Advertisement

ಲೈಂಗಿಕ ದೌರ್ಜನ್ಯ ಕೇಸ್: ಆಸ್ಟ್ರೇಲಿಯಾದಲ್ಲಿ ಲಂಕಾ ಆಟಗಾರ ಗುಣತಿಲಕ ಬಂಧನ

09:46 AM Nov 06, 2022 | Team Udayavani |

ಸಿಡ್ನಿ: ಲೈಂಗಿಕ ದೌರ್ಜನ್ಯ ಆರೋಪದಡಿಯಲ್ಲಿ ಶ್ರೀಲಂಕಾ ಬ್ಯಾಟರ್ ದನುಷ್ಕಾ ಗುಣತಿಲಕ ಅವರನ್ನು ಸಿಡ್ನಿ ಪೊಲೀಸರು ರವಿವಾರ ಬಂಧಿಸಿದ್ದಾರೆ.

Advertisement

ವಾರದ ಹಿಂದೆ ರೋಸ್ ಬೇಯಲ್ಲಿರುವ ನಿವಾಸದಲ್ಲಿ 29 ವರ್ಷದ ಮಹಿಳೆಯೊಬ್ಬರು ಲೈಂಗಿಕ ದೌರ್ಜನ್ಯಕ್ಕೆ ಒಳಗಾಗಿದ್ದಾರೆ ಎಂಬ ವರದಿಗಳ ಬಗ್ಗೆ ತನಿಖೆ ನಡೆಸಿದರ ಪೊಲೀಸರು ಸಿಡ್ನಿಯ ಸೆಂಟ್ರಲ್ ಬ್ಯುಸಿನೆಸ್ ಡಿಸ್ಟ್ರಿಕ್ಟ್‌ ನಲ್ಲಿರುವ ಟೀಮ್ ಹೋಟೆಲ್‌ ನಿಂದ ಭಾನುವಾರ ಮುಂಜಾನೆ ಗುಣತಿಲಕ ಅವರನ್ನು ಬಂಧಿಸಿದ್ದಾರೆ.

“ಆನ್‌ ಲೈನ್ ಡೇಟಿಂಗ್ ಅಪ್ಲಿಕೇಶನ್‌ ನ ಮೂಲಕ ಹಲವಾರು ದಿನಗಳ ಕಾಲ ಗುಣತಿಲಕ ಅವರು ಮಾತುಕತೆ ನಡೆಸಿದ್ದಾರೆ. ನಂತರ ಅವರು ನವೆಂಬರ್ 2ರ ಸಂಜೆ ತನ್ನ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದಾರೆ ಎಂದು ಮಹಿಳೆ ಆರೋಪಿಸಿದ್ದಾರೆ ಎಂದು ನ್ಯೂ ಸೌತ್ ವೇಲ್ಸ್ ಪೊಲೀಸ್ ಹೇಳಿಕೆ ತಿಳಿಸಿದೆ.

“ಪ್ರಾಥಮಿಕ ತನಿಖೆಯ ಬಳಿಕ ಇಂದು ಮೊದಲು ಸಿಡ್ನಿಯ ಸಸೆಕ್ಸ್ ಸ್ಟ್ರೀಟ್‌ ನಲ್ಲಿರುವ ಹೋಟೆಲ್‌ನಲ್ಲಿ 31 ವರ್ಷದ ಗುಣತಿಲಕ ಅವರನ್ನು ಬಂಧಿಸಲಾಯಿತು” ಎಂದು ಪೊಲೀಸರು ತಿಳಿಸಿದ್ದಾರೆ.

ಇದನ್ನೂ ಓದಿ:ಶಾಕ್ ಕೊಟ್ಟ ನೆದರ್ಲ್ಯಾಂಡ್ ; ದ.ಆಫ್ರಿಕಾ ಮನೆಗೆ, ಭಾರತ ಸೆಮಿಗೆ; ಅದೃಷ್ಟ ಪಾಕ್-ಬಾಂಗ್ಲಾಗೆ

Advertisement

“ಅವರನ್ನು ಸಿಡ್ನಿ ಸಿಟಿ ಪೋಲೀಸ್ ಠಾಣೆಗೆ ಕರೆದೊಯ್ಯಲಾಯಿತು. ಒಪ್ಪಿಗೆಯಿಲ್ಲದೆ ಲೈಂಗಿಕ ದೌರ್ಜನ್ಯದ ಆರೋಪ ಹೊರಿಸಲಾಗಿದೆ.

ಗುಣತಿಲಕ ಮಂಡಿರಜ್ಜು ಗಾಯದಿಂದ ಟಿ20 ವಿಶ್ವಕಪ್‌ ನ ಮೊದಲ ಸುತ್ತಿನಲ್ಲಿ ಹೊರಬಿದ್ದಿದಿದ್ದರು. ಆದರೆ ಆಸ್ಟ್ರೇಲಿಯಾದಲ್ಲಿ ತಂಡದೊಂದಿಗೆ ಉಳಿದಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next