Advertisement

ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಹತ್ತು ಹಲವು ಸಾಧನೆ

04:35 PM Aug 31, 2022 | Team Udayavani |

ಗ್ರಾಮಾಭ್ಯುದಯ, ಆರ್ಥಿಕ ಸಬಲತೆ, ಕೃಷಿ, ಸಾಮಾಜಿಕ ಕ್ಷೇತ್ರ, ಜನರ ಜೀವನಮಟ್ಟ ಸುಧಾರಣೆ ಸೇರಿದಂತೆ ಹಲವು ಸಮಾಜಮುಖೀ ಚಿಂತನೆಗಳೊಂದಿಗೆ ಕಾರ್ಯ ನಿರ್ವಹಿಸುತ್ತಿರುವ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಕೊಪ್ಪಳ ಜಿಲ್ಲೆಗೆ 10 ನೇ ವರ್ಷಕ್ಕೆ ಪಾದಾರ್ಪಣೆಗೈಯುತ್ತಿದ್ದು, ಇದುವರೆಗೆ ಹಲವು ಪ್ರಗತಿ ಸಾಧಿಸಿದೆ. ಕೊಪ್ಪಳ ಪೂರ್ವ, ಕೊಪ್ಪಳ ಪಶ್ಚಿಮ, ಗಂಗಾವತಿ, ಯಲಬುರ್ಗಾ, ಕುಷ್ಟಗಿ, ಕಾರಟಗಿ ತಾಲೂಕಗಳಲ್ಲಿ ಕೃಷಿಕರ ಸಂಘಟನೆ, ದುರ್ಬಲ ವರ್ಗದ ಮಹಿಳೆಯರ ಸಂಘಟನೆ, ಹೈನುಗಾರಿಕೆ, ಕುರಿ ಸಾಕಾಣಿಕೆ, ಸ್ವ-ಉದ್ಯೋಗ ಚಟುವಟಿಕೆಗಳು, ಉಳಿತಾಯ ಮತ್ತು ಆರ್ಥಿಕ ಸೇರ್ಪಡೆಯಲ್ಲಿ ಉತ್ತಮ ಪ್ರತಿಕ್ರಿಯೆ ದೊರೆತಿದೆ. ಕೊಪ್ಪಳ ಜಿಲ್ಲಾ ವ್ಯಾಪ್ತಿಯಲ್ಲಿ 122 ಖಾಯಂ ಸಿಬ್ಬಂದಿ, 676 ಅರೆಕಾಲಿಕ ಸಿಬ್ಬಂದಿ ಕರ್ತವ್ಯ ನಿರ್ವಹಿಸುತ್ತಿದ್ದು ಜಿಲ್ಲೆಯ ಪ್ರಗತಿಗೆ ಸಂಘ ತನ್ನದೇ ಆದ ಕೊಡುಗೆ ನೀಡುತ್ತಿದೆ.

Advertisement

ಸಂಘಟನೆ ಮತ್ತು ಉಳಿತಾಯ: ಜಿಲ್ಲೆಯಲ್ಲಿ ಸಣ್ಣ ಕೃಷಿಕರ ಮತ್ತು ದುರ್ಬಲ ವರ್ಗದ ಮಹಿಳೆಯರ ಸಬಲೀಕರಣ ಮತ್ತು ಆರ್ಥಿಕ ಸ್ವಾವಲಬನೆಗಾಗಿ ಸಂಘಟನೆಗೆ ಪ್ರೇರಣೆ ನೀಡಲಾಗಿದ್ದು ಇದುವರೆಗೆ ಒಟ್ಟು 17418 ಸಂಘಗಳು ಕಾರ್ಯನಿರ್ವಹಿಸುತ್ತಿವೆ. ಸಂಘಗಳಲ್ಲಿ 1,48690 ಸದಸ್ಯರು ಸೇರ್ಪಡೆಗೊಂಡಿದ್ದಾರೆ. ಸಂಘದ ಸದಸ್ಯರಿಗೆ ಉಳಿತಾಯದ ಮಹತ್ವದ ಬಗ್ಗೆ ಅರಿವು ಮೂಡಿಸುವ ಮೂಲಕ ಪ್ರತಿ ಸದಸ್ಯರು ವಾರಕ್ಕೆ ಕನಿಷ್ಠ 10 ರೂ. ರಂತೆ ಉಳಿತಾಯ ಮಾಡಲು ಪ್ರೇರಣೆ ನೀಡಿದ್ದು, ಇದುವರೆಗೂ 63.45 ಕೋಟಿ ರೂ.ಉಳಿತಾಯ ಮಾಡಿರುತ್ತಾರೆ. ಈ ಉಳಿತಾಯವೇ ಸಂಘದಲ್ಲಿ ಆರ್ಥಿಕ ವ್ಯವಹಾರಕ್ಕೆ ಆಧಾರವಾಗಿದೆ.

