Advertisement

Thirthahalli; ಮಾ.14 ರಿಂದ 19 ರವರೆಗೆ ಮಾರಿಕಾಂಬಾ ಅಮ್ಮನವರ ವಿಶೇಷ ಜಾತ್ರಾ ಮಹೋತ್ಸವ  

05:59 PM Feb 20, 2024 | Shreeram Nayak |

ತೀರ್ಥಹಳ್ಳಿ : ಪ್ರತಿ ಎರಡು ವರ್ಷಕೊಮ್ಮೆ ಅತೀ ವಿಜೃಂಭಣೆಯಿಂದ ನಡೆಯುವ ಮಾರಿಕಾಂಬಾ ಅಮ್ಮನವರ ಜಾತ್ರೆ ಮಾರ್ಚ್ 12 ರಿಂದ ಮಾರ್ಚ್ 19 ರವರೆಗೆ ವೈಭವದಿಂದ ನಡೆಯಲಿದೆ ಎಂದು ಆಡಳಿತ ಮಂಡಳಿ ಅಧ್ಯಕ್ಷರಾದ ನಾಗರಾಜ್ ಶೆಟ್ಟಿ ತಿಳಿಸಿದರು.

Advertisement

ಮಂಗಳವಾರ ಮಾರಿಕಾಂಬಾ ದೇವಸ್ಥಾನದ ಆವರಣದಲ್ಲಿ ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿದ ಅವರು,ಮಾ. 12 ರಿಂದ ಮಾರ್ಚ್ 20 ರ ವರೆಗೆ ಪ್ರತಿದಿನ ಬೆಳಿಗ್ಗೆಯಿಂದ ಪೂಜಾದಿ ಧಾರ್ಮಿಕ ಕಾರ್ಯಕ್ರಮಗಳು ನಡೆಯಲಿವೆ. ಪ್ರತಿ ದಿನ ಮಧ್ಯಾಹ್ನ ಟಿ.ಎ.ಪಿ.ಸಿ.ಎಂ. ಎಸ್. ಸುವರ್ಣ ಸಹಕಾರ ಭವನದಲ್ಲಿ ಭಕ್ತರಿಗೆ ಅನ್ನ ಸಂತರ್ಪಣೆ ಸಂಜೆ 6.00 ರಿಂದ ದೇವಸ್ಥಾನದ ಆವರಣದಲ್ಲಿ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿದೆ ಸುಮಾರು 65 ಲಕ್ಷ ವೆಚ್ಚದಲ್ಲಿ ನಡೆಯಲಿದೆ ಎಂದರು.

ಏನೆಲ್ಲಾ ಕಾರ್ಯಕ್ರಮ ಇರಲಿದೆ?

ಮಾರ್ಚ್ 12ರ ಮಂಗಳವಾರ
ಮಹಾಪೂಜೆ, ಮಹಾಮಂಗಳಾರತಿ, ದೇವಿ ದರ್ಶನ, ಜಾತ್ರೆ.

ಮಾರ್ಚ್ 13ರ ಬುಧವಾರ
ಪಾರಾಯಣ ವಿಶೇಷ ಪೂಜೆ, ಮಹಾಪೂಜೆ, ಮಹಾಮಂಗಳಾರತಿ, ನಂತರ ಡ್ಯಾನ್ಸ್ ಪ್ಯಾಲೇಸ್ ‘ಕು’ ತೀರ್ಥಹಳ್ಳಿ “ನೃತ್ಯ ಸಂಭ್ರಮ”, ವಿಠಲ ನಾಯಕ್ ಕಲ್ಲಡ್ಕ ಮತ್ತು ತಂಡದವರಿಂದ ಗೀತ ಸಾಹಿತ್ಯಸಂಭ್ರಮ.

Advertisement

ಮಾರ್ಚ್ 14ರ ಗುರುವಾರ
ಪಾರಾಯಣ,ವಿಶೇಷ ಪೂಜೆ, ಮಹಾಪೂಜೆ,ಮಹಾಮಂಗಳಾರತಿ, ರಾತ್ರಿ “ರಂಗಪೂಜೆ ನಂತರ ಪ್ರೊ. ಕೃಷ್ಣಗೌಡ ಮತ್ತು ಸಂಗಡಿಗರಿಂದ “ನಗೆ ನೈವೇದ್ಯ” ಎಂಬ ಕಾರ್ಯಕ್ರಮ.

ಮಾರ್ಚ್ 15ರ ಶುಕ್ರವಾರ
ಪಾರಾಯಣ,ವಿಶೇಷ ಪೂಜೆ. ಮಹಾಪೂಜೆ, ಮಹಾಮಂಗಳಾರತಿ, ರಾತ್ರಿ “ರಂಗಪೂಜೆ” ಸುಪ್ರೀತ್ ಸಫಲಿಗ ಮತ್ತು ಬಳಗ, ಮಂಗಳೂರು ಇವರಿಂದ “ಸಂಗೀತ ಸೌರಭ” ಎಂಬ ಕಾರ್ಯಕ್ರಮ.

