Advertisement
122 ವರ್ಷಗಳ ಹಿಂದೆ ಶ್ರೀ ಕಾಶೀಮಠ ಸಂಸ್ಥಾನದ ಶ್ರೀಮದ್ ವರದೇಂದ್ರತೀರ್ಥ ಶ್ರೀಪಾದರಿಂದ ಪ್ರತಿಷ್ಠಿತಗೊಂಡ ಈ ದೇವಳದಲ್ಲಿ ಭಟ್ಟರು 37 ವರ್ಷಗಳಿಂದ ಅರ್ಚಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಇದರಲ್ಲಿ 25 ವರ್ಷ ವೆಂಕಟರಮಣನಿಗೆ, ಉಳಿದ ವರ್ಷಗಳಲ್ಲಿ ಪರಿವಾರದೇವರಿಗೆ ಅರ್ಚಕರಾಗಿ ಸೇವೆ ಸಂದಿದೆ. ಮಾ. 18 ಯುಗಾದಿಯಂದು ಇವರ 25ನೆಯ ವರ್ಷದ ವೆಂಟಕರಮಣನ ಅರ್ಚಕ ಸೇವೆ ಮುಕ್ತಾಯಗೊಳ್ಳುತ್ತಿದೆ. ಇವರು ಮೂಲತಃ ಶಿರಸಿ ತಾಲೂಕಿನ ಬಿಳಿಗಿಯವರಾದ ಕಾರಣ ಬಿಳಿಗಿ ಭಟ್ಟರೆಂದೇ ಜನಜನಿತ. ಸ್ವಾತಂತ್ರ್ಯ ಸಿಕ್ಕಿದ ವರ್ಷ ಜನಿಸಿದ ಭಟ್ಟರು ಪ್ರಾಥಮಿಕ ಶಿಕ್ಷಣವನ್ನು ಬಿಳಿಗಿಯಲ್ಲಿ ಪೂರೈಸಿ ವೈದಿಕ ಶಿಕ್ಷಣ, ಜ್ಯೋತಿಷ್ಯಶಾಸ್ತ್ರದ ಶಿಕ್ಷಣವನ್ನು ಸಂಸ್ಥಾನ ಗೋಕರ್ಣ ಪರ್ತಗಾಳಿ ಜೀವೋತ್ತಮ ಮಠದಲ್ಲಿ ಪಡೆದರು. ಬಿಳಿಗಿ ಭಟ್ಟರು ಗೋಕರ್ಣ ಮಠದ ಶ್ರೀಮದ್ ದ್ವಾರಕಾನಾಥ ಸ್ವಾಮಿಗಳಲ್ಲಿದ್ದಾಗ ಇವರ ವೈದಿಕ ಶಿಕ್ಷಣದ ಪ್ರಾವೀಣ್ಯ ನೋಡಿ, ದೇವಳದ ಧರ್ಮದರ್ಶಿ, ಉದ್ಯಮಿ ಐರೋಡಿ ರಾಧಾಕೃಷ್ಣ ಪೈಯವರು ಅರ್ಚಕರಾಗಿ ಬರಲು ವಿನಂತಿಸಿದರು. ಆ ಪ್ರಕಾರ ಭಟ್ಟರು ಉಡುಪಿಗೆ ಅರ್ಚಕರಾಗಿ ಸೇರ್ಪಡೆಗೊಂಡರು. ಉಡುಪಿಗೆ ಬಂದ ಅನಂತರ ವಿ| ಹಯಗ್ರೀವ ಆಚಾರ್ಯರಲ್ಲಿ ವೇದಾಂತ, ವ್ಯಾಕರಣಗಳನ್ನು ಕಲಿತರು.
Related Articles
ಭಜನ ಸಪ್ತಾಹಗಳಲ್ಲಿ ಬಿಳಿಗಿ ಭಟ್ಟರು ಮಾಡಿದ ವಿಶೇಷ ಅಲಂಕಾರಗಳು ಪ್ರಸಿದ್ಧವಾಗಿದೆ. ಅನಂತಶಯನ, ಗಂಧಲೇಪಿತ ವೆಂಕಟರಮಣ, ಪಾರ್ಥಸಾರಥಿ, ವಿಠೊಭ, ಸೂರ್ಯನಾರಾಯಣ, ಕಾಳಿಯಮರ್ದನ ಕೃಷ್ಣ, ವಟಪತ್ರಶಾಯಿ, ಮತ್ಸಾéವತಾರ, ಕೂರ್ಮಾವತಾರ, ಗಜಲಕ್ಷಿ¾à, ಸರಸ್ವತಿ, ಗರುಡ ವಾಹನ, ಶ್ರೀದೇವಿ ಭೂದೇವಿ ಸಹಿತ ವೆಂಕಟರಮಣ, ದುರ್ಗಾದೇವಿ ಪೂಲಂಗಿ ಅಲಂಕಾರ, ರಾಮಚಂದ್ರ, ಸತ್ಯಭಾಮಾ, ಜೋಕಾಲೆ ವೆಂಕಟರಮಣ ಹೀಗೆ ನಾನಾ ಬಗೆಯಾಗಿ ಅಲಂಕರಿಸಿದ್ದಾರೆ.
Advertisement