ಒಕ್ಕೂಟಗಳ ರಚನೆ – ಬಲವರ್ಧನೆ: ಸಂಘಗಳ ಗುಣಮಟ್ಟದ ನಿರ್ವಹಣೆ, ಸರ್ಕಾರಿ ಮತ್ತು ಯೋಜನೆಯ ಸೌಲಭ್ಯಗಳ ಒದಗಿಸುವುದು, ನಿರಂತರ ಅನುಪಾಲನೆ ಹಾಗೂ ಪ್ರಾದೇಶಿಕ ಕೃಷಿ ಮತ್ತು ಕೃಷಿಯೇತರ ಚಟುವಟಿಕೆಗಳ ಮಾರ್ಗದರ್ಶನಕ್ಕೆ ಅನುಕೂಲವಾಗುವಂತೆ 25 ರಿಂದ 30 ಸಂಘಗಳ ನಿರ್ವಹಣೆಗೆ ಅನುಕೂಲವಾಗುವಂತೆ ಒಕ್ಕೂಟಗಳ ರಚನೆ ಮಾಡಲಾಗಿದ್ದು, ಜಿಲ್ಲೆಯಲ್ಲಿ ಒಟ್ಟು 412 ಒಕ್ಕೂಟಗಳು ಕಾರ್ಯನಿರ್ವಹಿಸುತ್ತಿದ್ದು, ಗ್ರಾಮಾಭಿವೃದ್ಧಿ ಯೋಜನೆಯ ಎಲ್ಲಾ ಕಾರ್ಯಕ್ರಮಗಳ ಯಶಸ್ವಿ ಅನುಷ್ಠಾನ ಹಾಗೂ ಸಂಘಗಳ ಗುಣಮಟ್ಟ ಸುಧಾರಣೆಯಲ್ಲಿ ವಿಶೇಷ ಕೆಲಸ ನಿರ್ವಹಿಸಲಾಗುತ್ತದೆ.

ಹಿಡುವಳಿ ಯೋಜನೆ: ಸಂಘಗಳ ಸದಸ್ಯರು ತಮ್ಮ ಮನೆಯಲ್ಲಿ ವಾರ್ಷಿಕವಾಗಿ ಮಾಡಬೇಕಾದ ಕೆಲಸಗಳ ಪಟ್ಟಿಯನ್ನು ಹಿಡುವಳಿ ಕೈಪಿಡಿಯಲ್ಲಿ ಹಾಕಿಕೊಂಡು ಇದಕ್ಕೆ ಸರ್ಕಾರದಿಂದ, ಪಂಚಾಯತಗಳಿಂದ ಸಿಗುವ ಸೌಲಭ್ಯಗಳನ್ನು ಒದಗಿಸಿ ಸಂಘಗಳಿಂದ ಪ್ರಗತಿನಿ ಧಿಯನ್ನು ನೀಡುವ ಮೂಲಕ ಹಿಡುವಳಿ ಮತ್ತು ವಾರ್ಷಿಕ ಯೋಜನೆಯ ಗುರಿಸಾಧನೆಗೆ ವಿಶೇಷ ಗಮನ ನೀಡಲಾಗುತ್ತಿದ್ದು, ಸದಸ್ಯರು ನಿಗದಿತ ಅವ ಧಿಯಲ್ಲಿ ಗುರಿಸಾಧನೆ ಮಾಡಲು ಇದು ಪೂರಕವಾಗಿದೆ.

