Advertisement

ಲಂಕಾದಲ್ಲಿ ಕೃಷಿ ಸಂಬಂಧಿ ರಾಸಾಯನಿಕಗಳ ಆಮದಿನ ಮೇಲಿನ ನಿರ್ಬಂಧ ರದ್ದು

07:11 PM Nov 22, 2021 | Team Udayavani |

ಕೊಲೊಂಬೋ: ಜಗತ್ತಿನಲ್ಲೇ ಮೊದಲ “ಸಂಪೂರ್ಣ ಸಾವಯವ ಕೃಷಿ ದೇಶ’ ಎಂಬ ಹೆಗ್ಗಳಿಕೆಯನ್ನು ಪಡೆಯುವ ಶ್ರೀಲಂಕಾದ ಕನಸು ಭಗ್ನವಾಗಿದೆ.

Advertisement

ಕ್ರಿಮಿನಾಶಕಗಳು ಮತ್ತು ಸಾವಯವ ಕೃಷಿಯಲ್ಲಿ ಬಳಸಲಾಗುವ ವಸ್ತುಗಳ ಆಮದು ಮೇಲೆ ಹೇರಿದ್ದ ನಿಷೇಧವನ್ನು ಶ್ರೀಲಂಕಾ ಸರ್ಕಾರ ಹಿಂಪಡೆದಿದೆ.

ವಿದೇಶಿ ವಿನಿಮಯದ ಕೊರತೆ, ಆಹಾರ, ಕಚ್ಚಾತೈಲ ಮತ್ತು ಇತರೆ ಅವಶ್ಯಕ ವಸ್ತುಗಳ ಅಭಾವದಿಂದಾಗಿ ದ್ವೀಪ ರಾಷ್ಟ್ರವು ಗಂಭೀರ ಆರ್ಥಿಕ ಬಿಕ್ಕಟ್ಟನ್ನು ಎದುರಿಸುತ್ತಿರುವಾಗಲೇ ಈ ಬೆಳವಣಿಗೆ ನಡೆದಿದೆ.

ಕಳೆದ ತಿಂಗಳಷ್ಟೇ ಸರ್ಕಾರವು ದೇಶದ ಪ್ರಮುಖ ರಫ್ತು ಉತ್ಪನ್ನವಾದ ಚಹಾ ಕೃಷಿಗೆ ಬಳಸುವ ರಾಸಾಯನಿಕ ಗೊಬ್ಬರದ ಮೇಲೆ ವಿಧಿಸಿದ್ದ ನಿರ್ಬಂಧವನ್ನು ಹಿಂಪಡೆದಿತ್ತು.

ಇದನ್ನೂ ಓದಿ:ಪರಿಷತ್ ಚುನಾವಣೆ: 17  ಮಂದಿ ಕಾಂಗ್ರೆಸ್ ಅಭ್ಯರ್ಥಿಗಳ ಅಧಿಕೃತ ಪಟ್ಟಿ ಬಿಡುಗಡೆ

Advertisement

ಈಗ ಕೃಷಿ ಸಂಬಂಧಿತ ಆಮದಿನ ನಿರ್ಬಂಧ ವಿರೋದಿಸಿ ದೇಶಾದ್ಯಂತ ರೈತರು ಪ್ರತಿಭಟನೆ ಆರಂಭಿಸಲು ಸಿದ್ಧತೆ ನಡೆಸುತ್ತಿದ್ದಂತೆ, ಲಂಕಾ ಸರ್ಕಾರವು ಮಣಿದಿದೆ. ತುರ್ತಾಗಿ ಬೇಕಾಗಿರುವ ಕೃಷಿ ಸಂಬಂಧಿ ರಾಸಾಯನಿಕಗಳು, ಹರ್ಬಿಸೈಡ್‌ಗಳು, ಕ್ರಿಮಿನಾಶಕಗಳನ್ನು ಆಮದು ಮಾಡಿಕೊಳ್ಳಲು ಒಪ್ಪಿಗೆ ನೀಡಿದೆ.

Advertisement

Udayavani is now on Telegram. Click here to join our channel and stay updated with the latest news.

Next