Advertisement

Match fixing: ಭಾರತದ ಪ್ರಜೆಗಳಿಬ್ಬರ ಪಾಸ್‌ಪೋರ್ಟ್‌ ವಶಕ್ಕೆ ಆದೇಶ

08:03 AM May 17, 2024 | Team Udayavani |

ಕೊಲಂಬೊ: ಲೆಜೆಂಡ್ಸ್‌ ಕ್ರಿಕೆಟ್‌ ಲೀಗ್‌ನಲ್ಲಿ ಮ್ಯಾಚ್‌ಫಿಕ್ಸಿಂಗ್‌ ನಡೆಸಿದ ಆರೋಪ ಎದುರಿಸುತ್ತಿರುವ ಭಾರತೀಯ ಪ್ರಜೆಗಳಾದ ಯೋನಿ ಪಟೇಲ್‌ ಮತ್ತು ಪಿ. ಆಕಾಶ್‌ ಅವರ ಪಾಸ್‌ಪೋರ್ಟ್‌ಗಳನ್ನು ವಶಪಡಿಸುವಂತೆ ಶ್ರೀಲಂಕಾದ ನ್ಯಾಯಾಲಯವು ಆದೇಶಿಸಿದೆ.

Advertisement

ಸದ್ಯ ಜಾಮೀನಿನ ಮೇಲೆ ಹೊರಗೆ ಬಂದಿರುವ ಅವರಿಬ್ಬರು, ಮಾ. 8ರಿಂದ 19ರ ವರೆಗೆ ಕ್ಯಾಂಡಿನ ಪಳ್ಳಿಕಲೆ ಕ್ರೀಡಾಂಗಣದಲ್ಲಿ ನಡೆದ ಲೀಗ್‌ನ ಕೆಲವು ಪಂದ್ಯಗಳನ್ನು ಫಿಕ್ಸ್‌ ಮಾಡಲು ಯತ್ನಿಸಿದ ಆರೋಪ ಎದುರಿಸುತ್ತಿದ್ದಾರೆ.

ಲೀಗ್‌ನ ಫೈನಲ್‌ನಲ್ಲಿ ರಾಜಸ್ಥಾನ್‌ ಕಿಂಗ್ಸ್‌ ತಂಡವು ನ್ಯೂಯಾರ್ಕ್‌ ಸೂಪರ್‌ಸ್ಟ್ರೈಕರ್ ತಂಡವನ್ನು ಸೋಲಿಸಿತ್ತು. ಈ ಲೀಗ್‌ನಲ್ಲಿ ಪಟೇಲ್‌ ಅವರು ಕ್ಯಾಂಡಿ ಸ್ವಾಂಪ್‌ ಆರ್ಮಿ ತಂಡವನ್ನು ಹೊಂದಿದ್ದರು.

ಪ್ರಸ್ತುತ ರಾಷ್ಟ್ರೀಯ ತಂಡದ ಮುಖ್ಯ ಆಯ್ಕೆದಾರರಾಗಿರುವ, ಶ್ರೀಲಂಕಾದ ಮಾಜಿ ಆಟಗಾರ ಉಪುಲ್‌ ತರಂಗ ಮತ್ತು ನ್ಯೂಜಿಲೆಂಡ್‌ನ‌ ಮಾಜಿ ಆಟಗಾರ ನೀಲ್‌ ಬ್ರೂಮ್‌ ಅವರು ಪಟೇಲ್‌ ಮತ್ತು ಆಕಾಶ್‌ ಅವರ ವಿರುದ್ಧ ಕ್ರೀಡಾ ಸಚಿವಾಲಯದ ವಿಶೇಷ ತನಿಖಾ ಘಟಕಕ್ಕೆ ದೂರು ನೀಡಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next