ರಾಮಣ್ಣನು ನುಡಿದನು.
Advertisement
ಪ್ರತಿ ವರ್ಷದ ಧಾರ್ಮಿಕ ಸಂಪ್ರದಾಯದಂತೆ ಬೆಳಗ್ಗೆ ಕಾರ್ಣಿಕ ನುಡಿ ನಿಮಿತ್ತವಾಗಿ ದೇವಸ್ಥಾನದಲ್ಲಿ ಅನೇಕ ಧಾರ್ಮಿಕ ವಿಧಿವಿಧಾನಗಳ ಮೂಲಕವಾಗಿ ಪೂಜೆ ಸಲ್ಲಿಸಲಾಯಿತು. ವಂಶಪಾರಂಪರ್ಯ ಧಾರ್ಮಿಕ ಗುರುಗಳಾದ ಶ್ರೀಗುರು ವೆಂಕಪ್ಪಯ್ಯ ಒಡೆಯರ ಸಂಜೆ ಸುಮಾರು 4.30ಕ್ಕೆ ಪಲ್ಲಕ್ಕಿಯಲ್ಲಿ ಶ್ರೀ ಮೈಲಾರಲಿಂಗಸ್ವಾಮಿ ದೇವರನ್ನು ಪ್ರತಿಷ್ಠಾಪನೆ ಮಾಡಿಕೊಂಡು ಕುದುರೆ ಮೂಲಕವಾಗಿ ಮೆರವಣಿಗೆಯಲ್ಲಿ ಡೆಂಕನ ಮರಡಿಗೆ ಬಂದರು. ಡೆಂಕನ ಮರಡಿಯಲ್ಲಿ ಈಗಾಗಲೇ ಕಾರ್ಣಿಕ ನುಡಿಗೆ ಸಿದ್ಧಗೊಂಡಿರುವ ಸ್ಥಳಕ್ಕೆ ಧಾವಿಸಿ ಕಾರ್ಣಿಕನುಡಿಯುವ ಗೊರವಯ್ಯನಿಗೆ ಆಶೀರ್ವಾದ ಮಾಡುವ ಮೂಲಕವಾಗಿ ಐತಿಹಾಸಿಕ ಕಾರ್ಣಿಕ ನುಡಿ ನುಡಿಯಲು ಕಾರ್ಣಿಕದ ಗೊರವಯ್ಯ ನೆರೆದಿದ್ದ ಭಕ್ತ ಸಮೂಹ ನೋಡ ನೋಡುತ್ತಿದ್ದಂತೆ ಕಬ್ಬಿಣದ ಬಿಲ್ಲನ್ನು ಏರಿ ಸದ್ದಲೇ ಎನ್ನುವ ಆದೇಶವನ್ನು ಭಕ್ತ ಸಮೂಹಕ್ಕೆ ನೀಡಿ ತದೇಕ ಚಿತ್ತದಿಂದ ಅಕಾಶವನ್ನು ವೀಕ್ಷಣೆ ಮಾಡಿದನು. ನಂತರದಲ್ಲಿ ಮಳೆ-ಬೆಳೆ ಸಂಪಾಯಿತಲೇ ಪರಾಕ್ ಎನ್ನುವ ದೈವವಾಣಿಯನ್ನು ನುಡಿದ ಭುವಿಗೆ ಧುಮುಕಿದನು. ಕನಕ ಗುರುಪೀಠದ ಶ್ರೀಗಳಾದ ನಿರಂಜನಾನಂದ ಪುರಿ ಮಹಾಸ್ವಾಮೀಜಿ, ಇಟಗಿ ಮಠದ ಶ್ರಿಗಳು, ಶಾಸಕ ಪಿ.ಟಿ. ಪರಮೇಶ್ವರನಾಯ್ಕ, ಜಿಲ್ಲಾಧಿಕಾರಿ ಅನಿರುದ್ಧ ಶ್ರವಣ್, ಪೊಲೀಸ್ ವರಿಷ್ಠಾಧಿಕಾರಿ ಅರುಣ್, ಜಿಲ್ಲಾಮಟ್ಟದ ಅಧಿಕಾರಿಗಳು, ಹಿಂದೂ ಧಾರ್ಮಿಕ ದತ್ತಿ ಇಲಾಖೆಯ ಯು.ಎಚ್. ಪ್ರಕಾಶ್ ರಾವ್ ಒಳಗೊಂಡಂತೆ ತಾಲೂಕುಮಟ್ಟದ ವಿವಿಧ ಇಲಾಖೆ ಅಧಿಕಾರಿಗಳು, ಮುಖಂಡರುಗಳು ಹಾಜರಿದ್ದರು.
