Advertisement

ಅಂಕೆ ತಪ್ಪಿದ ಲಂಕೆ; ಭದ್ರತಾ ಪಡೆಗಳಿಗೆ ಅಧಿಕಾರ ನೀಡಿ ತುರ್ತು ಪರಿಸ್ಥಿತಿ ಘೋಷಿಸಿದ ಶ್ರೀಲಂಕಾ

08:39 AM Apr 02, 2022 | Team Udayavani |

ಕೊಲಂಬೊ: ತೀವ್ರ ಆರ್ಥಿಕ ಬಿಕ್ಕಟ್ಟನ್ನು ಎದುರಿಸುತ್ತಿರುವ ಶ್ರೀಲಂಕಾದಲ್ಲಿ ತುರ್ತು ಪರಿಸ್ಥಿತಿ ಘೋಷಿಸಲಾಗಿದೆ. ಆರ್ಥಿಕ ಸಂಕಷ್ಟದಿಂದ ಉದ್ರಿಕ್ತರಾದ ನೂರಾರು ಜನರು ತಮ್ಮ ಮನೆಗೆ ನುಗ್ಗಲು ಪ್ರಯತ್ನಿಸಿದ ಒಂದು ದಿನದ ನಂತರ ಶ್ರೀಲಂಕಾದ ಅಧ್ಯಕ್ಷ ಗೊಟಬಯ ರಾಜಪಕ್ಸೆ ಶುಕ್ರವಾರ ಭದ್ರತಾ ಪಡೆಗಳಿಗೆ ಅಧಿಕಾರವನ್ನು ನೀಡಿ ತುರ್ತು ಪರಿಸ್ಥಿತಿ ಘೋಷಣೆ ಮಾಡಿದ್ದಾರೆ.

Advertisement

ಅಧ್ಯಕ್ಷ ಗೊಟಬಯ ರಾಜಪಕ್ಸೆ ಅವರು ದೇಶದಲ್ಲಿ ತನ್ನ ವಿರುದ್ಧ ಕರೆ ನೀಡುವ, ಘೋಷಣೆ ಕೂಗುವ ಜನರನ್ನು ಯಾವುದೇ ವಿಚಾರಣೆಯಿಲ್ಲದೆ ದೀರ್ಘಾವಧಿಯವರೆಗೆ ಬಂಧನದಲ್ಲಿಡುವಂತೆ ಮಿಲಿಟರಿಗೆ ಅವಕಾಶ ನೀಡುವ ಕಠಿಣ ಕಾನೂನುಗಳನ್ನು ಜಾರಿಗೆ ತಂದಿದ್ದಾರೆ.

“ಸಾರ್ವಜನಿಕ ಸುವ್ಯವಸ್ಥೆಯ ರಕ್ಷಣೆ ಮತ್ತು ಸಮುದಾಯದ ಜೀವನಕ್ಕೆ ಅಗತ್ಯವಾದ ಸರಬರಾಜು ಮತ್ತು ಸೇವೆಗಳ ನಿರ್ವಹಣೆಗಾಗಿ” ತುರ್ತು ಪರಿಸ್ಥಿತಿಯನ್ನು ಘೋಷಿಸಲಾಗಿದೆ ಎಂದು ಅವರು ಘೋಷಣೆಯಲ್ಲಿ ತಿಳಿಸಿದ್ದಾರೆ.

ಇದನ್ನೂ ಓದಿ:ಭಾರತದ ಪ್ರಮುಖ ಸಾಫ್ಟ್ ವೇರ್‌ ಕಂಪೆನಿಯಾದ ಇನ್ಫೋಸಿಸ್‌ ರಷ್ಯಾ ಕಚೇರಿ ಬಂದ್‌?

ರಾಜಧಾನಿ ಕೊಲಂಬೊವನ್ನು ಒಳಗೊಂಡಿರುವ ಪಶ್ಚಿಮ ಪ್ರಾಂತ್ಯದಲ್ಲಿ ಶುಕ್ರವಾರ ರಾತ್ರಿಯ ಕರ್ಫ್ಯೂ ಅನ್ನು ಪೊಲೀಸರು ಪುನಃ ವಿಧಿಸಿದರು.

Advertisement

ಆಕ್ರೋಶಕ್ಕೆ ಕಾರಣವೇನು?: ಈಗಾಗಲೇ ದೇಶವು ಆರ್ಥಿಕ ಬಿಕ್ಕಟ್ಟಿನ ಸುಳಿಯಲ್ಲಿ ಸಿಲುಕಿ ನಲುಗುತ್ತಿದೆ. ಮಾ.30ರ ಬುಧವಾರ ಸರ್ಕಾರವು ಪ್ರತಿದಿನ 10 ಗಂಟೆ ಪವರ್‌ ಕಟ್‌ ಮಾಡುವುದಾಗಿ ಹೇಳಿತ್ತು. ಏಕಾಏಕಿ ದೇಶಾದ್ಯಂತ ಡೀಸೆಲ್‌ ಖಾಲಿಯಾದ ಕಾರಣ, ಪವರ್‌ ಕಟ್‌ ಅವಧಿಯನ್ನು 13 ಗಂಟೆಗಳಿಗೆ ವಿಸ್ತರಿಸಲಾಯಿತು. ಹಣದುಬ್ಬರ ಗಗನಕ್ಕೇರಿದೆ, ಹಾಲು ಸೇರಿದಂತೆ ಅತ್ಯವಶ್ಯಕ ವಸ್ತುಗಳು, ಆಹಾರ ಸಾಮಗ್ರಿಗಳ ದರ ಗಣನೀಯವಾಗಿ ಏರಿಕೆಯಾಗಿದೆ. ಅಕ್ಕಿ, ಬೇಳೆಗೂ ತತ್ವಾರ ಶುರುವಾಗಿದೆ. ಕರೆಂಟ್‌ ಇಲ್ಲ, ಹಾಗಂತ ಕ್ಯಾಂಡಲ್‌ ಕೂಡ ಸಿಗುತ್ತಿಲ್ಲ. 12 ಪ್ಯಾರಾಸೆಟಮಾಲ್‌ ಮಾತ್ರೆಗೆ 420 ರೂ ಆಗಿದೆ. ಎಲ್‌ಪಿಜಿ, ಪೆಟ್ರೋಲ್‌ ಕೂಡ ಸಿಗುತ್ತಿಲ್ಲ. ಜನ ಹಸಿವಿನಿಂದ ನರಳತೊಡಗಿದ್ದಾರೆ. ಇವೆಲ್ಲವೂ ಶ್ರೀಲಂಕನ್ನರ ಆಕ್ರೋಶದ ಬೆಂಕಿಗೆ ಕಾರಣ.

Advertisement

Udayavani is now on Telegram. Click here to join our channel and stay updated with the latest news.

Next