ಕೆರೆಗಳ ಅಭಿವೃದ್ಧಿ: ಗ್ರಾಮೀಣ ಪ್ರದೇಶದ ಕೆರೆಗಳು ಪ್ರತಿಯೊಂದು ಊರಿನ ಸಮೃದ್ಧಿಯ ಪ್ರತೀಕವಾಗಿದೆ. ಗ್ರಾಮೀಣ ಜನ ಜೀವನವು ಸಂಪೂರ್ಣವಾಗಿ ಕೆರೆಗಳ ಮೇಲೆಯೆ ಅವಲಂಬಿತವಾಗಿದೆ. ಅಚ್ಚು ಕಟ್ಟಿನ ಪ್ರದೇಶ ಗುರುತಿಸಿ ಅಲ್ಲಿ ವ್ಯವಸ್ಥಿತವಾಗಿ ಕೆರೆಗಳನ್ನು ನಿರ್ಮಿಸಿರುವ ನಮ್ಮ ಪೂರ್ವಜರ ಸಾಧನೆಯೇ ಅದ್ಭುತ‌.

Advertisement

ಅಂತರ್ಜಲದ ಮುಖ್ಯ ಸೆಲೆಯಾಗಿದ್ದ ಈ ಕೆರೆಗಳು ಮಳೆಗಾಲದಲ್ಲಿಯೇ ನೀರು ತುಂಬದ ಮಟ್ಟಕ್ಕೆ ಬಂದಿದೆ. ಕೆರೆಗಳ ಇಂದಿನ ದುಃಸ್ಥಿತಿಗೆ ನೇರವಾಗಿ ಮಾನವನೇ ಹೊಣೆ ಹೊರತು ಬೇರೆ ಯಾರೂ ಅಲ್ಲ. ಹಾಗಾಗಿ ಇಂದು ಹೆಚ್ಚುತ್ತಿರುವ ನೀರಿನ ಬೇಡಿಕೆಗೆ ಕೆರೆಗಳನ್ನು ಪುನಃಶ್ಚೇತನಗೊಳಿಸದ ಹೊರತು ಬೇರೆ ಯಾವುದೇ ಮಾರ್ಗೋಪಾಯಗಳು ಇಲ್ಲವಾಗಿದೆ. ಇಂದಿನ ಬರಗಾಲದ ಪರಿಸ್ಥಿತಿಗೆ ಪ್ರತಿಯೊಂದು ಕೆರೆಗಳ ಹೂಳೆತ್ತಿ ಅವುಗಳ ಜೀರ್ಣೋದ್ಧಾರಗೊಳಿಸುವ ಅವಶ್ಯಕತೆ ಇದೆ. ಆದರೆ ಪುನಃಶ್ಚೇತನದ ಕೆಲಸವು ಸ್ಥಳೀಯರ ಮೂಲಕವೇ ನಡೆಯಬೇಕೆಂಬ ನಿಟ್ಟಿನಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿಗಳಾದ ಪೂಜ್ಯ ಡಾ| ಡಿ. ವೀರೇಂದ್ರ ಹೆಗ್ಗಡೆಯವರ, ಮಾತೃಶ್ರೀ ಹೇಮಾವತಿ ವಿ ಹೆಗ್ಗಡೆಯವರ ನೇತೃತ್ವದಲ್ಲಿ ಮಾನ್ಯ ಕಾರ್ಯನಿರ್ವಾಹಕ ನಿರ್ದೇಶಕರ ಮಾರ್ಗದರ್ಶನದಲ್ಲಿ 2016 ರಲ್ಲಿ “ನಮ್ಮೂರು ನಮ್ಮ ಕೆರೆ’ ಯೋಜನೆಯನ್ನು ರೂಪಿಸಿದೆ. ಎಸ್‌ ಕೆ ಡಿಆರ್‌ ಡಿ ಪಿ ಯ ಆರ್ಥಿಕ ಸಹಕಾರ ದೊಂದಿಗೆ ಸ್ಥಳೀಯರ ಸಹಭಾಗಿತ್ವದಲ್ಲಿ ಕೆರೆಗಳನ್ನು ಪುನಃಶ್ಚೇತನಗೊಳಿಸುವ “ನಮ್ಮೂರು ನಮ್ಮ ಕೆರೆ’ ಯೋಜನೆಯನ್ನು ಕೊಪ್ಪಳ ಜಿಲ್ಲೆಯ ಯಲಬುರ್ಗಾದ ಕರಮುಡಿ, ಚಿಕ್ಕೆನಕೊಪ್ಪ , ಸಂಗನಾಳ, ಕುಷ್ಟಗಿ ತಾಲೂಕಿನ ವಿಠಲಾಪೂರ, ನಿಡಶೇಸಿ, ಗುಡ್ಡದೇವಲಾಪುರ, ಕೊಪ್ಪಳ ತಾಲೂಕಿನ ಚಿಕ್ಕನಕಲ್‌, ಅಳವಂಡಿ, ಹಂದ್ರಾಳ, ಗಂಗಾವತಿಯ ಆದಾಪುರದಲ್ಲಿ ಒಟ್ಟು 11 ಕೆರೆಗಳ ಅಭಿವೃದ್ಧಿಗೆ 85.20 ಲಕ್ಷ ಅನುದಾನ ವಿನಿಯೋಗಿಸಿ 4.10 ಕೋಟಿ ಮೌಲ್ಯದ ಕಾಮಗಾರಿ ಮಾಡಿಸ‌ಲಾಗಿದೆ.

