Advertisement

ಏಷ್ಯಾ ಕಪ್‌ ಕ್ರಿಕೆಟ್‌: ಶ್ರೀಲಂಕಾ ಸೂಪರ್‌ 4 ಹಂತಕ್ಕೆ 

01:46 AM Sep 02, 2022 | Team Udayavani |

ದುಬಾೖ: ಆಸಿತಾ ಫೆರ್ನಾಂಡೊ ಅವರ ಅಸಾಧಾರಣ ಆಟದ ಪ್ರದರ್ಶನದಿಂದಾಗಿ ಶ್ರೀಲಂಕಾ ತಂಡವು ಗುರುವಾರ ನಡೆದ ಲೀಗ್‌ ಪಂದ್ಯದಲ್ಲಿ ರೋಚಕವಾಗಿ ಹೋರಾಡಿ ಬಾಂಗ್ಲಾದೇಶವನ್ನು 2 ವಿಕೆಟ್‌ಗಳಿಂದ ಸೋಲಿಸಿ ಏಷ್ಯಾ ಕಪ್‌ ಕ್ರಿಕೆಟ್‌ ಕೂಟದ ಸೂಪರ್‌ ಫೋರ್ ಹಂತಕ್ಕೇರಿತು.

Advertisement

ಕೊನೆ ಹಂತದಲ್ಲಿ ಆಸಿತಾ ಫೆರ್ನಾಂಡೊ ಎರಡು ಬೌಂಡರಿ ಬಾರಿಸಿದ್ದರಿಂದ ಶ್ರೀಲಂಕಾ ತಂಡವು 19.2 ಓವರ್‌ಗಳಲ್ಲಿ 8 ವಿಕೆಟಿಗೆ 184 ರನ್‌ ಗಳಿಸಿ ಜಯಭೇರಿ ಬಾರಿಸಿತು. ಈ ಮೊದಲು ಬಾಂಗ್ಲಾದೇಶವು 7 ವಿಕೆಟಿಗೆ 183 ರನ್‌ ಗಳಿಸಿತ್ತು.

ಕುಸಲ್‌ ಮೆಂಡಿಸ್‌ (60 ರನ್‌) ಮತ್ತು ನಾಯಕ ದಾಸುನ್‌ ಶನಕ (45) ಉತ್ತಮವಾಗಿ ಆಡಿದ್ದರೂ ತಂಡಕ್ಕೆ ಗೆಲ್ಲುವ ಸಾಧ್ಯತೆ ಕಷ್ಟವಿತ್ತು. ಆದರೆ ಆಸಿತಾ ಫೆರ್ನಾಂಡೊ 19ನೇ ಓವರಿನ ಕೊನೆಯ ಮತ್ತು 20ನೇ ಓವರಿನ ಎರಡನೇ  ಎಸೆತದಲ್ಲಿ ಬೌಂಡರಿ ಬಾರಿಸಿದ್ದರಿಂದ ತಂಡದ ಗೆಲುವು ಖಚಿತವಾಯಿತು.

ಈ ಗೆಲುವಿನಿಂದ ಶ್ರೀಲಂಕಾ ತಂಡವು ಏಷ್ಯಾ ಕಪ್‌ನಲ್ಲಿ ತನ್ನ ಆರು ಪಂದ್ಯಗಳ ಸೋಲಿನ ಸರಮಾಲೆಯನ್ನು ಅಂತ್ಯಗೊಳಿಸಿತು. ತಂಡವು 2016ರಲ್ಲಿ ಯುಎಇ ತಂಡವನ್ನು ಸೋಲಿಸಿದ ಬಳಿಕ ಇದೇ ಮೊದಲ ಬಾರಿ ಗೆಲುವು ಕಂಡಿದೆ.

ಈ ಪಂದ್ಯದ ವೇಳೆ ಶಕಿಬ್‌ ಅಲ್‌ ಹಸನ್‌ ಟಿ20 ಕ್ರಿಕೆಟ್‌ನಲ್ಲಿ 6 ಸಾವಿರ ರನ್‌ ಪೂರೈಸಿದ ಬಾಂಗ್ಲಾದ ಕೇವಲ 2ನೇ ಕ್ರಿಕೆಟಿಗನೆಂಬ ಹೆಗ್ಗಳಿಕೆಗೆ ಪಾತ್ರರಾದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next