ಉಡುಪಿ: ಶ್ರೀಲಂಕಾದ ಮೇಲೆ ಆಗಿರುವ ಅಮಾನವೀಯ ದಾಳಿಯು ಭಯೋತ್ಪಾದಕರ ಹತಾಶ ಮನೋಭಾವವನ್ನು ಸೂಚಿಸುತ್ತದೆ. ವಿಶ್ವದ ಯಾವುದೇ ಭಾಗದಲ್ಲಿ ಕೂಡ ನಡೆಯುವ ಭಯೋತ್ಪಾದನಾ ಚಟುವಟಿಕೆಗಳನ್ನು ಬಿಜೆಪಿ ಖಂಡಿಸುತ್ತದೆ. ದಾಳಿಗೆ ತುತ್ತಾದ ದೇಶಕ್ಕೆ ಮಾನಸಿಕ ಧೈರ್ಯವನ್ನು ತುಂಬುತ್ತದೆ ಎಂದು ಶಾಸಕ ಕೆ. ರಘುಪತಿ ಭಟ್ ಹೇಳಿದರು.
ಬಿಜೆಪಿ ಅಲ್ಪಸಂಖ್ಯಾಕ ಮೋರ್ಚಾ ವತಿಯಿಂದ ಉಡುಪಿ ಬಿಜೆಪಿ ಜಿÇÉಾ ಕಚೇರಿಯಲ್ಲಿ ಸೋಮವಾರ ಶ್ರೀಲಂಕಾದಲ್ಲಿ ನಡೆದ ಭಯೋತ್ಪಾದಕ ಕೃತ್ಯದ ಕುರಿತ ಖಂಡನಾ ಸಭೆಯಲ್ಲಿ ಅವರು ಮಾತನಾಡಿದರು.
ಇಂದು ವಿಶ್ವದ ಹೆಚ್ಚಿನ ರಾಷ್ಟ್ರಗಳು ಭಯೋತ್ಪಾದನೆಯ ಬಲಿಪಶುಗಳಾಗಿದ್ದು ಇವುಗಳ ವಿರುದ್ಧ ಅತ್ಯಂತ ಕಟುವಾದ ನಿಲುವುಗಳನ್ನು ತಾಳಿವೆ.
ಬೆರಳೆಣಿಕೆಯ ಕೆಲವೇ ರಾಷ್ಟ್ರಗಳು ಭಯೋತ್ಪಾದಕರನ್ನು ಪೋಷಿಸಿ ವಿಶ್ವದಲ್ಲಿಯೇ ದೊಡ್ಡ ಪಿಡುಗಾಗಿ ಹರಡುವಲ್ಲಿ ಕಾರಣಕರ್ತವಾಗಿವೆ ಎಂದರು.
ಈ ಘಟನೆಯಲ್ಲಿ ಮೃತರಾದ ನಾಗರಿಕರಿಗೆ ಸಂತಾಪ ಸೂಚಕವಾಗಿ ಮೊಂಬತ್ತಿ ಬೆಳಗಿಸಿ ಶ್ರ¨ªಾಂಜಲಿ ಅರ್ಪಿಸಲಾಯಿತು. ನಗರ ಅಲ್ಪಸಂಖ್ಯಾಕ ಮೋರ್ಚಾ ಉಪಾಧ್ಯಕ್ಷ ಅಲ್ವಿನ್ ಡಿ ಸೋಜಾ ಕಾರ್ಯಕ್ರಮ ಸಂಯೋಜಿಸಿದರು. ಬಿಜೆಪಿ
ನಗರ ಅಧ್ಯಕ್ಷ ಪ್ರಭಾಕರ್ ಪೂಜಾರಿ, ಮಾಜಿ ಅಧ್ಯಕ್ಷ ರಾಘವೇಂದ್ರ
ಕಿಣಿ, ಉಪಾಧ್ಯಕ್ಷ ಟಿ. ಜಿ. ಹೆಗ್ಡೆ, ರವಿ ಅಮೀನ್, ಜಿÇÉಾ ಯುವ ಮೋರ್ಚಾ ಪ್ರಧಾನ ಕಾರ್ಯದರ್ಶಿ ಗಿರೀಶ್ ಅಂಚನ್, ಜಿÇÉಾ ಮಾಧ್ಯಮ ವಕ್ತಾರ ಶಿವಕುಮಾರ್, ನಗರಸಭಾ ಸದಸ್ಯರು,ಪಕ್ಷದ ಪ್ರಮುಖರು ಉಪಸ್ಥಿತರಿದ್ದರು.