Advertisement

ಬೆಳ್ಳಿ ರಥೋತ್ಸವ ಸೇವೆ ದರ ಇಳಿಸಲು ಆಗ್ರಹ

01:09 PM Jun 27, 2023 | Team Udayavani |

ಹನೂರು: ಶ್ರೀ ಕ್ಷೇತ್ರ ಮಲೆ ಮಹದೇಶ್ವರ ಬೆಟ್ಟದಲ್ಲಿ ನೂತನವಾಗಿ ಲೋಕಾರ್ಪಣೆಗೊಳಿಸಿರುವ ಬೆಳ್ಳಿ ರಥೋತ್ಸವ ಸೇವೆಗೆ ನಿಗದಿಪಡಿಸಿರುವ ದರವನ್ನು ಕಡಿಮೆ ಮಾಡುವಂತೆ ಭಕ್ತಾದಿಗಳು ಸಾಮಾಜಿಕ ಜಾಲತಾಣಗಳಲ್ಲಿ ಆಗ್ರಹಿದ್ದಾರೆ.

Advertisement

ಶ್ರೀ ಕ್ಷೇತ್ರ ಮಲೆ ಮಹದೇಶ್ವರ ಬೆಟ್ಟದಲ್ಲಿ ನೂತನವಾಗಿ ಬೆಳ್ಳಿ ರಥವನ್ನು ನಿರ್ಮಿಸಿ ಜೂ. 25ರಂದು ಲೋಕಾರ್ಪಣೆಗೊಳಿಸಿದ್ದು ಸೇವೆ ನೆರವೇರಿಸುವ ಭಕ್ತಾದಿಗಳಿಗೆ 2,001 ರೂ. ಗಳನ್ನು ನಿಗದಿಪಡಿಸಲಾಗಿದೆ. ಈ ದರ ಹೆಚ್ಚಾಗಿದ್ದು ಇದನ್ನು ಕೂಡಲೇ ಕಡಿತಗೊಳಿಸಿ ಕಡಿಮೆ ದರ ನಿಗದಿ ಮಾಡುವಂತೆ ಶ್ರೀ ಕ್ಷೇತ್ರದ ಭಕ್ತಾದಿಗಳು ಸಾಮಾಜಿಕ ಜಾಲತಾಣಗಳಲ್ಲಿ ಆಗ್ರಹಿಸಿದ್ದಾರೆ.

ಮಲೆ ಮಹದೇಶ್ವರ ಬೆಟ್ಟದಲ್ಲಿ ಚಿನ್ನದ ರಥೋತ್ಸವ ಸೇವೆ ಮತ್ತು ಬೆಳ್ಳಿಯ ರಥೋತ್ಸವ ಸೇವೆಗಳನ್ನು ನೆರವೇರಿಸುವ ಭಕ್ತಾದಿಗಳಲ್ಲಿ ಬಹಪಾಲು ಬಡವರು ಮತ್ತು ಮಧ್ಯಮ ವರ್ಗದವರು. ಅಲ್ಲದೆ ಬೆಳ್ಳಿರಥವನ್ನೂ ಸಹ ಭಕ್ತಾದಿಗಳು ಕಾಣಿಕೆ ರೂಪದಲ್ಲಿ ನೀಡಿರುವ ಹಣ ಮತ್ತು ಬೆಳ್ಳಿಯಿಂದ ತಯಾರಿಸಲಾಗಿದೆ. ಈ ನಿಟ್ಟಿನಲ್ಲಿ ದರವನ್ನು ಕಡಿಮೆ ಮಾಡುವ ನಿಟ್ಟಿನಲ್ಲಿ ಪ್ರಾಧಿಕಾರದ ಅಧ್ಯಕ್ಷರಾದ ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಪ್ರಾಧಿಕಾರದ ಅಧಿಕಾರಿಗಳು ಕ್ರಮವಹಿಸು ವಂತೆ ಪೊನ್ನಾಚಿ ಗ್ರಾಮದ ಸ್ನೇಹಜೀವಿ ರಾಜು ಆಗ್ರಹಿಸಿದ್ದಾರೆ.

ಇನ್ನು ಕೆಲ ಭಕ್ತಾದಿಗಳು ಮತ್ತು ಯುವಕರು ದೇವಸ್ಥಾನದ ಅವ್ಯವಸ್ಥೆಯ ಬಗ್ಗೆ ಸಾಮಾಜಿಕ ಜಾಲತಾಣ ಗಳಲ್ಲಿ ಆಕ್ರೋಶ ವ್ಯಕ್ತಪಡಿಸಿದ್ದು ತಮ್ಮ ಅನಿಸಿಕೆ ಅಭಿಪ್ರಾಯಗಳನ್ನು ಹಂಚಿಕೊಂಡಿದ್ದಾರೆ.

ಮಲೆ ಮಹದೇಶ್ವರ ಬೆಟ್ಟದಲ್ಲಿ ಸಮರ್ಪಕವಾದ ಮೂಲ ಸೌಕರ್ಯಗಳಿಲ್ಲ, ಎಲ್ಲಿ ನೋಡಿದರೂ ಹಣ, ಹಣ, ಹಣ ಕ್ಷೇತ್ರಕ್ಕೆ ಓರ್ವ ಶ್ರೀಮಂತ ಅಥವಾ ರಾಜಕಾರಣಿ ಅಥವಾ ರಾಜಕಾರಣಿಯಿಂದ ಲೆಟರ್‌ ಪಡೆದವರು ಬಂದರೆ ರಾಜಮ ರ್ಯಾದೆ, ಆದರೆ ಒಬ್ಬ ಬಡವನಿಗೆ ದರ್ಶನ ಕೂಡ ದೊರಕುತ್ತಿಲ್ಲ. ಉಳಿಯಲು ಸಮರ್ಪಕ ವ್ಯವಸ್ಥೆಯಿಲ್ಲ, ಬಿರುಬಿಸಿಲಿನಲ್ಲಿ ಕಾಲು ಸುಡುತ್ತಿದ್ದರೂ ಸಾಲಿನಲ್ಲಿ ಕಾಯಬೇಕಿದೆ. ಈ ನಿಟ್ಟಿನಲ್ಲಿ ಅಗತ್ಯ ಕ್ರಮವಹಿಸಬೇಕು. -ಭಗತ್‌ ಸತ್ಯ, ಭಕ್ತ

Advertisement

ಎಷ್ಟು ಹಣ ಬಂದರೂ ಕೂಡ ದರ್ಶನದ ಸಾಲಿನಲ್ಲಿ ಒಂದು ಫ್ಯಾನ್‌ ಅಳವಡಿಸಿಲ್ಲ, ಕುಡಿಯಲು ನೀರಿನ ವ್ಯವಸ್ಥೆಯಿಲ್ಲ. ವಯಸ್ಸಾದವರು ಮತ್ತು ಪುಟ್ಟ ಮಕ್ಕಳ ಸ್ಥಿತಿ ಹೇಳ್ಳೋಕೆ ಸಾಧ್ಯವಿಲ್ಲ. –ಚೌಕಿದಾರ್‌ ಪರಶುರಾಮ್‌, ಭಕ್ತ

Advertisement

Udayavani is now on Telegram. Click here to join our channel and stay updated with the latest news.

Next