Advertisement

Sri Lanka Cricket; ಸನತ್‌ ಜಯಸೂರ್ಯ ಪೂರ್ಣಾವಧಿಗೆ ಕೋಚ್‌

12:22 AM Oct 08, 2024 | Team Udayavani |

ಕೊಲಂಬೊ: ಮಾಜಿ ನಾಯಕ ಸನತ್‌ ಜಯಸೂರ್ಯ ಅವರನ್ನು ಶ್ರೀಲಂಕಾ ಕ್ರಿಕೆಟ್‌ ತಂಡದ ಪೂರ್ಣಾವಧಿಯ ಪ್ರಧಾನ ಕೋಚ್‌ ಆಗಿ ನೇಮಿಸಲಾಗಿದೆ. ಈ ತಿಂಗಳ ಆರಂಭದಿಂದ 2026ರ ಟಿ20 ವಿಶ್ವಕಪ್‌ ತನಕ ಅವರ ಒಡಂಬಡಿಕೆ ಜಾರಿಯಲ್ಲಿರಲಿದೆ.

Advertisement

ಕಳೆದ ಜುಲೈಯಲ್ಲಿ ಸನತ್‌ ಜಯಸೂರ್ಯ ಅವರನ್ನು ಶ್ರೀಲಂಕಾ ತಂಡದ ಉಸ್ತುವಾರಿ ಕೋಚ್‌ ಆಗಿ ನೇಮಿಸಲಾಗಿತ್ತು. ಭಾರತ ಮತ್ತು ಇಂಗ್ಲೆಂಡ್‌ ವಿರುದ್ಧ ಪರಿಣಾಮಕಾರಿ ನಿರ್ವಹಣೆ ತೋರಿದ ಕಾರಣ ಅವರನ್ನು ಪೂರ್ಣಾವಧಿಗೆ ಮುಂದುವರಿಸಲು ನಿರ್ಧರಿಸಲಾಯಿತು ಎಂದು ಶ್ರೀಲಂಕಾ ಕ್ರಿಕೆಟ್‌ ಮಂಡಳಿ ತಿಳಿಸಿದೆ.

ಜಯಸೂರ್ಯ ಉಸ್ತುವಾರಿ ಕೋಚ್‌ ಆಗಿದ್ದ ವೇಳೆ ಶ್ರೀಲಂಕಾ ತಂಡ 27 ವರ್ಷಗಳ ಬಳಿಕ ಭಾರತದ ವಿರುದ್ಧ ದ್ವಿಪಕ್ಷೀಯ ಏಕದಿನ ಸರಣಿಯನ್ನು ಜಯಿಸಿತ್ತು. ಹಾಗೆಯೇ 10 ವರ್ಷಗಳಲ್ಲಿ ಮೊದಲ ಸಲ ಇಂಗ್ಲೆಂಡ್‌ಗೆ ಅವರದೇ ಅಂಗಳದಲ್ಲಿ ಟೆಸ್ಟ್‌ ಸೋಲಿನ ರುಚಿ ತೋರಿಸಿತ್ತು. ಮೊನ್ನೆಯಷ್ಟೇ ನ್ಯೂಜಿಲ್ಯಾಂಡ್‌ ಎದುರಿನ ಟೆಸ್ಟ್‌ ಸರಣಿಯನ್ನು 2-0 ಅಂತರದಿಂದ ಕ್ಲೀನ್‌ಸಿÌàಪ್‌ ಆಗಿ ವಶಪಡಿಸಿಕೊಂಡದ್ದು ಮತ್ತೂಂದು ಅಮೋಘ ಸಾಧನೆ.
ಅ. 13ರಂದು ಡಂಬುಲದಲ್ಲಿ ಆರಂಭವಾಗಲಿರುವ ವೆಸ್ಟ್‌ ಇಂಡೀಸ್‌ ಎದುರಿನ ಟಿ20 ಸರಣಿ ಮೂಲಕ ಜಯಸೂರ್ಯ ಅವರ ಪೂರ್ಣಾವಧಿಯ ತರಬೇತಿ ಮೊದಲ್ಗೊಳ್ಳಲಿದೆ. ಕೊಲಂಬೊ, ಅ. 7: ಮಾಜಿ ನಾಯಕ ಸನತ್‌ ಜಯಸೂರ್ಯ ಅವರನ್ನು ಶ್ರೀಲಂಕಾ ಕ್ರಿಕೆಟ್‌ ತಂಡದ ಪೂರ್ಣಾವಧಿಯ ಪ್ರಧಾನ ಕೋಚ್‌ ಆಗಿ ನೇಮಿಸಲಾಗಿದೆ. ಈ ತಿಂಗಳ ಆರಂಭದಿಂದ 2026ರ ಟಿ20 ವಿಶ್ವಕಪ್‌ ತನಕ ಅವರ ಒಡಂಬಡಿಕೆ ಜಾರಿಯಲ್ಲಿರಲಿದೆ.

