayavani is now on Telegram. Click here to join our channel and stay updated with the latest news.

Next