ಗಾಲೆ: ಆತಿಥೇಯ ಶ್ರೀಲಂಕಾ ವಿರುದ್ಧದ ಬುಧವಾರದಿಂದ ಆರಂಭವಾಗಿರುವ ಮೊದಲ ಟೆಸ್ಟ್ ಪಂದ್ಯದಲ್ಲಿ ಭಾರತದ ಆರಂಭಿಕ ಆಟಗಾರ ಶಿಖರ್ ಧವನ್ ಭರ್ಜರಿ ಸ್ಫೋಟಕ ಶತಕ ಸಿಡಿಸಿ ದ್ವಿಶತಕದ ಹೊಸ್ತಿಲಿನಲ್ಲಿ ಔಟಾಗುವ ಮೂಲಕ ನಿರಾಶರಾದರು.ತಾಳ್ಮೆಯ ಆಟವಾಡಿದ ಪೂಜಾರ ಭರ್ಜರಿ ಶತಕ ಸಿಡಿಸಿ ಸಂಭ್ರಮಿಸಿದ್ದಾರೆ.
ಟಾಸ್ ಗೆದ್ದು ಬ್ಯಾಟಿಂಗ್ ಆಯ್ದುಕೊಂಡ ಭಾರತ 27 ರನ್‌ಗಳಿಗೆ ಅಭಿನವ್ ಮುಕುಂದ್ ವಿಕೆಟ್ ಕಳೆದುಕೊಂಡು ಅಘಾತಕ್ಕೆ ಸಿಲುಕಿತು. ಮುಕುಂದ್ 12 ರನ್‌ಗೆ ನಿರ್ಗಮಿಸಿದರು. ಆ ಬಳಿಕ ಬೌಂಡರಿಗಳ ಮಳೆ ಸುರಿಸಿದ ಧವನ್ ಸ್ಫೋಟಕ ಶತಕ ಸಿಡಿಸಿದರು. ಧವನ್‌ಗೆ ಪೂಜಾರ ಸಾಥ್ ನೀಡಿದರು.
168 ಎಸೆತಗಳಲ್ಲಿ 190 ರನ್‌ಗಳಿಸಿ ದ್ವಿಶತಕದ ಹೊಸ್ತಿಲಿನಲ್ಲಿದ್ದ ಧವನ್ ಅವರು ನುವಾನ್ ಪ್ರದೀಪ್ ಎಸೆತ ಚೆಂಡನ್ನು ಮ್ಯಾಥ್ಯೂಸ್ ಕೈಗಿತ್ತು ನಿರಾಶರಾದರು. ಅವರು ಬರೋಬ್ಬರಿ 31 ಬೌಂಡರಿಗಳನ್ನು ಸಿಡಿಸಿದ್ದರು.
ಭಾರತ 3 ವಿಕೆಟ್ ನಷ್ಟಕ್ಕೆ 337 ರನ್‌ಗಳಿಸಿ ಭರ್ಜರಿ ಮೊತ್ತ ಕಲೆ ಹಾಕುವ ಸೂಚನೆ ನೀಡಿದೆ. ಪೂಜಾರ 108 ಮತ್ತು ರೆಹಾನೆ 7 ರನ್ ಗಳಿಸಿ ಕ್ರೀಸ್‌ನಲ್ಲಿದ್ದಾರೆ.
ನಾಯಕ ಕೊಹ್ಲಿ ಕೇವಲ 3 ರನ್‌ಗೆ ಕ್ಯಾಚ್ ನೀಡುವ ಮೂಲಕ ಔಟಾದರು. ನುವಾನ್ ಪ್ರದೀಪ್ 3 ವಿಕೆಟ್ ಪಡೆದಿದ್ದಾರೆ.