ಕಳೆದ ಜುಲೈಯಲ್ಲಿ ಸನತ್‌ ಜಯಸೂರ್ಯ ಅವರನ್ನು ಶ್ರೀಲಂಕಾ ತಂಡದ ಉಸ್ತುವಾರಿ ಕೋಚ್‌ ಆಗಿ ನೇಮಿಸಲಾಗಿತ್ತು. ಭಾರತ ಮತ್ತು ಇಂಗ್ಲೆಂಡ್‌ ವಿರುದ್ಧ ಪರಿಣಾಮಕಾರಿ ನಿರ್ವಹಣೆ ತೋರಿದ ಕಾರಣ ಅವರನ್ನು ಪೂರ್ಣಾವಧಿಗೆ ಮುಂದುವರಿಸಲು ನಿರ್ಧರಿಸಲಾಯಿತು ಎಂದು ಶ್ರೀಲಂಕಾ ಕ್ರಿಕೆಟ್‌ ಮಂಡಳಿ ತಿಳಿಸಿದೆ.

ಜಯಸೂರ್ಯ ಉಸ್ತುವಾರಿ ಕೋಚ್‌ ಆಗಿದ್ದ ವೇಳೆ ಶ್ರೀಲಂಕಾ ತಂಡ 27 ವರ್ಷಗಳ ಬಳಿಕ ಭಾರತದ ವಿರುದ್ಧ ದ್ವಿಪಕ್ಷೀಯ ಏಕದಿನ ಸರಣಿಯನ್ನು ಜಯಿಸಿತ್ತು. ಹಾಗೆಯೇ 10 ವರ್ಷಗಳಲ್ಲಿ ಮೊದಲ ಸಲ ಇಂಗ್ಲೆಂಡ್‌ಗೆ ಅವರದೇ ಅಂಗಳದಲ್ಲಿ ಟೆಸ್ಟ್‌ ಸೋಲಿನ ರುಚಿ ತೋರಿಸಿತ್ತು. ಮೊನ್ನೆಯಷ್ಟೇ ನ್ಯೂಜಿಲ್ಯಾಂಡ್‌ ಎದುರಿನ ಟೆಸ್ಟ್‌ ಸರಣಿಯನ್ನು 2-0 ಅಂತರದಿಂದ ಕ್ಲೀನ್‌ಸಿÌàಪ್‌ ಆಗಿ ವಶಪಡಿಸಿಕೊಂಡದ್ದು ಮತ್ತೂಂದು ಅಮೋಘ ಸಾಧನೆ.
ಅ. 13ರಂದು ಡಂಬುಲದಲ್ಲಿ ಆರಂಭವಾಗಲಿರುವ ವೆಸ್ಟ್‌ ಇಂಡೀಸ್‌ ಎದುರಿನ ಟಿ20 ಸರಣಿ ಮೂಲಕ ಜಯಸೂರ್ಯ ಅವರ ಪೂರ್ಣಾವಧಿಯ ತರಬೇತಿ ಮೊದಲ್ಗೊಳ್ಳಲಿದೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next