Advertisement

Sri Lanka Team; ಭಾರತ ಕ್ರಿಕೆಟ್‌ ಸರಣಿಗೆ ಜಯಸೂರ್ಯ ಕೋಚ್‌

10:56 PM Jul 08, 2024 | Team Udayavani |

ಕೊಲಂಬೊ: ಪ್ರವಾಸಿ ಭಾರತದೆದುರಿನ ಕ್ರಿಕೆಟ್‌ ಸರಣಿಯ ವೇಳೆ ಮಾಜಿ ನಾಯಕ ಸನತ್‌ ಜಯಸೂರ್ಯ ಅವರನ್ನು ಶ್ರೀಲಂಕಾ ತಂಡದ ಹಂಗಾಮಿ ಕೋಚ್‌ ಆಗಿ ನೇಮಿಸಲಾಗಿದೆ.

Advertisement

ಟಿ20 ವಿಶ್ವಕಪ್‌ ವೈಫ‌ಲ್ಯದ ಕಾರಣ ಇಂಗ್ಲೆಂಡ್‌ನ‌ ಕ್ರಿಸ್‌ ಸಿಲ್ವರ್‌ವುಡ್‌ ಕಳೆದ ವಾರ ಶ್ರೀಲಂಕಾ ತಂಡದ ಕೋಚ್‌ ಹುದ್ದೆಗೆ ರಾಜೀನಾಮೆ ನೀಡಿದ್ದರು. ನೂತನ ಕೋಚ್‌ ಆಯ್ಕೆಯಲ್ಲಿ ವಿಳಂಬವಾಗುವ ಸಾಧ್ಯತೆ ಇರುವುದರಿಂದ ಜಯಸೂರ್ಯ ಅವರನ್ನು ತಾತ್ಕಾಲಿಕವಾಗಿ ಈ ಹುದ್ದೆಗೆ ಆರಿಸಲಾಯಿತು. ಅನಂತರದ ಇಂಗ್ಲೆಂಡ್‌ ಪ್ರವಾಸದ ವೇಳೆಯೂ ಇವರು ಕೋಚ್‌ ಆಗಿ ಮುಂದುವರಿಯುವರು. ಜಯಸೂರ್ಯ ಇದಕ್ಕೂ ಮುನ್ನ ಶ್ರೀಲಂಕಾ ರಾಷ್ಟ್ರೀಯ ಆಯ್ಕೆ ಸಮಿತಿಯ ಅಧ್ಯಕ್ಷರಾಗಿಯೂ ಕರ್ತವ್ಯ ನಿಭಾಯಿಸಿದ್ದರು.

ಜು. 27ರಂದು ಸರಣಿ ಆರಂಭವಾಗಲಿದ್ದು, ಭಾರತ-ಶ್ರೀಲಂಕಾ 3 ಟಿ20 ಹಾಗೂ 3 ಏಕದಿನ ಪಂದ್ಯಗಳಲ್ಲಿ ಮುಖಾಮುಖಿ ಆಗಲಿವೆ.

Advertisement

Udayavani is now on Telegram. Click here to join our channel and stay updated with the latest news.

Next