Advertisement
ಹೀಗೆ ಲಂಕಾ ಪ್ರಾಚೀನ ಕಾಲದಿಂದಲೂ ಭಾರತದೊಂದಿಗೆ ಅವಿನಾಭಾವ ಸಂಬಂಧವನ್ನು ಹೊಂದಿದೆ. ಶ್ರೀಲಂಕಾದಲ್ಲಿ ಹಿಂದೂ ಧರ್ಮದೊಂದಿಗೆ ಬೌದ್ಧ ಧರ್ಮವನ್ನು ಪಾಲಿಸಲಾಗುತ್ತದೆ. ರಾಮಾಯಣದ ಪ್ರಮುಖ ಘಟನೆಗಳು ಸಂಭ ವಿಸಿದ ವಿವಿಧ ಸ್ಥಳಗಳನ್ನು ಇಲ್ಲಿ ಕಾಣಬಹುದು. ಇದು ನೆರೆ ರಾಷ್ಟ್ರಗಳ ಸಹಿತ ವಿಶ್ವಾದ್ಯಂತದ ಪ್ರವಾಸಿಗರ ನೆಚ್ಚಿನ ತಾಣಗಳಾಗಿವೆ. ಈಗ ಅಯೋಧ್ಯೆಯ ಶ್ರೀರಾಮ ಜನ್ಮ ಭೂಮಿಯಲ್ಲಿ ನಿರ್ಮಾಣಗೊಂಡಿರುವ ರಾಮಮಂದಿರದಲ್ಲಿ ಶ್ರೀರಾಮಲಲ್ಲಾನ ಪ್ರಾಣ ಪ್ರತಿಷ್ಠಾಪನೆಯ ದಿನ ಸಮೀಪಿಸುತ್ತಿದ್ದಂತೆಯೇ ರಾಮಾಯಣದಲ್ಲಿ ಉಲ್ಲೇಖವಾಗಿರುವ ಲಂಕಾದಲ್ಲಿನ ವಿವಿಧ ಸ್ಥಳಗಳಿಗೆ ಹೆಚ್ಚಿನ ಸಂಖ್ಯೆಯಲ್ಲಿ ಪ್ರವಾಸಿಗರು ಭೇಟಿ ನೀಡಲಾರಂಭಿಸಿದ್ದಾರೆ.
Related Articles
ರಾಮಬೋಡ, ಇಲ್ಲಿ ಹನುಮನಿಗೆ ಅರ್ಪಿಸಲಾದ ದೇಗುಲವಿದೆ. ಸೀತೆಯನ್ನು ಹುಡುಕುವ ಕಾರ್ಯವನ್ನು ಹನುಮನು ಇಲ್ಲಿಂದಲೇ ಆರಂಭಿಸಿದನು ಎನ್ನಲಾಗುತ್ತದೆ. ಹುಣ್ಣಿಮೆಯ ದಿನ ಸಾವಿರಾರು ಭಕ್ತರು ಇಲ್ಲಿಗೆ ಭೇಟಿ ನೀಡುತ್ತಾರೆ.
Advertisement
ರಾಮಸೇತು ಅಥವಾ ಆ್ಯಡಮ್ಸ್ ಬ್ರಿಡ್ಜ್ ಎಂದು ಕರೆಯುವ ಈ ಸ್ಥಳವು ರಾಮಾಯಣದ ಅತ್ಯಂತ ಪ್ರಮುಖ ಸ್ಥಳಗಳಲ್ಲಿ ಒಂದು. ಶ್ರೀಲಂಕಾವನ್ನು ತಲುಪಲು ಸಮುದ್ರಕ್ಕೆ ಅಡ್ಡಲಾಗಿ ವಾನರ ಸೇನೆಯ ಸಹಾಯದಿಂದ ರಾಮನು ಈ ಸೇತುವೆಯನ್ನು ನಿರ್ಮಿಸಿದನು. ಭಾರತದ ರಾಮೇಶ್ವರದಿಂದ ಲಂಕಾದ ಮನ್ನಾರ ವರೆಗೆ ನಿರ್ಮಿಸಲಾಗಿದೆ. ಭಾರತವನ್ನು ಶ್ರೀಲಂಕಾದೊಂದಿಗೆ ಸಂಪರ್ಕಿಸುವ ಬಹುಮುಖ್ಯ ಮಾರ್ಗ ಇದಾಗಿದೆ.
ರಾವಣನ ಗುಹೆ, ಯುದ್ಧಭೂಮಿ ಹೀಗೆ ರಾಮಾಯಣಕ್ಕೆ ಸಂಬಂಧಿಸಿದ 50ಕ್ಕೂ ಅಧಿಕ ಸ್ಥಳಗಳನ್ನು ಇಲ್ಲಿ ಗುರುತಿಸಲಾಗಿದೆ. ಇಲ್ಲಿನ ರಾಗ್ಲಾ ಅರಣ್ಯಗಳ ನಡುವೆ ರಾವಣನ ಗುಹೆ ಎಂದು ಹೇಳಲಾಗುವ ಸ್ಥಳದಲ್ಲಿ ರಾವಣನ ಮೃತದೇಹವನ್ನು ಸಂರಕ್ಷಿಸಿ ಇಡಲಾಗಿದೆ. ರಾಮನ ಜೀವನಕ್ಕೆ ಸಂಬಂಧಪಟ್ಟ, ಸಿಂಹಳೀಯ ಭಾಷೆಯಲ್ಲಿ ರಚಿತವಾದ “ಮಲೆರಾಜ್ ಕೀ ಕಥಾ’ವು ಇಲ್ಲಿ ಜನಪ್ರಿಯವಾಗಿದೆ.