Advertisement

ಗೋಕರ್ಣ ಶ್ರೀಮಹಾಬಲೇಶ್ವರ ದೇವಾಲಯ: ವಿವಾದಿತ ವಸ್ತ್ರಸಂಹಿತೆ ವಾಪಸ್‌

10:30 PM Nov 12, 2022 | Team Udayavani |

ಕುಮಟಾ: ಅರೆಬರೆ ಉಡುಪು ಧರಿಸಿ ಸಂಚರಿಸುವುದನ್ನು ನಿಷೇಧಿಸಿ ಗೋಕರ್ಣದ ಶ್ರೀಮಹಾಬಲೇಶ್ವರ ದೇವಾಲಯದ ಮೇಲುಸ್ತುವಾರಿ ಸಮಿತಿ ಆಳವಡಿಸಿದ್ದ ಬ್ಯಾನರ್‌ ತೀವ್ರ ವಿವಾದ ಪಡೆದುಕೊಂಡ ಕಾರಣ ಶನಿವಾರ ಅದನ್ನು ತೆರವುಗೊಳಿಸಲಾಗಿದೆ.

Advertisement

ಪುರಾಣ ಪ್ರಸಿದ್ಧ ಗೋಕರ್ಣಕ್ಕೆ ದೇಶ-ವಿದೇಶಗಳಿಂದ ಆಗಮಿಸುವ ಪ್ರವಾಸಿಗರು, ಭಕ್ತರು ಮಹಾಬಲೇಶ್ವರ ದೇವರ ದರ್ಶನ ಮಾಡಲು ದೇವಸ್ಥಾನ ಪ್ರವೇಶದ ವಿಷಯದಲ್ಲಿ ಹಿಂದಿನಿಂದಲೂ ವಸ್ತ್ರಸಂಹಿತೆ ಜಾರಿಯಲ್ಲಿದೆ. ಎರಡು ದಿನಗಳ ಹಿಂದೆ ಆಡಳಿತ ಮಂಡಳಿಯು ಶ್ರೀದೇವರ ರಥದ ನಿಲುಗಡೆ ಸ್ಥಳದಿಂದ ದೇಗುಲದ ಪಶ್ಚಿಮ ದ್ವಾರದವರೆಗಿನ ಪ್ರದೇಶದಲ್ಲಿ ಅರೆಬರೆ ಉಡುಪು ಧರಿಸಿ ಸಂಚರಿಸುವುದನ್ನು ನಿಷೇಧಿಸಲಾಗಿದೆ ಎಂಬ ಫ‌ಲಕ ಅಳವಡಿಸಿತ್ತು.

ಆದರೆ ಈ ಮಾರ್ಗದಲ್ಲಿ ಭಕ್ತರ ಹೊರತಾಗಿಯೂ ಸಮುದ್ರ ತೀರಕ್ಕೆ ತೆರಳುವವರು, ಸಾಮಾನ್ಯ ಕೆಲಸ ಕಾರ್ಯಗಳಿಗೆ ಹೋಗುವವರೂ ಓಡಾಡುವ ಹಿನ್ನೆಲೆಯಲ್ಲಿ ಹೊಸ ಬದಲಾವಣೆಗೆ ಸಾರ್ವಜನಿಕ ವಲಯದಿಂದ ತೀವ್ರ ವಿರೋಧ ವ್ಯಕ್ತವಾಗಿತ್ತು. ಈ ಹಿನ್ನೆಲೆಯಲ್ಲಿ ಜಿಲ್ಲಾಧಿಕಾರಿ ಸೂಚನೆಯಂತೆ ಉಪವಿಭಾಗಾಧಿಕಾರಿ ರಾಘವೇಂದ್ರ ಜಗಲಾಸರ ಗೋಕರ್ಣಕ್ಕೆ ಭೇಟಿ ನೀಡಿ ಎರಡು ಕಡೆ ಹಾಕಲಾಗಿದ್ದ ಫಲಕ ತೆರವುಗೊಳಿಸಿದ್ದಾರೆ.

 

Advertisement

Udayavani is now on Telegram. Click here to join our channel and stay updated with the latest news.

Next