Advertisement
ಸೂರ್ಯಕುಮಾರ್ ಯಾದವ್ ನೇತೃತ್ವದ ಭಾರತ ತಂಡ ಟಿ20 ಸರಣಿಯಲ್ಲಿ ಅಮೋಘ ನಿರ್ವಹಣೆ ನೀಡಿತಲ್ಲದೇ 3-0 ಅಂತರದಿಂದ ಗೆದ್ದು ಪ್ರಾಬಲ್ಯ ಮೆರೆದಿತ್ತು. ಇದೀಗ ವಿಶ್ವಕಪ್ ವಿಜೇತ ತಂಡದ ನಾಯಕರೂ ಆಗಿರುವ ರೋಹಿತ್ ಶರ್ಮ ನೇತೃತ್ವದ ಭಾರತೀಯ ತಂಡ ಏಕದಿನ ಸರಣಿಯೂಲ್ಲ ಸಂಪೂರ್ಣ ಹಿಡಿತ ಸಾಧಿಸಲು ಹಾತೊರೆಯುತ್ತಿದೆಯಲ್ಲದೇ ಗೆಲುವಿನ ಅಭಿಯಾನ ಮುಂದುವರಿಸುವ ಗುರಿ ಇಟ್ಟುಕೊಂಡಿದೆ. ಇದು ಹೊಸ ಕೋಚ್ ಗೌತಮ್ ಗಂಭೀರ್ ಅವರ ಮಾರ್ಗದರ್ಶನದಲ್ಲಿ ನಡೆಯಲಿರುವ ಮೊದಲ ಏಕದಿನ ಸರಣಿಯಾಗಿದೆ.
Related Articles
ಇದೇ ವೇಳೆ ಚರಿತ ಅಸಲಂಕ ನೇತೃತ್ವದ ಶ್ರೀಲಂಕಾ ತಂಡ ಗಾಯದ ಸಮಸ್ಯೆಯಿಂದ ಬಳಲುತ್ತಿದ್ದಾರೆ. ಗಾಯಗೊಂಡಿರುವ ವೇಗಿಗಳಾದ ಮತೀಷ ಪತಿರಣ ಮತ್ತು ದಿಲ್ಶನ್ ಮಧುಶಂಕ ಹೊರಬಿದ್ದಿರುವುದರಿಂದ ತಂಡಕ್ಕೆ ದೊಡ್ಡ ಹೊಡೆತ ಬಿದ್ದಿದೆ. ತಂಡದ ಫೀಲ್ಡಿಂಗ್ ಅಭ್ಯಾಸದ ವೇಳೆ ಮಧುಶಂಕ ಅವರ ಎಡ ಕಾಲಿಗೆ ನೋವಾಯಿತು. ಭಾರತ ವಿರುದ್ಧದ ಮೂರನೇ ಟಿ20 ಪಂದ್ಯದ ವೇಳೆ ಚೆಂಡನ್ನು ಹಾರಿ ಹಿಡಿಯುವ ವೇಳೆ ಪತಿರಣ ತೀವ್ರ ಗಾಯೊಂಡರು. ಆ ಪಂದ್ಯದಲ್ಲಿ ಅವರು ಬೌಲಿಂಗ್ ಮಾಡಿಲ್ಲ.
Advertisement
ವಿಕೆಟ್ ಹಿಂದುಗಡೆ ಉತ್ತಮ ನಿರ್ವಹಣೆ ನೀಡುತ್ತಿರುವ ಕೆಎಲ್ ರಾಹುಲ್ ಮತ್ತು ರಿಷಭ್ ಪಂತ್ ಏಕದಿನ ತಂಡದಲ್ಲಿದ್ದಾರೆ. ಏಕದಿನ ಸರಣಿ ವೇಳೆ ಇವರಿಬ್ಬರಲ್ಲಿ ಯಾರನ್ನು ವಿಕೆಟ್‌ಕೀಪಿಂಗ್ ನಿರ್ವಹಣೆಗೆ ಆಯ್ಕೆ ಮಾಡಲು ಗಂಭೀರ್ ನೇತೃತ್ವದ ಭಾರತೀಯ ತಂಡ ಚಿಂತನೆ ನಡೆಸುತ್ತಿದೆ. ಪಂತ್ ಅವರಿಗೆ ಹೋಲಿಸಿದರೆ ಕೆಎಲ್ ರಾಹುಲ್ ವಿಕೆಟ್ ಹಿಂದುಗಡೆ ಮತ್ತು ಬ್ಯಾಟಿಂಗ್‌ನಲ್ಲೂ ಗಮನಾರ್ಹ ನಿರ್ವಹಣೆ ನೀಡಿದ್ದಾರೆ. ಸ್ಥಳ: ಕೊಲಂಬೊ
ಆರಂಭ: ಮಧ್ಯಾಹ್ನ 2.30
ಪ್ರಸಾರ: ಸೋನಿ ಸ್ಪೋರ್ಟ್ಸ್