ಸಿಡ್ನಿ: ಲೈಂಗಿನ ದೌರ್ಜನ್ಯ ಪ್ರಕರಣದಡಿಯಲ್ಲಿ ಸಿಲುಕಿ ಆಸ್ಟ್ರೇಲಿಯಾದಲ್ಲಿ ಪೊಲೀಸರ ಅತಿಥಿಯಾಗಿರುವ ಶ್ರೀಲಂಕಾ ಆಟಗಾರ ದನುಷ್ಕಾ ಗುಣತಿಲಕ ಅವರನ್ನು ಲಂಕಾ ಕ್ರಿಕೆಟ್ ನಿಂದ ಅಮಾನತು ಮಾಡಲಾಗಿದೆ. ಶ್ರೀಲಂಕಾ ಕ್ರಿಕೆಟ್ ಮಂಡಳಿಯ ಕಾರ್ಯಕಾರಿ ಸಮಿತಿಯು ಈ ಬಗ್ಗೆ ಇಂದು ತೀರ್ಮಾನಿಸಿದೆ.
ತಕ್ಷಣವೇ ಜಾರಿಗೆ ಬರುವಂತೆ ರಾಷ್ಟ್ರೀಯ ಆಟಗಾರ ದನುಷ್ಕಾ ಗುಣತಿಲಕ ಅವರನ್ನು ಎಲ್ಲಾ ಮಾದರಿಯ ಕ್ರಿಕೆಟ್‌ನಿಂದ ಅಮಾನತುಗೊಳಿಸಲು ಮಂಡಳಿ ನಿರ್ಧರಿಸಿದೆ. ಅವರನ್ನು ಯಾವುದೇ ಆಯ್ಕೆಗಳಿಗೆ ಪರಿಗಣಿಸುವುದಿಲ್ಲ ಎಂದು ವರದಿ ತಿಳಿಸಿದೆ.
ಲಂಕಾದ ಕ್ರಿಕೆಟ್ ಆಟಗಾರ ದನುಷ್ಕಾ ಗುಣತಿಲಕ ಅವರನ್ನು ರವಿವಾರ ಬೆಳಗ್ಗೆ ಸಿಡ್ನಿ ಪೊಲೀಸರು ಟೀಂ ಹೋಟೆಲ್ ನಿಂದ ಬಂಧಿಸಿದ್ದರು. ಮಹಿಳೆಯೊಬ್ಬರಿಗೆ ಲೈಂಗಿಕವಾಗಿ ದೌರ್ಜನ್ಯ ನಡೆಸಿದ ಪ್ರಕರಣದಲ್ಲಿ ಗುಣತಿಲಕ ಬಂಧನವಾಗಿದೆ. ವಿಶ್ವಕಪ್ ನಿಂದ ಹೊರಬಿದ್ದಿರುವ ಲಂಕಾ ತಂಡವು ಗುಣತಿಲಕ ಅವರನ್ನು ಬಿಟ್ಟು ಶ್ರೀಲಂಕಾಗೆ ಪ್ರಯಾಣಿಸಿದೆ.
ಇದನ್ನೂ ಓದಿ:ಕಳಸ ತಾಲೂಕಿನ ರಸ್ತೆ ಅವ್ಯವಸ್ಥೆ; ಸಾಮಾಜಿಕ ಜಾಲತಾಣದಲ್ಲಿ ವ್ಯಂಗ್ಯ ಚಿತ್ರಗಳು ವೈರಲ್
ಗುಣತಿಲಕ ಅವರನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದ್ದು, ಅವರಿಗೆ ಜಾಮೀನು ನಿರಾಕರಿಸಲಾಗಿದೆ ಎಂದು ವರದಿಯಾಗಿದೆ.
ದನುಷ್ಕ ಗುಣತಿಲಕ ಮತ್ತು ಅತ್ಯಾಚಾರ ಆರೋಪ ಮಾಡಿರುವ ಮಹಿಳೆಯ ನಡುವೆ ಡೇಟಿಂಗ್ ಆ್ಯಪ್ ವೊಂದರಲ್ಲಿ ಬಹಳ ದಿನಗಳಿಂದ ಮಾತುಕತೆ ನಡೆದಿದೆ. ನ.2ರಂದು ರೋಸ್ ಬೇನಲ್ಲಿರುವ ನಿವಾಸವೊಂದರಲ್ಲಿ ಇಬ್ಬರೂ ಒಟ್ಟಾಗಿದ್ದಾರೆ. ಆ ವೇಳೆ ಗುಣತಿಲಕ ತನ್ನನ್ನು ಅತ್ಯಾಚಾರಕ್ಕೊಳಪಡಿಸಿದ್ದಾರೆನ್ನುವುದು ಮಹಿಳೆಯ ಆರೋಪ.