Advertisement
ಕೊಲ್ಲೂರಿಗೆ ಆಗಮಿಸಿದ ರನಿಲ್ ವಿಕ್ರಮ ಸಿಂಘೆ ಅವರನ್ನು ಇಲ್ಲಿನಆರ್.ಎನ್. ಶೆಟ್ಟಿ ಅತಿಥಿ ಗೃಹದ ಮುಂಭಾಗ ಉಡುಪಿ ಜಿಲ್ಲಾಧಿಕಾರಿ ಹೆಪ್ಸಿಬಾ ರಾಣಿ ಕೊರ್ಲಪಾಟಿ ಸ್ವಾಗತಿಸಿದರು. ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ನಿಶಾ ಜೇಮ್ಸ್ ಉಪಸ್ಥಿತರಿದ್ದರು.
ಅರೆ ಶಿರೂರಿನಲ್ಲಿ ಸಿದ್ಧತೆ
ಅರೆ ಶಿರೂರಿನ ಹೆಲಿಪ್ಯಾಡ್‌ನಲ್ಲಿಯೂ ಎಲ್ಲ ಸಿದ್ಧತೆ ಬಿಗಿ ಭದ್ರತೆ ವಹಿಸಲಾಗಿತ್ತು. ಮಳೆ ಕಡಿಮೆಯಾಗಿದ್ದರೆ, ಮಂಗಳೂರಿನಿಂದ ಅರೆ ಶಿರೂರಿನವರೆಗೆ ಹೆಲಿಕಾಪ್ಟರ್‌ನಲ್ಲಿ ಬಂದು ಅಲ್ಲಿಂದ ಕೊಲ್ಲೂರಿಗೆ ರಸ್ತೆಯ ಮೂಲಕ ಸಂಚರಿಸಲು ಕೂಡ ಸಿದ್ಧತೆ ಮಾಡಲಾಗಿತ್ತು. ಇಲ್ಲಿ ಹೆಲಿಕಾಪ್ಟರ್ ಇಳಿಯಬಹುದು ಎನ್ನುವ ಸಂದೇಶವನ್ನು ಕೊಟ್ಟರೂ ಕೂಡ ಮಂಗಳೂರಿನಲ್ಲಿ ಭಾರೀ ಮಳೆಯ ಹಿನ್ನೆಲೆಯಲ್ಲಿ ಹೆಲಿಕಾಪ್ಟರ್ ಪಯಣವನ್ನು ಕೈ ಬಿಡಲಾಯಿತು. ಆದರೆ ಕೊಲ್ಲೂರಿನಿಂದ ವಾಪಸ್ ಮಂಗಳೂರಿಗೆ ಅರೆ ಶಿರೂರಿನಿಂದ ಹೆಲಿಕಾಪ್ಟರ್‌ನಲ್ಲಿಯೇ ತೆರಳಿದರು. ಕುಂದಾಪುರ ಉಪ ವಿಭಾಗದ ಸಹಾಯಕ
ಆಯುಕ್ತ ಡಾ| ಎಸ್.ಎಸ್. ಮಧುಕೇಶ್ವರ್ ಇಲ್ಲಿ ಉಸ್ತುವಾರಿ ವಹಿಸಿದ್ದರು.
Related Articles
ಇನ್ನು ಲಂಕಾ ಪ್ರಧಾನಿಯನ್ನು ಸ್ವಾಗತಿ ಸಲು ಕೊಲ್ಲೂರಿಗೆ ಬೈಂದೂರು ಶಾಸಕ
ಬಿ.ಎಂ. ಸುಕುಮಾರ್ ಶೆಟ್ಟಿ ಆಗಮಿಸಿ ದ್ದರು. ದೇವಿಯ ದರ್ಶನ ಪಡೆದು ಹೊರಗೆ ಬರುತ್ತಿದ್ದಂತೆ, ಯಡಿಯೂರಪ್ಪ ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸುತ್ತಾರೆ ಎನ್ನುವ ಸೂಚನೆ ಸಿಗುತ್ತಿದ್ದಂತೆ ಬೆಂಗಳೂರಿಗೆ ತೆರಳುವ ಸಲುವಾಗಿ
ಶಾಸಕರು ದಿಢೀರ್ ನಿರ್ಗಮಿಸಿದರು.
