Advertisement
ಶೃಂಗೇರಿಯ ಉಭಯ ಶ್ರೀಗಳಿಂದ ಅಶೀರ್ವಾದ ಪಡೆದು ಕುಂದಾಪುರಕ್ಕೆ ಆಗಮಿಸಿದ ಶ್ರೀ ಮಹಾಕಾಳಿ ದೇವಿಗೆ ಸಮರ್ಪಿಸಲಿರುವ ಸ್ವರ್ಣ ಮುಖವಾಡ, ಶ್ರೀ ನಾಗ ದೇವರ ರಜತ ಕವಚವನ್ನು ಇಲ್ಲಿನ ಶಾಸ್ತ್ರಿ ಸರ್ಕಲ್ ಬಳಿ ಸ್ವಾಗತಿಸಲಾಯಿತು. ಅಲ್ಲಿಂದ ಆರಂಭಗೊಂಡ ಸ್ವರ್ಣ ಮುಖವಾಡ ಹಾಗೂ ಹೊರ ಕಾಣಿಕೆಯ ಪುರ ಮೆರವಣಿಗೆಯು ಪಾರಿಜಾತ ಸರ್ಕಲ್ ಮೂಲಕವಾಗಿ ಹೊಸ ಬಸ್ ನಿಲ್ದಾಣವಾಗಿ ಶ್ರೀ ಮಹಾಕಾಳಿ ದೇವಸ್ಥಾನದವರೆಗೆ ಅದ್ಧೂರಿಯಾಗಿ ನೆರವೇರಿತು.
Related Articles
ಶ್ರೀ ಮಹಾಕಾಳಿ ದೇವಿಗೆ ಸ್ವರ್ಣ ಮುಖವಾಡ ಸಮರ್ಪಣೆಯು ಜ.27 ರಂದು ಬೆಳಗ್ಗೆ 11 ಗಂಟೆಗೆ ನಡೆಯಲಿದ್ದು, ಅದಕ್ಕೂ ಮೊದಲು ಶ್ರೀ ನಾಗದೇವರಿಗೆ ರಜತ ಮುಖ ಕವಚ ಧಾರಣೆ ನೆರವೇರಲಿದೆ. ಸಂಜೆ ರಂಗಪೂಜೆ, ಮಹಾ ಮಂಗಳಾರತಿ, ಪ್ರತಿಷ್ಠಾ ಪಲ್ಲಕ್ಕಿ ಉತ್ಸವ, ಪುರ ಮೆರವಣಿಗೆ, ವಿಶೇಷ ಪೂಜೆ, ಪ್ರಸಾದ ವಿತರಣೆ ನಡೆಯಲಿದೆ.
Advertisement
ಶ್ರೀ ಮಹಾಕಾಳಿ ದೇವಸ್ಥಾನ ಕುಂದಾಪುರದ ಅಧ್ಯಕ್ಷ ಪ್ರಕಾಶ್ ಖಾರ್ವಿ, ಆಡಳಿತ ಮೊಕ್ತೇಸರರಾದ ಪಾಂಡುರಂಗ ಸಾರಂಗ, ಆನಂದ ನಾಯ್ಕ, ಶಂಕರ ನಾಯ್ಕ, ಅಖೀಲ ಭಾರತ ಕೊಂಕಣ ಖಾರ್ವಿ ಮಹಾ ಸಭಾದ ಮಾಜಿ ಅಧ್ಯಕ್ಷ ಕೆ.ವಿ. ಖಾರ್ವಿ, ವಿದ್ಯಾರಂಗ ಮಿತ್ರ ಮಂಡಳಿಯ ಅಧ್ಯಕ್ಷ ದಿನಕರ ಪಠೇಲ್, ಪುರಸಭಾ ಸದಸ್ಯರಾದ ಸಂದೀಪ್ ಖಾರ್ವಿ, ರಾಘವೇಂದ್ರ ಖಾರ್ವಿ, ಚಂದ್ರಶೇಖರ ಖಾರ್ವಿ, ಮತ್ತಿತರರು ಉಪಸ್ಥಿತರಿದ್ದರು.