Advertisement

ಧರ್ಮ ಪಥದಲ್ಲಿ ಸಾಗಬೇಕು: ಶ್ರೀ ವಿಖ್ಯಾತಾನಂದ ಸ್ವಾಮೀಜಿ

01:55 AM Jun 07, 2022 | Team Udayavani |

ಉಡುಪಿ: ಧರ್ಮ ಪಥದಲ್ಲಿ ಸಾಗಿದಾಗ ಮಾತ್ರ ಅರ್ಥ, ಕಾಮ, ಮೋಕ್ಷವನ್ನು ಶಾಶ್ವತ ವಾಗಿ ಪಡೆಯಬಹುದು ಎಂದು ಬೆಂಗಳೂರು ಆರ್ಯಈಡಿಗ ಮಹಾ ಸಂಸ್ಥಾನದ ಶ್ರೀ ವಿಖ್ಯಾತಾನಂದ ಸ್ವಾಮೀಜಿ ನುಡಿದರು.

Advertisement

ಕಡಿಯಾಳಿ ಶ್ರೀ ಮಹಿಷಮರ್ದಿನಿ ದೇಗುಲ ಬ್ರಹ್ಮಕಲಶೋತ್ಸವ ಧಾರ್ಮಿಕ ಸಭೆಯಲ್ಲಿ ಸೋಮವಾರ ಆಶೀರ್ವಚನ ನೀಡಿದ ಶ್ರೀಗಳು, ಭಾರತವನ್ನು ವಿದೇಶಿಗರು ಸ್ವರ್ಗ ಎಂದು ಅನು ಭವಿ ಸುತ್ತಾರೆ. ಅದರೆ ಅದೇ ಸ್ವರ್ಗ ದಲ್ಲಿರುವ ನಾವು ಸ್ವರ್ಗ ಸುಖ ಕಾಣುವ ಮನಸ್ಸು ಮಾಡಬೇಕು ಎಂದರು.

ಊರೊಂದರ ಅಭಿವೃದ್ಧಿಗೆ ಧಾರ್ಮಿಕ ಕ್ಷೇತ್ರ ಬೇಕು. ಊರಿ ನಲ್ಲೊಂದು ದೇಗುಲ ನಿರ್ಮಾಣ ಮಾಡಿದರೆ ಏಳು ಜನ್ಮಗಳ ಪಾಪ ಪರಿಹಾರ ಆಗಲಿದೆ ಎಂಬ ಪ್ರತೀತಿಯಿದೆ. ನಿಷ್ಠೆ, ಭಕ್ತಿ, ಪ್ರಾಮಾಣಿಕತೆ ಹಾಗೂ ಹಿರಿಯರಿಗೆ ಕೊಡುವ ಗೌರವ ಭಾರತ ಬಿಟ್ಟು ಬೇರ್ಯಾವ ದೇಶದಲ್ಲೂ ಇಲ್ಲ. ಆದ್ದರಿಂದ ಭಾರತ ಇಂದಿಗೂ ಸುಭಿಕ್ಷೆಯಿಂದ ಕೂಡಿದೆ ಎಂದರು.

ಬ್ರಹ್ಮಕಲಶೋತ್ಸವ ಸಮಿತಿ ಉಪಾಧ್ಯಕ್ಷ, ಶ್ರೀ ವಾಸುಕೀ ಸುಬ್ರಹ್ಮಣ್ಯ ದೇವಸ್ಥಾನದ ಆಡಳಿತ ಮೊಕ್ತೇಸರ ಸಗ್ರಿ ಗೋಪಾಲಕೃಷ್ಣ ಸಾಮಗ ಅಧ್ಯಕ್ಷತೆ ವಹಿಸಿದ್ದರು. ಆರೆಸ್ಸೆಸ್‌ ಮಂಗಳೂರು ದಕ್ಷಿಣ ಪ್ರಾಂತದ ಸಹಕಾರ್ಯವಾಹ ಪಿ.ಎಸ್‌.ಪ್ರಕಾಶ್‌ ಧಾರ್ಮಿಕ ಉಪನ್ಯಾಸ ನೀಡಿದರು.

