Advertisement
ಉಪುಲ್ ತರಂಗ (9) ಮತ್ತು ಕುಸಲ್ ಮೆಂಡಿಸ್ (0) 13 ರನ್ ಆಗುವಷ್ಟರಲ್ಲಿ ಔಟಾಗಿ ತೆರಳಿದರು. ಕುಸಲ್ ಪೆರೆರ (12) ಕೂಡ ಹೆಚ್ಚು ಹೊತ್ತು ನಿಲ್ಲಲಿಲ್ಲ. ಈ ಸಂದರ್ಭದಲ್ಲಿ ನಿರೋಷನ್ ಡಿಕ್ವೆಲ್ಲ ಮತ್ತು ನಾಯಕ ಏಂಜೆಲೊ ಮ್ಯಾಥ್ಯೂಸ್ ಸೇರಿಕೊಂಡು ತಂಡವನ್ನು ಆಧರಿಸಿತೊಡಗಿದರು. ಇವರಿಂದ 4ನೇ ವಿಕೆಟಿಗೆ 67 ರನ್ ಒಟ್ಟುಗೂಡಿತು. ಮ್ಯಾಥ್ಯೂಸ್ ಸರ್ವಾಧಿಕ 79 ರನ್ ಹೊಡೆದು ಅಜೇಯರಾಗಿ ಉಳಿದರೆ (111 ಎಸೆತ, 6 ಬೌಂಡರಿ), ಡಿಕ್ವೆಲ್ಲ 69 ರನ್ ಮಾಡಿದರು (76 ಎಸೆತ, 10 ಬೌಂಡರಿ). ಏಂಜೆಲೊ ಮ್ಯಾಥ್ಯೂಸ್ ಒಂದೆಡೆ ಕ್ರೀಸ್ ಆಕ್ರಮಿಸಿಕೊಂಡರೂ ಡಿಕ್ವೆಲ್ಲ ನಿರ್ಗಮನದ ಬಳಿಕ ಅವರಿಗೆ ಯಾರಿಂದಲೂ ಸೂಕ್ತ ಬೆಂಬಲ ಲಭಿಸಲಿಲ್ಲ.
ದಕ್ಷಿಣ ಆಫ್ರಿಕಾ ಪರ ಲುಂಗಿ ಎನ್‌ಗಿಡಿ ಮತ್ತು ಆ್ಯಂಡಿಲ್ ಫೆಲೊಕ್ವಾಯೊ ತಲಾ 3 ವಿಕೆಟ್ ಹಾರಿಸಿದರು. ರಬಾಡ ಮತ್ತು ಮುಲ್ಡರ್ ಒಂದೊಂದು ವಿಕೆಟ್ ಕಿತ್ತರು. 246 ರನ್ ಗುರಿ ಚೇಸ್ ಮಾಡಿದ ದ. ಆಫ್ರಿಕಾ ಆರಂಭಿಕರಾದ ಡಿ. ಕಾಕ್ (87) ಮತ್ತು ಹಾಶಿಮ್ ಆಮ್ಲ (43) ಉತ್ತಮ ಜೊತೆಯಾಟದಿಂದ ಸುಲಭವಾಗಿಯೇ ಗುರಿ ಬೆನ್ನಟ್ಟಿತು. ನಾಯಕ ಫ್ಲೆಸಿಸ್ (49 ) ಡುಮಿನಿ ( 32 ) ಉಪಯುಕ್ತ ಆಟದ ನೆರವಿನಿಂದ ಕೇವಲ 42.5 ಓವರ್ ಗಳಲ್ಲಿ ವಿಜಯದ ನಗೆ ಬೀರಿತು. ಶ್ರೀಲಂಕಾ ಪರ ಅಖಿಲ ಧನಂಜಯ ೩ ವಿಕೆಟ್ ಪಡೆದರು. ಡಿ. ಕಾಕ್ ಪಂದ್ಯ ಶ್ರೇಷ್ಠಪ್ರಶಸ್ತಿ ಪಡೆದರು.
Related Articles
Advertisement