ಶೃದ್ಧಾ ಕೇಂದ್ರಗಳ ಸ್ವಚ್ಚತಾ ಆಂದೋಲನ- ಬುಟ್ಟಿ ವಿತರಣೆ: ಧಾರ್ಮಿಕ ಶೃದ್ಧಾಕೇಂದ್ರಗಳು ಗ್ರಾಮಗಳ ಪ್ರಮುಖ ಭಾಗವಾಗಿದ್ದು ಇವುಗಳನ್ನು ಸ್ವತ್ಛವಾಗಿ ಇಟ್ಟುಕೊಂಡಲ್ಲಿ ಪರಿಸರ ಸ್ವತ್ಛತಾ ಮನೋಭಾವ ಸಾರ್ವತ್ರಿಕವಾಗುತ್ತದೆ. ಸಾಮಾನ್ಯ ಜನರು ಶ್ರದ್ಧಾಕೇಂದ್ರಗಳ ಕುರಿತು ಪವಿತ್ರ ಭಾವನೆಗಳನ್ನು ಇಟ್ಟುಕೊಂಡಿದ್ದಾರೆ. ದೇವಾಲಯಗಳು ಮಲಿನವಾಗಿದ್ದಲ್ಲಿ ಇವುಗಳನ್ನು ಸ್ವತ್ಛಗೊಳಿಸಲು ಜನಸಹಭಾಗಿತ್ವದ ಅವಶ್ಯಕತೆ ಇದೆ. ಈ ಎಲ್ಲಾ ಅಂಶಗಳನ್ನು ಗಮನದಲ್ಲಿಟ್ಟುಕೊಂಡು ಡಾ| ಡಿ. ವೀರೇಂದ್ರ ಹೆಗ್ಗಡೆಯವರ ಮತ್ತು ಮಾತೃಶ್ರೀ ಹೇಮಾವತಿ ಹೆಗ್ಗಡೆಯವರ ಮಾರ್ಗದರ್ಶನದಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಮುಖಾಂತರ ಜನ ಸಹಭಾಗಿತ್ವದಲ್ಲಿ ಶ್ರದ್ಧಾಕೇಂದ್ರಗಳ ಬೃಹತ್‌ ಸ್ವತ್ಛತಾ ಅಭಿಯಾನ ಕೈಗೊಳ್ಳಲಾಗುತ್ತಿದೆ.

