ಕೊಲಂಬೊ: ಶ್ರೀಲಂಕಾದ ಆರ್ಥಿಕ ಪರಿಸ್ಥಿತಿ ಸಂಪೂರ್ಣವಾಗಿ ನೆಲಕಚ್ಚಿದೆ ಎಂದು ಅಲ್ಲಿನ ಪ್ರಧಾನಿ ರಾನಿಲ್ ವಿಕ್ರಮಸಿಂಘೆ ತಿಳಿಸಿದ್ದಾರೆ.
ಶ್ರೀಲಂಕಾ ಸಂಸತ್ತಿನಲ್ಲಿ ಬುಧವಾರ ದೇಶದ ಆರ್ಥಿಕ ಪರಿಸ್ಥಿತಿಯನ್ನು ವಿವರಿಸಿದ, ಹಣಕಾಸು ಸಚಿವರೂ ಆದ ರಾನಿಲ್, “ದೇಶದಲ್ಲಿ ಈಗಾಗಲೇ ಇಂಧನ, ಅನಿಲ, ವಿದ್ಯುತ್ ಹಾಗೂ ಆಹಾರದ ಅಭಾವ ಉಂಟಾಗಿದ್ದು, ಅದರ ನಡುವೆಯೇ ಆರ್ಥಿಕ ಪರಿಸ್ಥಿತಿ ಮತ್ತಷ್ಟು ಹದಗೆಟ್ಟಿದೆ.
ನಮ್ಮ ದೇಶದ ಪೆಟ್ರೋಲಿಯಂ ಕಂಪನಿಗಳು ವಿದೇಶಗಳಿಂದ ಸಾಲದ ಆಧಾರದಲ್ಲಿ ತೈಲ ತರಿಸಿಕೊಂಡಿದ್ದು, ಪುನಃ ಸಾಲ ಕೇಳಲು ಸಾಧ್ಯವಾಗದಂಥ ಪರಿಸ್ಥಿತಿ ಬಂದಿದೆ” ಎಂದು ಹೇಳಿದ್ದಾರೆ.
“ಸಾಲವು ಅಗಾಧವಾಗಿ ಬೆಳೆದು ನಿಂತಿರುವುದರಿಂದ ಬರುವ ಅಲ್ಪಸ್ವಲ್ಪ ಆದಾಯವೂ ಕೂಡ ಸಾಲ ಕಟ್ಟಲು ಬಳಕೆಯಾಗಿ ದುಡ್ಡು ಕೊಟ್ಟು ವಿದೇಶಗಳಿಂದ ಏನನ್ನೂ ತರಿಸಿಕೊಳ್ಳುವ ಪರಿಸ್ಥಿತಿಯಲ್ಲಿ ನಾವಿಲ್ಲ.
ದೇಶದ ಆರ್ಥಿಕತೆ ಸಂಪೂರ್ಣವಾಗಿ ನೆಲಕಚ್ಚಿದೆ” ಎಂದಿದ್ದಾರೆ.