Advertisement

ಗ್ಯಾಲರಿ ಸ್ವಚ್ಚಗೊಳಿಸಿದ ಲಂಕಾ ಕ್ರಿಕೆಟ್‌ ಅಭಿಮಾನಿಗಳು

06:00 AM Aug 09, 2018 | |

ಪಲ್ಲೆಕಿಲೆ: ದಕ್ಷಿಣ ಆಫ್ರಿಕಾ ವಿರುದ್ಧ 3ನೇ ಏಕದಿನದಲ್ಲಿ ಆತಿಥೇಯ ಶ್ರೀಲಂಕಾ ಸೋತು ಸರಣಿ ಕಳೆದುಕೊಂಡದ್ದು ಹಳೆಯ ವಿಷಯ. ಆದರೆ ಈ ಸೋಲಿನ ನೋವಿನ ನಡುವೆಯೂ ಶ್ರೀಲಂಕಾ ಅಭಿಮಾನಿಗಳು ಎಲ್ಲರೂ ಮೆಚ್ಚುವ ಕಾರ್ಯವೊಂದನ್ನು ಮಾಡಿದ್ದಾರೆ. ಪಂದ್ಯದ ಅನಂತರ ಪ್ರೇಕ್ಷಕರ ಗ್ಯಾಲರಿಯನ್ನು ಸ್ವಚ್ಚ ಮಾಡಿದ್ದಾರೆ.

Advertisement

ಈ ವೀಡಿಯೋವನ್ನು ಶ್ರೀಲಂಕಾ ಕ್ರಿಕೆಟ್‌ ಮಂಡಳಿ ಪ್ರಕಟಿಸಿದೆ. ಈ ವರ್ಷದ ಕ್ರೀಡಾಕೂಟದಲ್ಲಿ ಇಂಥ ಘಟನೆ ನಡೆದದ್ದು ಇದೇ ಮೊದಲಲ್ಲ. ಫಿಫಾ ವಿಶ್ವಕಪ್‌ ಸಂದರ್ಭದಲ್ಲಿ ಜಪಾನ್‌ ತಂಡ 16ರ ಸುತ್ತಿನಲ್ಲೇ ಹೊರಬಿದ್ದಾಗ ಜಪಾನ್‌ ಅಭಿಮಾನಿಗಳೂ ಗ್ಯಾಲರಿಯನ್ನು ಸ್ವಚ್ಚ ಮಾಡಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next