ಕಳೆದ 5 ವರ್ಷಗಳಿಂದ ನಿರಂತರವಾಗಿ ಸ್ವಸಹಾಯ ಸಂಘಗಳ ಸದಸ್ಯರು ಶ್ರದ್ಧಾಕೇಂದ್ರದ ಸ್ವತ್ಛತೆಯನ್ನು ಕೈಗೊಳ್ಳುತ್ತಿದ್ದು, ಈ ಬಾರಿ ಮಕರ ಸಂಕ್ರಾತಿ ಅಂದರೆ ಉತ್ತರಾಯಣ ಪುಣ್ಯ ಕಾಲ ಆಗಸ್ಟ್‌ 01 2022 ರಿಂದ 14 ರ ವರೆಗೆ ಜಿಲ್ಲೆಯ 507 ಶ್ರದ್ಧಾಕೇಂದ್ರಗಳ ಸ್ವತ್ಛತಾ ಸಪ್ತಾಹ ನಡೆಸಲಾಯಿತು. ಇದರಲ್ಲಿ 18337 ಸ್ವಯಂ ಸೇವಕರು ಭಾಗವಹಿಸಿ ಸ್ವತ್ಛತಾ ಕಾರ್ಯ ಕೈಗೊಂಡರು. ಈ ಶ್ರದ್ಧಾಕೇಂದ್ರಗಳ ಸ್ವತ್ಛತಾ ಅಭಿಯಾನದಲ್ಲಿ ದೇವಾಲಯದ ಆಡಳಿತ ಮಂಡಳಿ, ಒಕ್ಕೂಟದ ಪದಾ ಧಿಕಾರಿಗಳು, ಜನಜಾಗೃತಿ ಸದಸ್ಯರು, ನವಜೀವನ ಸಮಿತಿಯ ಸದಸ್ಯರು, ಊರಿನ ಗಣ್ಯರು, ಗ್ರಾಮಪಂಚಾಯತ್‌ ಸದಸ್ಯರು, ವಿವಿಧ ಸಂಘ ಸಂಸ್ಥೆಯ ಸದಸ್ಯರು ಭಾಗವಹಿಸಿ ಕೊಪ್ಪಳ ಜಿಲ್ಲೆಯಾದ್ಯಂತ ನಡೆದ ಸ್ವತ್ಛತಾ ಕಾರ್ಯಕ್ರಮವನ್ನು ಯಶಸ್ವಿಗೊಳಿಸಿದ್ದಾರೆ.

ಕೃಷಿ ತರಬೇತಿ-ವಿವಿಧ ಸ್ವ ಉದ್ಯೋಗ ತರಬೇತಿ: ಇದುವರೆಗೆ 1310 ಕೃಷಿ ವಿಚಾರ ಸಂಕಿರಣ, 580 ರೈತ ಕ್ಷೇತ್ರ ಪಾಠ ಶಾಲೆ ಮೂಲಕ ಕೃಷಿ ತರಬೇತಿಗಳನ್ನು ನೀಡಲಾಗಿದೆ. ತರಬೇತಿಯಲ್ಲಿ 71500 ಸದಸ್ಯರು ಪಾಲ್ಗೊಂಡಿದ್ದಾರೆ. 132 ಕೃಷಿ ಅಧ್ಯಯನ ಪ್ರವಾಸ ಹಮ್ಮಿಕೊಳ್ಳಲಾಗಿದೆ. 3960 ಜನ ರೈತರು ಕೃಷಿ, ಹೈನುಗಾರಿಕೆ, ಸ್ವ-ಉದ್ಯೋಗಕ್ಕೆ ಪೂರಕವಾಗಿ ಮಾಹಿತಿ ಪಡೆದುಕೊಂಡು ಸಂಘದಿಂದ ಪ್ರಗತಿನಿ ಧಿ ಪಡೆದು ಕೆಲವರು ಸ್ವ-ಉದ್ಯೋಗ ಕೈಗೊಂಡಿದ್ದಾರೆ.

ಹೂವಿನ ಬೇಸಾಯ, ಬಾಳೆ, ಪಪ್ಪಾಯ, ನುಗ್ಗೆ, ಮಾವು, ನಿಂಬೆ ಇತ್ಯಾದಿ ಕೃಷಿಗಳಿಗೆ ಪ್ರಗತಿನಿ ಧಿ ನೀಡಿ ಕನಿಷ್ಠ ಅರ್ಧ ಎಕ್ರೆಗಿಂತ ಮೇಲ್ಪಟ್ಟು ಕೃಷಿ ಮಾಡಿಸಲಾಗಿದ್ದು ಇವರಿಗೆ ಯೋಜನೆಯಿಂದ ಅನುದಾನ ನೀಡಿ ಕೃಷಿ ಕೆಲಸಕ್ಕೆ ಪ್ರೋತ್ಸಾಹಿಸಲಾಗಿದೆ. ಪ್ರಗತಿಬಂಧು/ಸ್ವ-ಸಹಾಯ ಸಂಘಗಳ ಸದಸ್ಯರ ಸ್ವ-ಉದ್ಯೋಗ, ಕೃಷಿಗೆ ಪೂರಕವಾಗಿ ಯಂತ್ರೋಪ ಕರಣಗಳ ಖರೀದಿಗೆ ಪ್ರೇರಣೆ ನೀಡುವಲ್ಲಿ ಸುಮಾರು 814 ಫಲಾನುಭವಿಗಳಿಗೆ ಅನುದಾನ ನೀಡಲಾಗಿದೆ.