ಶಾಸಕರಾದ ಕೆ.ರಘುಪತಿ ಭಟ್‌, ಲಾಲಾಜಿ ಆರ್‌.ಮೆಂಡನ್‌, ಉಡುಪಿ ಶ್ರೀ ಲಕ್ಷ್ಮೀ ವೆಂಕಟೇಶ ದೇವಸ್ಥಾನದ ಆಡಳಿತ ಮೊಕ್ತೇಸರ ಪಿ. ವಿ. ಶೆಣೈ, ಉದ್ಯಮಿ ಮುನಿಯಾಲು ಉದಯ ಕುಮಾರ್‌ ಶೆಟ್ಟಿ, ಪಣಿಯಾಡಿ ಅನಂತಪದ್ಮನಾಭ ದೇವಸ್ಥಾನದ ಜೀರ್ಣೋದ್ಧಾರ ಸಮಿತಿ ಕಾರ್ಯಾಧ್ಯಕ್ಷ ಮಲ್ಪೆ ವಿಶ್ವನಾಥ ಭಟ್‌, ನಗರಸಭಾ ಸದಸ್ಯರಾದ ಮಾನಸಾ ಸಿ. ಪೈ, ರಾಜು, ದೇಗುಲದ ವ್ಯವಸ್ಥಾಪನ ಸಮಿತಿ ಅಧ್ಯಕ್ಷ ಡಾ| ಕಟ್ಟೆ ರವಿರಾಜ್‌ ವಿ.ಆಚಾರ್ಯ, ಬ್ರಹ್ಮಕಲಶೋತ್ಸವ ಸಮಿತಿ ಅಧ್ಯಕ್ಷಪುರುಷೋತ್ತಮ ಪಿ.ಶೆಟ್ಟಿ, ಜೀರ್ಣೋದ್ಧಾರ ಸಮಿತಿ ಅಧ್ಯಕ್ಷ ಶ್ರೀನಾಗೇಶ್‌ ಹೆಗ್ಡೆ, ಪ್ರಧಾನ ಕಾರ್ಯದರ್ಶಿ ಕೆ.ರಾಘವೇಂದ್ರ ಕಿಣಿ, ವ್ಯವಸ್ಥಾಪನ ಸಮಿತಿ ಸದಸ್ಯ ಗಣೇಶ್‌ ನಾಯ್ಕ ಉಪಸ್ಥಿತರಿದ್ದರು.

Advertisement

ಜೀರ್ಣೋದ್ಧಾರ ಸಮಿತಿ ಜತೆ ಕಾರ್ಯದರ್ಶಿ ಸತೀಶ್‌ ಕುಲಾಲ್‌ ಸ್ವಾಗ ತಿಸಿದರು. ನ್ಯಾಯವಾದಿ ರಾಜಶೇಖರ ಪಿ. ಶಾಮರಾವ್‌, ನಾಗರಾಜ್‌ ವರ್ಕಾಡಿ ನಿರೂಪಿಸಿದರು. ಭಾರತಿ ಚಂದ್ರಶೇಖರ್‌ ವಂದಿಸಿದರು.

ತಾಯಿಯ ಆರಾಧನೆಯಿಂದ ಚೈತನ್ಯ
ಧಾರ್ಮಿಕ ಸಭೆ ಉದ್ಘಾಟಿಸಿ ಮಾತನಾಡಿದ ತರಂಗ ವಾರಪತ್ರಿಕೆಯ ವ್ಯವಸ್ಥಾಪಕ ಸಂಪಾದಕಿ ಡಾ| ಸಂಧ್ಯಾ ಎಸ್‌.ಪೈ ಅವರು, ತಾಯಿ ಮಹಿಷಮರ್ದಿನಿಗೆ ಅಲಂಕಾರಯುಕ್ತ ದೇವಸ್ಥಾನ ನಿರ್ಮಾಣವಾಗಿದೆ. ದೇವಸ್ಥಾನ ಆಕೆಗೆ ಬೇಕಾಗಿಲ್ಲ. ನಮಗಾಗಿ ನಿರ್ಮಿಸಿಕೊಂಡಿದ್ದೇವೆ. ಇಷ್ಟು ಅರ್ಥವಾದ ದಿನ ನಮ್ಮ ಜೀವನ ಸಾರ್ಥಕವಾಗಲಿದೆ. ಮಹಿಷ (ಕೆಟ್ಟಗುಣ) ನಮ್ಮೊಳಗಿದ್ದು, ನಮ್ಮನ್ನು ಕಾಡುತ್ತಾನೆ. ಅವನನ್ನು ಮೆಟ್ಟಿ ನಿಂತಾಗ ಬದುಕು ಸಹಜ ಸ್ಥಿತಿಗೆ ಬರುತ್ತದೆ. ಪ್ರತಿ ಘಟನೆ ನಡೆಯುವಾಗ ಇಚ್ಛಾಶಕ್ತಿಯ ಜತೆಗೆ ಕ್ರಿಯಾಶಕ್ತಿಯೂ ಬೇಕು. ತಾಯಿಯ ಆರಾಧನೆಯಿಂದ ಚೈತನ್ಯ ಒದಗಿ ಬರಲಿದೆ. ಅದನ್ನು ನಾವು ನಿತ್ಯ ನಿರಂತರ ಬೆಳೆಸಿಕೊಂಡಾಗ ಸತ#ಲ ದೊರೆಯಲಿದೆ. ಬೀಜವೊಂದನ್ನು ನೆಟ್ಟು, ಪೋಷಿಸಿ, ಬೆಳೆಸಿದಾಗ ಅದು ಹೆಮ್ಮರವಾಗುತ್ತದೆ. ಮುಂದೆ ಆ ಮರ ನಮಗೆ ಮಾತ್ರವಲ್ಲದೆ ಸಮಾಜಕ್ಕೂ ಫ‌ಲ ಕೊಡುತ್ತದೆ. ಈ ತಾತ್ಪರ್ಯವನ್ನು ಎಲ್ಲರೂ ಅರಿಯಬೇಕು ಎಂದರು.

Advertisement

Udayavani is now on Telegram. Click here to join our channel and stay updated with the latest news.

Next