Advertisement

ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾ.ಯೋ., ಜನಜಾಗೃತಿ ವೇದಿಕೆ: ಸೇವೆಯ ಶೌರ್ಯಕ್ಕೆ 2 ವರ್ಷ ಪೂರ್ಣ 

11:57 PM Jun 20, 2022 | Team Udayavani |

ಬೆಳ್ತಂಗಡಿ: ಪ್ರಾಕೃತಿಕ ಅಥವಾ ಮಾನವ ನಿರ್ಮಿತ ವಿಪತ್ತಿನಂತಹ ತುರ್ತು ಪರಿಸ್ಥಿತಿಯ ಸಂದರ್ಭ ಸ್ಪಂದಿಸುವ ಸಲುವಾಗಿ ಶ್ರೀ ಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿ ಡಾ| ಡಿ. ವೀರೇಂದ್ರ ಹೆಗ್ಗಡೆಯವರ ಕಲ್ಪನೆಯಲ್ಲಿ ಹೊರಬಂದ “ಶೌರ್ಯ ವಿಪತ್ತು ಸೇವಾ ಸಮಿತಿ, ಧರ್ಮಸ್ಥಳ’ ರಾಜ್ಯಾದ್ಯಂತ ಮನೆಮಾತಾಗಿದ್ದು ಜೂ. 21ಕ್ಕೆ 2 ವರ್ಷ ಪೂರೈಸುತ್ತಿದೆ.

Advertisement

ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಕಾರ್ಯನಿರ್ವಾಹಕ ನಿರ್ದೇಶಕ ಡಾ| ಎಲ್‌.ಎಚ್‌. ಮಂಜು ನಾಥ್‌ ಮಾರ್ಗದರ್ಶನದಲ್ಲಿ ಜನಜಾಗೃತಿ ಪ್ರಾದೇಶಿಕ ವಿಭಾಗದ ಮುಖೇನ ಈ ಸಮಿತಿ ಕಾರ್ಯಾಚರಿಸುತ್ತಿದೆ.

50 ತಾಲೂಕುಗಳಲ್ಲಿ  5,055 ಮಂದಿಗೆ ತರಬೇತಿ :

ಶೌರ್ಯ ವಿಪತ್ತು ನಿರ್ವಹಣ ಕಾರ್ಯಕ್ರಮ ರಾಜ್ಯದ 11 ಜಿಲ್ಲೆಯ 50 ತಾಲೂಕುಗಳಲ್ಲಿ ಅನುಷ್ಠಾನಗೊಂಡಿದ್ದು, 2 ವರ್ಷಗಳಲ್ಲಿ 50 ತಾಲೂಕುಗಳಲ್ಲಿ 5,055 ಜನರನ್ನು ತರಬೇತಿಗೊಳಿಸಲಾಗಿದೆ. ದ.ಕ. ಜಿಲ್ಲೆಯ-4, ಉ.ಕ. ಜಿಲ್ಲೆಯ-8, ಹಾಸನ -5, ಚಿಕ್ಕಮಗಳೂರು -6, ಬೆಂಗಳೂರು

ಗ್ರಾ. -5, ಉಡುಪಿ -2, ಧಾರವಾಡ -4, ಬೆಳಗಾವಿ- 6, ಬಾಗಲಕೋಟೆ -7 ತಾಲೂಕು  ಗಳಲ್ಲಿ ತರಬೇತಿ ಹೊಂದಿದ ವಿಪತ್ತು ನಿರ್ವಹಣ ತಂಡ ಸೇವೆ ಯಲ್ಲಿ ತೊಡಗಿಕೊಂ ಡಿದೆ. 20 ಬಗೆಯ 1.50 ಲಕ್ಷ ರೂ. ಮೌಲ್ಯದ ತುರ್ತು ಪರಿಕರ ಗಳನ್ನು 27 ತಾಲೂಕು ಸಮಿತಿಗಳಿಗೆ ನೀಡಲಾಗಿದೆ.

Advertisement

ಮುಂದಿನ ಗುರಿ :

  • 10 ನೂತನ ವಿಪತ್ತು ನಿರ್ವಹಣ ಸಮಿತಿ ರಚನೆ
  • ಕಲ್ಬುರ್ಗಿ ಪ್ರಾದೇಶಿಕ ವ್ಯಾಪ್ತಿಯಲ್ಲಿ ಕಾರ್ಯಕ್ರಮ ಆರಂಭ.
  • 10,000 ಸ್ವಯಂಸೇವಕರ ನೋಂದಣಿ

ಪ್ರಗತಿಯ ಪಕ್ಷಿನೋಟ :

  • ಕಾರ್ಯಕ್ರಮ ಅನುಷ್ಠಾನವಾದ ತಾಲೂಕು- 50
  • ಒಟ್ಟು ಸಂಯೋಜಕರು/ಸ್ವಯಂಸೇವಕರ ಸಂಖ್ಯೆ- 5,055
  • ಕ್ಷಿಪ್ರ ಪ್ರತಿಕ್ರಿಯೆ ತಂಡ ರಚನೆ- 06
  • ವಿಪತ್ತು ಸೇವೆ- 15,443
  • ಸಾಮಾಜಿಕ ಸೇವೆ- 16,341
  • ಒಟ್ಟು ಸೇವಾ ಚಟುವಟಿಕೆಗಳು- 31,784
  • ಒಟ್ಟು ವಿನಿಯೋಗಿಸಿದ ಮಾನವ ದಿನಗಳು – 1,58,920
Advertisement

Udayavani is now on Telegram. Click here to join our channel and stay updated with the latest news.

Next