ಕೊಲಂಬೊ: ಈ ಬಾರಿಯ ಏಷ್ಯಾಕಪ್ ಕೂಟವನ್ನು ಆಯೋಜಿಸಲು ಸಾಧ್ಯವಿಲ್ಲ ಎಂದು ಶ್ರೀಲಂಕಾ ಕ್ರಿಕೆಟ್ ಮಂಡಳಿ ಕೈಚೆಲ್ಲಿದೆ. ಹೀಗೆಂದು ಏಷ್ಯನ್ ಕ್ರಿಕೆಟ್ ಕೌನ್ಸಿಲ್ ಗೆ ಮಂಡಳಿ ಬುಧವಾರ ತಿಳಿಸಿದೆ.
ಶ್ರೀಲಂಕಾ ದೇಶದಲ್ಲಿ ಆರ್ಥಿಕ ಬಿಕ್ಕಟ್ಟು ಉಂಟಾಗಿರುವ ಕಾರಣ ಲಂಕನ್ ಕ್ರಿಕೆಟ್ ಮಂಡಳಿ ಈ ನಿರ್ಧಾರ ಕೈಗೊಂಡಿದೆ.
“ಶ್ರೀಲಂಕಾ ಕ್ರಿಕೆಟ್ ತಮ್ಮ ದೇಶದಲ್ಲಿ ಅಸ್ತಿತ್ವದಲ್ಲಿರುವ ರಾಜಕೀಯ ಮತ್ತು ಆರ್ಥಿಕ ಪರಿಸ್ಥಿತಿಯಿಂದಾಗಿ ವಿಶೇಷವಾಗಿ ವಿದೇಶಿ ವಿನಿಮಯಕ್ಕೆ ಸಂಬಂಧಿಸಿದಂತೆ ದ್ವೀಪದಲ್ಲಿ ಆರು ತಂಡಗಳ ಇಂತಹ ಮೆಗಾ-ಈವೆಂಟ್ ಅನ್ನು ಆಯೋಜಿಸುವುದು ಸೂಕ್ತ ಪರಿಸ್ಥಿತಿಯಲ್ಲ ಎಂದು ತಿಳಿಸುತ್ತದೆ” ಎಂದು ಎಸಿಸಿ ಮೂಲಗಳು ತಿಳಿಸಿವೆ.
ಇದನ್ನೂ ಓದಿ:ಬಿಲ್ ಗೇಟ್ಸ್ ಅನ್ನೇ ಮೀರಿಸಿದ ಗೌತಮ್ ಅದಾನಿ…ವಿಶ್ವದ 4ನೇ ಅತೀ ಶ್ರೀಮಂತ ವ್ಯಕ್ತಿ: ಫೋರ್ಬ್ಸ್
ಶ್ರೀಲಂಕಾ ಹಿಂದೆ ಸರಿದ ಕಾರಣ ಇದೀಗ ಬದಲಿ ಆಯ್ಕೆ ನಡೆದಿಲ್ಲ. ಯುಎಇ ಅಥವಾ ಭಾರತದಲ್ಲಿ ಕೂಟ ನಡೆಯಬಹುದು ಎಂದು ಅಂದಾಜಿಸಲಾಗಿದೆ. ಕೂಟ ಆಗಸ್ಟ್ 27ರಂದು ಆರಂಭವಾಗಲಿದ್ದು, ಸೆಪ್ಟೆಂಬರ್ 11ರಂದು ಫೈನಲ್ ನಡೆಯಲಿದೆ.
“ಯುಎಇ ಅಂತಿಮ ಬದಲಿ ಸ್ಥಳವಲ್ಲ, ಅದು ಬೇರೆ ಯಾವುದಾದರೂ ದೇಶವಾಗಿರಬಹುದು, ಭಾರತವೂ ಸಹ ಆಗಿರಬಹುದು. ಏಷ್ಯನ್ ಕ್ರಿಕೆಟ್ ಕೌನ್ಸಿಲ್, ಶ್ರೀಲಂಕಾ ಕ್ರಿಕೆಟ್ ಮಂಡಳಿ ಈ ಬಗ್ಗೆ ಚರ್ಚೆ ಮಾಡಬೇಕಾಗುತ್ತದೆ” ಎಂದು ಅಧಿಕಾರಿಯೊಬ್ಬರು ಹೇಳಿದರು.