Advertisement

ರಾಹುಲ್, ಧವನ್ ಫಿಫ್ಟೀ ; ಶಾರ್ದೂಲ್ ಮಿಂಚಿನ ಬ್ಯಾಟಿಂಗ್: ಲಂಕಾ ಗೆಲುವಿಗೆ 202 ರನ್ ಗುರಿ

10:09 AM Jan 11, 2020 | Hari Prasad |

ಪುಣೆ: ಇಲ್ಲಿ ನಡೆಯುತ್ತಿರವ ಭಾರತ ಮತ್ತು ಶ್ರೀಲಂಕಾ ನಡುವಿನ ಮೂರನೇ ಮತ್ತು ಅಂತಿಮ ಟಿ20 ಪಂದ್ಯದಲ್ಲಿ ಭಾರತ ಲಂಕಾ ಗೆಲುವಿಗೆ 202 ರನ್ ಗಳ ಗುರಿ ನೀಡಿದೆ.

Advertisement

ಆರಂಭಿಕ ಆಟಗಾರರಿಬ್ಬರ ಅರ್ಧಶತಕ ಹಾಗೂ ಮಧ್ಯಮ ಕ್ರಮಾಂಕ ಮತ್ತು ಕೊನೆಯಲ್ಲಿ ಶಾರ್ದೂಲ್ ಠಾಕೂರ್ ಅವರ ಮಿಂಚಿನ ಬ್ಯಾಟಿಂಗ್ ನೆರವಿನಿಂದ ಭಾರತ ನಿಗದಿತ 20 ಓವರ್ ಗಳಲ್ಲಿ 06 ವಿಕೆಟ್ ಗಳನ್ನು ಕಳೆದುಕೊಂಡು 201 ರನ್ ಗಳಿಸಿತು.

ಸರಣಿಯನ್ನು ಸಮಬಲ ಮಾಡಿಕೊಳ್ಳಲು ಈ ಪಂದ್ಯವನ್ನು ಗೆಲ್ಲಲೇಬೇಕಿರುವ ಒತ್ತಡದಲ್ಲಿರುವ ಶ್ರೀಲಂಕಾ ತಂಡದ ನಾಯಕ ಲಸಿತ ಮಾಲಿಂಗ ಅವರು  ಟಾಸ್ ಗೆದ್ದು ಭಾರತಕ್ಕೆ ಬ್ಯಾಟಿಂಗ್ ಬಿಟ್ಟುಕೊಟ್ಟರು. ಆದರೆ ಭಾರತದ ಆರಂಭಿಕ ಆಟಗಾರರು ಲಂಕಾ ನಾಯಕನ ನಿರ್ಧಾರವನ್ನು ತಪ್ಪಾಗಿಸಿದರು. ಶಿಖರ್ ಧವನ್ (54) ಹಾಗೂ ಕೆ.ಎಲ್. ರಾಹುಲ್ (52) ಬಿರುಸಿನ ಬ್ಯಾಟಿಂಗ್ ಮೂಲಕ ಮೊದಲನೇ ವಿಕೆಟಿಗೆ 65 ಎಸೆತೆಗಳಲ್ಲಿ 97 ರನ್ ಕಲೆಹಾಕಿದರು.


ಆದರೆ ರಿಷಭ್ ಪಂತ್ ಬದಲಿಗೆ ತಂಡದಲ್ಲಿ ಸ್ಥಾನ ಸಂಪಾದಿಸಿದ್ದ ಸಂಜು ಸ್ಯಾಮ್ಸನ್ (6) ಮಿಂಚಲು ವಿಫಲರಾದರು. ಮನೀಶ್ ಪಾಂಡೆ (31) ಅಜೇಯರಾಗಿ ಉಳಿದರು. ಶ್ರೇಯಸ್ ಅಯ್ಯರ್ (4) ಬ್ಯಾಟಿಂಗ್ ಕೈಕೊಟ್ಟಿತ್ತು.

ನಾಯಕ ವಿರಾಟ್ ಕೊಹ್ಲಿ (17 ಎಸೆತಗಳಲ್ಲಿ 26) ಮತ್ತು ಇನ್ನಿಂಗ್ಸ್ ನ ಕೊನೇ ಹಂತದಲ್ಲಿ ಸ್ಪೋಟಕ ಬ್ಯಾಟಿಂಗ್ ಪ್ರದರ್ಶಿಸಿದ ಶಾರ್ದೂಲ್ ಠಾಕೂರ್ (22) ಅವರ ನೆರವಿನಿಂದ ಭಾರತ 201 ರನ್ ಗಳ ಗೌರವಯುತ ಮೊತ್ತವನ್ನು ದಾಖಲಿಸಲು ಸಾಧ್ಯವಾಯಿತು. ಅದರಲ್ಲೂ ಶಾರ್ದೂಲ್ ಅವರು ಕೇವಲ 08 ಎಸೆತಗಳಲ್ಲಿ 02 ಭರ್ಜರಿ ಸಿಕ್ಸರ್ ಮತ್ತು 01 ಬೌಂಡರಿ ನೆರವಿನಿಂದ 22 ರನ್ ಸಿಡಿಸಿ ಮಿಂಚಿದರು.

ಶ್ರೀಲಂಕಾ ಪರ ಸ್ಪಿನ್ನರ್ ಲಕ್ಷಣ್ ಸಂಡಕನ್ ಅವರು 03 ವಿಕೆಟ್ ಪಡೆದರೆ, ಲಹಿರು ಕುಮಾರ ಹಾಗೂ ಹಸರಂಗ ಡಿ’ಸಿಲ್ವಾ ತಲಾ 01 ವಿಕೆಟ್ ಪಡೆದರು.



Advertisement
Advertisement

Udayavani is now on Telegram. Click here to join our channel and stay updated with the latest news.

Next