ಮಾರ್ಚ್ 16ರ ಶನಿವಾರ
12.30ಕ್ಕೆ ‘ಚಂಡಿಕಾ ಹೋಮ” ಮಧ್ಯಾಹ್ನ 2 ಕ್ಕೆ ಪೂರ್ಣಾಹುತಿ ಮಹಾಮಂಗಳಾರತಿ, ರಾತ್ರಿ ರಂಗಪೂಜೆ ನಂತರ
ಅಂತರಾಷ್ಟ್ರೀಯ ಖ್ಯಾತಿಯ ಜನಪ್ರಿಯ ನಾಯಕಿ ಶ್ರೀಮತಿ ಸವಿತಾ ಗಣೇಶ್ ಪ್ರಸಾದ್ ಅರ್ಪಿಸುವ “ಸವಿತಕ್ಕನ ಅಜ್ಜಿ ಬ್ಯಾಂಡ್” ತಂಡದಿಂದ “ಸಂಗೀತ ರಸ ಸಂಜೆ.

ಮಾರ್ಚ್ 17 ರ ಭಾನುವಾರ
ಪಾರಾಯಣ ವಿಶೇಷ ಪೂಜೆಗಳು, ಮಹಾಪೂಜೆ, ಮಹಾಮಂಗಳಾರತಿ, ತೀರ್ಥಹಳ್ಳಿ ಮೂಲದ ಪ್ರಸ್ತುತ ಬೆಂಗಳೂರಿನಲ್ಲಿ ನೆಲೆಸಿರುವ ನೃತ್ಯ ಕ್ಷೇತ್ರದಲ್ಲಿ ಸೇವೆ ಸಲ್ಲಿಸುತ್ತಿರುವ ಕಲಾವಿದರುಗಳಿಂದ “ನೃತ್ಯ ವೈಭವ” ನಡೆಯಲಿದೆ.

ಮಾರ್ಚ್ 18 ರ ಸೋಮವಾರ
ಕಲ್ಪೊಕ್ತ ಪೂಜೆ, ಸಹಸ್ರನಾಮ, ವಿಶೇಷ ಪೂಜೆಗಳು,ಮಹಾಮಂಗಳಾರತಿ, ಖ್ಯಾತ ಯಕ್ಷ ಕಲಾವಿದ “ಪಟ್ಲ ಸತೀಶ್ ಶೆಟ್ಟಿ” ಸಾರಥ್ಯದ ಪಾವಂಜೆಯಕ್ಷಗಾನ ಮೇಳ ಪ್ರಸ್ತುತ ಪ್ರಸ್ತುತ ಪಡಿಸುವ ಅಯೋಧ್ಯಾ ದೀಪ” ಕಾಲಮಿತಿ ಯಕ್ಷಗಾನ ನಡೆಯಲಿದೆ.

ಮಾರ್ಚ್ 19ರ ಮಂಗಳವಾರ
ವಿಶೇಷ ಪೂಜೆಗಳು, ಮಹಾ ಮಂಗಳಾರತಿ ಎಣ್ಣೆ ಭಂಡಾರ ಪೂಜೆ ಸಂಪ್ರದಾಯದಂತೆ ಗೊಂಬೆಪೂಜೆ,ಮೆರವಣಿಗೆ ಮೂಲಕ ದೇವಸ್ಥಾನದ ಆವರಣದಲ್ಲಿ ಗೊಂಬೆಯನ್ನು ಪ್ರತಿಷ್ಠಾಪಿಸಲಾಗುವುದು.

ಮಾರ್ಚ್ 20ರ ಬುಧವಾರ
ರಾಜಬೀದಿ ಉತ್ಸವದೊಂದಿಗೆ ಗೊಂಬೆ ವಿಸರ್ಜನೆ ನಡೆಯಲಿದೆ.

ಈ ಸಲ ವಿಶೇಷವಾಗಿ ಜಾತ್ರೆಯ ಪ್ರಯುಕ್ತ ಏಕಲವ್ಯ ಸ್ಪೋರ್ಟ್ಸ್ ಕ್ಲಬ್ ತೀರ್ಥಹಳ್ಳಿ ಇವರ ಸಹಯೋಗದೊಂದಿಗೆ ಎ.ಪಿ.ಎಂ.ಸಿ. ಪಕ್ಕದಲ್ಲಿ ನಿರ್ಮಿಸಲಾಗಿರುವ ಕ್ರೀಡಾಂಗಣದಲ್ಲಿ ದಿನಾಂಕ 14 03 2024 ರಿಂದ 17 03 2024ರವರೆಗೆ ಹೊನಲು ಬೆಳಕಿನ ಪುರುಷ ಮತ್ತು ಮಹಿಳೆಯರ “ರಾಷ್ಟ್ರೀಯ ಮಟ್ಟದ ಖೋ ಖೋ ಪಂದ್ಯಾವಳಿ ನಡೆಯಲಿದ್ದು ಈ ಎಲ್ಲಾ ಕಾರ್ಯಕ್ರಮಗಳಿಗೆ ಸರ್ವರಿಗೂ ಆದರದ ಸುಸ್ವಾಗತ ಈ ಮೂಲಕ ತಿಳಿಸುತ್ತಿದ್ದೇವೆ ಎಂದು ತಿಳಿಸಿದರು.

ಈ ಸಂದರ್ಭದಲ್ಲಿ, ಮಂಜುನಾಥ್ ಶೆಟ್ಟಿ , ಧನಂಜಯ, ರಾಘವೇಂದ್ರ ಬಾಳೆಬೈಲು, ಪ್ರಭಾಕರ್, ಜಯರಾಮ್ ಶೆಟ್ಟಿ, ಚಂದ್ರಶೇಖರ್, ಊರ್ವಶಿ ರಾಜು ಸೇರಿದಂತೆ ಹಲವರು ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next