Advertisement

ಐಸಿಸ್, ಅಲ್‌ಖೈದಾ‌ ಸೇರಿ 11 ಸಂಘಟನೆಗಳಿಗೆ ಲಂಕಾ ನಿಷೇಧ

06:52 PM Apr 14, 2021 | Team Udayavani |

ಕೊಲಂಬೊ: ಇಸ್ಲಾಮಿಕ್‌ ಸ್ಟೇಟ್‌ (ಐಸಿಸ್‌) ಮತ್ತು ಅಲ್‌ಖೈದಾ ಸೇರಿದಂತೆ ಒಟ್ಟು 11 ಇಸ್ಲಾಮಿಕ್‌ ತೀವ್ರಗಾಮಿ ಸಂಘಟನೆಗಳಿಗೆ ಶ್ರೀಲಂಕಾ ಸರ್ಕಾರ ನಿಷೇಧ ಹೇರಿದೆ.

Advertisement

ಭಯೋತ್ಪಾದನೆ ತಡೆ (ತಾತ್ಕಾಲಿಕ ನಿರ್ಬಂಧ) ಕಾಯ್ದೆ ಅನ್ವಯ ಅಧ್ಯಕ್ಷ ಗೊಟಾಬಾಯ ರಾಜಪಕ್ಸೆ ಈ ಕುರಿತು ಮಂಗಳವಾರ ಆದೇಶ ಪ್ರಕಟಿಸಿದ್ದಾರೆ. ಇಂಥ ಸಂಘಟನೆಗಳಲ್ಲಿ ತೊಡಗಿಕೊಳ್ಳುವ ವ್ಯಕ್ತಿಗಳಿಗೆ ಕಾಯ್ದೆ ಅನ್ವಯ 10- 20 ವರ್ಷ ಜೈಲು ಶಿಕ್ಷೆ ವಿಧಿಸಲಾಗುವುದು ಎಂದೂ ಕಟ್ಟಾಜ್ಞೆ ಹೊರಡಿಸಿದ್ದಾರೆ.

ಶ್ರೀಲಂಕಾ ಇಸ್ಲಾಮಿಕ್‌ ಸ್ಟೂಡೆಂಟ್ಸ್‌ ಮೂವ್‌ಮೆಂಟ್‌ ಸೇರಿದಂತೆ ಕೆಲವು ಸ್ಥಳೀಯ ಮುಸ್ಲಿಮ್‌ ಸಂಘಟನೆಗಳಿಗೂ ನಿರ್ಬಂಧ ಹೇರಲಾಗಿದೆ. 2019ರಲ್ಲಿ ಕೊಲಂಬೊದಲ್ಲಿ ಈಸ್ಟರ್‌ ಸಂಡೇ ಆಚರಣೆ ವೇಳೆ ನಡೆದ ಆತ್ಮಾಹುತಿ ಬಾಂಬ್‌ ದಾಳಿಯ ನಂತರ ಸರ್ಕಾರ ಈ ಕ್ರಮ ಜಾರಿಗೊಳಿಸಲು ಯೋಜಿಸಿತ್ತು.

ಇದನ್ನೂ ಓದಿ :ಮುಸ್ಲಿಂ ಯುವಕನಿಂದ ಕಾಳಿ ಮಾತೆಯ ಆರಾಧನೆ : ಸಾಮರಸ್ಯ ಸಾರುತ್ತಿದ್ದಾನೆ ರಮ್ಲಾನ್

Advertisement

Udayavani is now on Telegram. Click here to join our channel and stay updated with the latest news.

Next