Advertisement

ಲಂಕಾ ರಾಷ್ಟ್ರೀಯ ಗುಪ್ತಚರ ದಳ ಹೊಸ ಮುಖ್ಯಸ್ಥ ರುವಾನ್‌ ಕುಲತುಂಗ

10:05 AM Jun 14, 2019 | Team Udayavani |

ಕೊಲಂಬೋ : ಮೇಜರ್‌ ಜನರಲ್‌ ರುವಾನ್‌ ಕುಲತುಂಗ ಅವರನ್ನು ಲಂಕೆಯ ರಾಷ್ಟ್ರೀಯ ಗುಪ್ತಚರ ದಳದ ಹೊಸ ಮುಖ್ಯಸ್ಥರನ್ನಾಗಿ ಲಂಕೆಯ ಅಧ್ಯಕ್ಷ ಮೈತ್ರಿಪಾಲ ಸಿರಿಸೇನ ನೇಮಿಸಿದ್ದಾರೆ.

Advertisement

259 ಜನರನ್ನು ಬಲಿಪಡೆದ ಈಸ್ಟರ್‌ ಭಾನುವಾರದ ಇಸ್ಲಾಮಿಕ್‌ ಉಗ್ರ ದಾಳಿಯನ್ನು ತಡೆಯಲು ದೇಶದ ಅಧ್ಯಕ್ಷ ಸಿರಿಸೇನ ಅವರು ವಿಫ‌ಲರಾಗಿದ್ದರು ಎಂದು ಲಂಕೆಯ ಸಂಸದೀಯ ಸಮಿತಿಯ ಮುಂದೆ ಹೇಳಿಕೆ ನೀಡಿದ್ದಕ್ಕಾಗಿ ಉಚ್ಚಾಟನೆಗೊಂಡ ಹಿಂದಿನ ಗುಪ್ತಚರ ದಳದ ಮುಖ್ಯಸ್ಥ ಶಿಶಿರ ಮೆಂಡಿಸ್‌ ಅವರ ಉತ್ತರಾಧಿಕಾರಿಯಾಗಿ ರುವಾನ್‌ ಕುಲತುಂಗ ಪದಭಾರ ವಹಿಸಿಕೊಂಡಿದ್ದಾರೆ.

ಮೆಂಡಿಸ್‌ ಅವರು ಇದಕ್ಕೆ ಮೊದಲು ಪೊಲೀಸ್‌ ಸುಪರಿಂಟೆಂಡೆಂಟ್‌ ಆಗಿ ನಿವೃತ್ತರಾಗಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next