Advertisement
ಅಂಗಡಿ – ಮುಂಗಟ್ಟು ಬಂದ್ಲಂಕಾ ಪ್ರಧಾನಿ ಭೇಟಿಯ ಸಲು ವಾಗಿ ಭದ್ರತಾ ಕಾರಣಕ್ಕೆ ಕೊಲ್ಲೂರು ದೇವಸ್ಥಾನದ ಆಸುಪಾಸಿನಲ್ಲಿರುವ ಎಲ್ಲ ಅಂಗಡಿ – ಮುಂಗಟ್ಟು ಬೆಳಗ್ಗಿನಿಂದ, ತೆರಳುವವರೆಗೆ ಮುಚ್ಚಲಾಗಿತ್ತು. ಇದಲ್ಲದೆ ಬೆಳಗ್ಗಿನಿಂದ ಮಧ್ಯಾಹ್ನದವರೆಗೆ ಭಕ್ತರ ಪ್ರವೇಶಕ್ಕೆ ನಿರ್ಬಂಧ ಹೇರಲಾಗಿತ್ತು. 2ನೇ ಭೇಟಿ
ರನಿಲ್ ವಿಕ್ರಮ ಸಿಂಘೆ ಪ್ರಧಾನಿಯಾದ ಬಳಿಕ ಕೊಲ್ಲೂರಿಗೆ ಇದು ಅವರ ಎರಡನೇ ಭೇಟಿಯಾಗಿದೆ. ದೇವಸ್ಥಾನದ ಕಾರ್ಯನಿರ್ವಹಣಾಧಿಕಾರಿ ಹಾಲಪ್ಪ, ವ್ಯವಸ್ಥಾಪನ ಸಮಿತಿ ಅಧ್ಯಕ್ಷರು, ಹರೀಶ ಕುಮಾರ್ ಶೆಟ್ಟಿ, ಸಮಿತಿ ಸದಸ್ಯರು, ಅರ್ಚಕ ವೃಂದದವರು ಇದ್ದರು. ಸಮಯ ವೇಳಾಪಟ್ಟಿ
ಬೆಳಗ್ಗೆ 11.10 ಕ್ಕೆ ಅತಿಥಿ ಗೃಹಕ್ಕೆ ಆಗಮನ.
ಬೆಳಗ್ಗೆ 11.30 ಕ್ಕೆ ದೇವಸ್ಥಾನದ ದರ್ಶನಕ್ಕೆ ಆಗಮನ.
ಮಧ್ಯಾಹ್ನ 12.30ಕ್ಕೆ ದೇವಸ್ಥಾನದಿಂದ ಪೂಜೆ ಮುಗಿಸಿ ನಿರ್ಗಮನ.
ಮಧ್ಯಾಹ್ನ ಮಧ್ಯಾಹ್ನ 2.50 ಕ್ಕೆ ಅರೆ ಶಿರೂರಿನಿಂದ ಹೆಲಿಕಾಪ್ಟರ್ ಮೂಲಕ ನಿರ್ಗಮನ. ಫೋಟೋ, ವೀಡಿಯೋಗೆ ನಿರ್ಬಂಧ
ಶ್ರೀಲಂಕಾ ಪ್ರಧಾನಿ ಭೇಟಿ ಕುರಿತು ಮಾಧ್ಯಮಗಳಿಗೆ ಚಿತ್ರ ಹಾಗೂ ವಿಡಿಯೋ ಚಿತ್ರಿಕರಿಸಲು ಜಿಲ್ಲಾಡಳಿತದಿಂದ ನಿರ್ಬಂಧ ವಿಧಿಸಲಾಗಿತ್ತು. ಹೈಕಮಿಷನರ್ ಕಚೇರಿಯಿಂದಲೇ ಉಡುಪಿ ಜಿಲ್ಲಾಡಳಿತಕ್ಕೆ ಸ್ಪಷ್ಟ ಆದೇಶ ಬಂದ ಹಿನ್ನೆಲೆಯಲ್ಲಿ ಈ ಕ್ರಮಗಳನ್ನು ಅನುಸರಿಸಲಾಗಿದೆ ಎನ್ನುವುದಾಗಿ ಪತ್ರಕರ್ತರಿಗೆ ಡಿಸಿ ತಿಳಿಸಿದ್ದಾರೆ. ಬಿಗಿ ಭದ್ರತೆ
ಶ್ರೀಲಂಕಾ ಪ್ರಧಾನಿ ಮೇಲೆ ಉಗ್ರರ ದಾಳಿ ಭೀತಿ ಹಿನ್ನೆಲೆಯಲ್ಲಿ ಹಿಂದಿನ
ಭೇಟಿಗಿಂತಲೂ ಈ ಬಾರಿ ಹೆಚ್ಚಿನ ಭದ್ರತೆಯನ್ನು ಜಿಲ್ಲಾಡಳಿತ, ಪೊಲೀಸ್ ಇಲಾಖೆಯಿಂದ ಮಾಡಲಾಗಿತ್ತು. ಸಂಚರಿಸುವ ದಾರಿಯುದ್ದಕ್ಕೂ ಅಲ್ಲಲ್ಲಿ ಪೊಲೀಸರನ್ನು ನಿಯೋಜಿಸಲಾಗಿತ್ತು. ಪ್ರಮುಖ ಜಂಕ್ಷನ್, ಪೇಟೆಗಳಲ್ಲಿ, ರಸ್ತೆ ತಿರುವು, ಆಯಕಟ್ಟಿನ ಪ್ರದೇಶಗಳಲ್ಲಿ ಪೊಲೀಸ್ ಸಿಬಂದಿಯನ್ನು ಭದ್ರತೆಗಾಗಿ ನಿಲ್ಲಿಸಲಾಗಿತ್ತು. ಹೆಚ್ಚುವರಿ ಎಸ್ಪಿ ಕುಮಾರಚಂದ್ರ, ಡಿವೈಎಸ್‌ಪಿಗಳಾದ ಬಿ.ಪಿ. ದಿನೇಶ್ ಕುಮಾರ್, ಜೈಶಂಕರ್, ವೃತ್ತ ನಿರೀಕ್ಷಕರು, ಎಸ್‌ಐಗಳು ಭದ್ರತಾ ಕಾರ್ಯದಲ್ಲಿ ಭಾಗಿಯಾಗಿದ್ದರು.