ಕೊಲಂಬೊ: ಇಲ್ಲಿನ ಆರ್ ಪ್ರೇಮದಾಸ ಕ್ರೀಡಾಂಗಣದಲ್ಲಿ ಗುರುವಾರ ನಡೆದ ಜಿಂಬಾಬ್ವೆ ವಿರುದ್ಧದ ಮೂರನೇ ಏಕದಿನ ಪಂದ್ಯದಲ್ಲಿ ಪ್ರಾಬಲ್ಯ ಸಾಧಿಸಿದ ಶ್ರೀಲಂಕಾ ಎಂಟು ವಿಕೆಟ್‌ಗಳ ಭರ್ಜರಿ ಜಯ ಸಾಧಿಸಿ ಮೂರು ಪಂದ್ಯಗಳ ಸರಣಿಯನ್ನು ವಶಪಡಿಸಿಕೊಂಡಿದೆ.
ಕೊಲಂಬೊದಲ್ಲಿ ಮಳೆಯು ನಿರಂತರ ಅಡಚಣೆಯಿಂದಾಗಿ ಪಂದ್ಯವನ್ನು 27 ಓವರ್‌ಗಳಿಗೆ ಇಳಿಸಲಾಯಿತು. ವನಿಂದು ಹಸರಂಗಾ ಅವರು ಏಳು ವಿಕೆಟ್‌ಗಳ ಸಾಧನೆ ಮೂಲಕ ಗಮನ ಸೆಳೆದರು.
ಹಸರಂಗಾ ಆರು ತಿಂಗಳ ಅಂತರದ ನಂತರ ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ಮರಳಿದರು. ಕೇವಲ 96 ರನ್‌ಗಳಿಗೆ ಜಿಂಬಾಬ್ವೆಯನ್ನು ಆಲೌಟ್ ಮಾಡುವಲ್ಲಿ ಪ್ರಮುಖ ಪಾತ್ರ ವಹಿಸಿದರು. 19ಕ್ಕೆ ಏಳು ವಿಕೆಟ್‌ಗಳನ್ನು ಕಬಳಿಸಿದರು. ನಂತರ ನಾಯಕ ಕುಸಾಲ್ ಮೆಂಡಿಸ್ 51 ರಲ್ಲಿ 66* ರನ್ ಕೊಡುಗೆ ನೀಡಿ ಸುಲಭ ಜಯ ದಾಖಲಿಸಿ 2-0 ಅಂತರದಿಂದ ಸರಣಿಯನ್ನು ವಶ ಪಡಿಸಿಕೊಂಡರು. ಮೊದಲ ಪಂದ್ಯ ಮಳೆಯಿಂದಾಗಿ ರದ್ದಾಗಿತ್ತು.
ಸ್ಕೋರ್ ಪಟ್ಟಿ
ಜಿಂಬಾಬ್ವೆ96 (22.5)
ಶ್ರೀಲಂಕಾ 97/2 (16.4)