Advertisement

ಶ್ರೀಲಂಕಾ ಸಂಸತ್‌ ವಿಸರ್ಜನೆ; ಏ.25ಕ್ಕೆ ಚುನಾವಣೆ ಘೋಷಣೆ

10:13 AM Mar 04, 2020 | sudhir |

ಕೊಲೊಂಬೋ: ನಿರೀಕ್ಷೆಯಂತೆಯೇ ಆರು ತಿಂಗಳ ಮೊದಲು ಶ್ರೀಲಂಕಾ ಸಂಸತ್‌ ವಿಸರ್ಜನೆಯಾಗಿದೆ. ಹೊಸ ಚುನಾವಣೆ ಏ.25ರಂದು ನಡೆಯಲಿದೆ. ಈ ಬಗ್ಗೆ ಅಧ್ಯಕ್ಷ ಗೋಟಬಯ ರಾಜಪಕ್ಸ ಆದೇಶ ಹೊರಡಿಸಿದ್ದಾರೆ. 2015ರ ಸೆಪ್ಟೆಂಬರ್‌ನಲ್ಲಿ ಚುನಾವಣೆ ನಡೆದಿತ್ತು. ಶ್ರೀಲಂಕಾ ಕಾನೂನಿನ ಅನ್ವಯ ಕನಿಷ್ಠ ನಾಲ್ಕೂವರೆ ವರ್ಷ ಪೂರ್ತಿಗೊಂಡಿದ್ದರೆ, ಸಂಸತ್‌ ವಿಸರ್ಜಿಸಿ ಹೊಸ ಚುನಾವಣೆ ನಡೆಸಲು ಅವಕಾಶ ಉಂಟು. ದ್ವೀಪ ರಾಷ್ಟ್ರದ ಚುನಾವಣಾ ಆಯೋಗ ಕೂಡ ಚುನಾವಣೆ ನಡೆಸುವ ಬಗ್ಗೆ ಸರ್ಕಾರದಿಂದ ಮನವಿ ಬಂದಿರುವುದನ್ನು ಖಚಿತಪಡಿಸಿದೆ. ಪ್ರಧಾನಿ ಮಹಿಂದ ರಾಜಪಕ್ಸ ಶ್ರೀಲಂಕ ಪೊದುಜನ ಪೆರುಮನ ಪಕ್ಷವನ್ನು ಚುನಾವಣೆಯಲ್ಲಿ ಮುನ್ನಡೆಸುವುದು ಖಚಿತವಾಗಿದೆ. ಪ್ರತಿಪಕ್ಷ ಯುನೈಟೆಡ್‌ ನ್ಯಾಷನಲ್‌ ಪಾರ್ಟಿ ಆಂತರಿಕ ಭಿನ್ನಮತದಿಂದ ತೊಳಲಾಡುತ್ತಿರುವುದರಿಂದ ರಾಜಪಕ್ಸ ನೇತೃತ್ವದ ಪಕ್ಷವೇ ಚುನಾವಣೆಯಲ್ಲಿ ಗೆಲ್ಲುವ ಸಾಧ್ಯತೆಯ ಬಗ್ಗೆ ದ್ವೀಪ ರಾಷ್ಟ್ರದಲ್ಲಿ ಚರ್ಚೆಗಳು ನಡೆದಿವೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next