Advertisement

2ನೇ ಟೆಸ್ಟ್‌ ಲಂಚ್‌ : ಟಾಸ್‌ ಗೆದ್ದ ಲಂಕಾ 47ಕ್ಕೆ 2 ವಿಕೆಟ್‌

12:07 PM Nov 24, 2017 | Team Udayavani |

ನಾಗ್ಪುರ : ಇಂದಿಲ್ಲಿ ಆರಂಭಗೊಂಡ ಪ್ರವಾಸಿ ಲಂಕಾ ಎದುರಿನ ಎರಡನೇ ಟೆಸ್ಟ್‌ ಪಂದ್ಯದ ಮೊದಲ ದಿನವಾದ ಇಂದು ಶುಕ್ರವಾರ ಟಾಸ್‌ ಗೆದ್ದು ಬ್ಯಾಟಿಂಗ್‌ ಆಯ್ದುಕೊಂಡ ಲಂಕಾ ಭೋಜನ ವಿರಾಮಕ್ಕೆ 47ರನ್‌ ಗಳಿಸುವಷ್ಟರಲ್ಲಿ ತನ್ನೆರಡು ವಿಕೆಟ್‌ಗಳನ್ನು ಕಳೆದುಕೊಂಡಿತು.

Advertisement

ಭೋಜನ ವಿರಾಮ ಘೋಷಣೆಯಾದಾಗ ಕರುಣರತ್ನೆ 82 ಎಸೆತ ಎದುರಿಸಿ 21 ರನ್‌ಗಳೊಂದಿಗೆ ಹಾಗೂ ಏಂಜಲೋ ಮ್ಯಾಥ್ಯೂಸ್‌ 1 ರನ್‌ ನೊಂದಿಗೆ ಬ್ಯಾಟಿಂಗ್‌ ಮಾಡುತ್ತಿದ್ದರು. 

ಲಂಕೆಯ ಸಮರವಿಕ್ರಮ 13 ಮತ್ತು ಲಾಹಿರು ತಿರಿಮನ್ನೆ 9 ರನ್‌ ಗೆ, ಇಶಾಂತ್‌ ಶರ್ಮಾ ಮತ್ತು ರವಿಚಂದ್ರನ್‌ ಅಶ್ವಿ‌ನ್‌ಗೆ ಬಲಿಯಾದರು. 

ಆರಂಭಕಾರ ದಿಮುತ ಕರುಣರತ್ನೆ ಅವರಿಗೆ ಭಾರತೀಯ ಕ್ಷೇತ್ರ ರಕ್ಷಕರಿಂದ ಎರಡು ಜೀವದಾನ ದೊರಕಿತು. 

Advertisement

Udayavani is now on Telegram. Click here to join our channel and stay updated with the latest news.

Next