“ಮಳೆ-ಬೆಳೆ ಸಂಪಾಯಿತಲೇ ಪರಾಕ್’ ನುಡಿಯನ್ನು ಹೇಳುವ ಮೂಲಕವಾಗಿ ನಾಡಿನ ದೇಶದ ಮನುಕುಲಕ್ಕೆ ಸಂತೋಷ ಹೆಚ್ಚಾಗಲಿದ್ದು ರೈತಾಪಿ ವರ್ಗಕ್ಕೆ ಹಸನಾದ ದಿನಗಳು ಬರುತ್ತವೆ. ರೈತರು ಸಂಕಷ್ಟದಿಂದ ಪಾರಾಗುತ್ತಾರೆ. ಭವಿಷ್ಯದಲ್ಲಿ ಸಾಂಕ್ರಾಮಿಕ ರೋಗಗಳಿಂದ ದೂರವಿರುತ್ತಾನೆ ಎನ್ನುವ ಲೆಕ್ಕಾಚಾರವನ್ನು ಜನತೆ ಹಾಕಿಕೊಂಡು ತಮ್ಮದೇ ಆದ ಲೆಕ್ಕಾಚಾರದಲ್ಲಿ ಕಾರ್ಣಿಕ ನುಡಿಯನ್ನು ವಿಶ್ಲೇಷಣೆ ಮಾಡಿದರು.
Related Articles
ಕೊರೊನಾ ಹಿನ್ನೆಲೆಯಲ್ಲಿ ಜಾರಿ ಮಾಡಿದ್ದ ನಿಯಮವನ್ನು ಕೊನೆ ದಿನದಲ್ಲಿ ಸಡಿಲಿಕೆ ಮಾಡಿ ಜಾತ್ರೆಗೆ ಬರುವ ಭಕ್ತರಿಗೆ ಶ್ರೀ ಮೈಲಾರಲಿಂಗ ಸ್ವಾಮಿ ದರ್ಶನ ಪಡೆಯಲು ದೇವಸ್ಥಾನವನ್ನು ತೆರವುಗೊಳಿಸಲಾಗಿತ್ತು. ಹೊರಗಿನ ಭಕ್ತರಿಗೆ ನಿಷೇಧ ಕೊರೊನಾ ನಿಯಮವಿದ್ದರೂರು ಭಕ್ತರು ಜಾಸತ್ರೆಗೆ ಬರುವುದರಲ್ಲಿ ಹಿಂದೆ ಬàಳಲಿಲ್ಲ ಸುಮಾರು 4-5 ಲಕ್ಷ ಜನ ಸಂಕ್ಯೆ ಭಕ್ತರು ಜಾತ್ರೆಗೆ ಆಗಮಿಸಿರುವುದು ಕಂಡು ಬಂದಿತು. ಕ್ಷೇತ್ರದ ಹೊರಗಡೆಯಿಮದಲೇ ಬ್ಯಾರಿಕೇಡ್ ಹಾಕಿದ್ದರೂ ಸಹ ಭಕ್ತರು ಕಿಮೀಗಟ್ಟಲೆ ನಡೆದುಕೊಂಡು ಬಂದರು.
Advertisement