ಸಿಎಚ್‌ಎಸ್‌ಸಿ ಕಾರ್ಯಕ್ರಮ: ಕರ್ನಾಟಕ ಸರಕಾರದ ಕೃಷಿ ಇಲಾಖೆ ಮತ್ತು ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಸಹಭಾಗಿತ್ವದಲ್ಲಿ ಸಣ್ಣ ಮತ್ತು ಅತೀ ಸಣ್ಣ ರೈತರಿಗೆ ಕೃಷಿಯಲ್ಲಿ ಆಧುನಿಕ ಯಂತ್ರೋಪಕರಣಗಳ ಕೊರತೆ ನೀಗಿಸಲು ಜಿಲ್ಲೆಯಲ್ಲಿ ಕೊಪ್ಪಳದ ಅಳವಂಡಿ, ಗಂಗಾವತಿಯ ಹುಲಿಹೈದರ, ಕುಷ್ಟಗಿಯ ಹನುಮನಾಳ, ಯಲಬುರ್ಗಾದ ಹಿರೇವಂಕಲಕುಂಟಾ ಹೋಬಳಿ ವ್ಯಾಪ್ತಿಯಲ್ಲಿ ತಲಾ ಕೇಂದ್ರಕ್ಕೆ 75 ಲಕ್ಷಕ್ಕೆ ಸಂಬಂಧಿ ಸಿದ ಕೃಷಿ ಯಂತ್ರೋಪಕರಣಗಳನ್ನು ಕಡಿಮೆ ಬಾಡಿಗೆಯಲ್ಲಿ ಉಳುಮೆ ಮಾಡಲು ನೀಡಲಾಗುತ್ತಿದೆ. ಒಟ್ಟು 4 ಕೇಂದ್ರಕ್ಕೆ 3 ಕೋಟಿ ರೂ. ಮೌಲ್ಯದ ಯಂತ್ರೋಪಕರಣಗಳನ್ನು ರೈತರಿಗೆ ಕಡಿಮೆ ಬಾಡಿಗೆಯಲ್ಲಿ ನೀಡಲಾಗುತ್ತಿದೆ. ಒಟ್ಟು 8650 ರೈತರು ಇದರ ಪ್ರಯೋಜನ ಪಡೆದುಕೊಂಡಿರುತ್ತಾರೆ.

ಯಂತ್ರಶ್ರೀ ಕಾರ್ಯಕ್ರಮ: ಕೊಪ್ಪಳ ಜಿಲ್ಲೆಯ ಗಂಗಾವತಿ ಮತ್ತು ಕಾರಟಗಿ ತಾಲೂಕಿನಲ್ಲಿ ಯಂತ್ರಶ್ರೀ ಕಾರ್ಯಕ್ರಮವನ್ನು ಪ್ರಸ್ತುತ ವರ್ಷದಿಂದ ಅನುಷ್ಠಾನ ಮಾಡುತ್ತಿದ್ದು 400 ಎಕರೆ ಪ್ರದೇಶದಲ್ಲಿ ಈ ವರ್ಷ ಯಂತ್ರಶ್ರೀ ಪದ್ಧತಿ ಬೇಸಾಯ ಮಾಡಲಾಗುತ್ತಿದೆ. ಕೊಪ್ಪಳ ಜಿಲ್ಲೆಯ ಗಂಗಾವತಿ, ಕಾರಟಗಿ ತಾಲೂಕಿನಲ್ಲಿ ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯಿಂದ ಆದುನಿಕ ಯುಗದಲ್ಲಿ ಯಾಂತ್ರಿಕೃತ ಬೇಸಾಯ ಪದ್ಧತಿಯಿಂದ ಯಂತ್ರಶ್ರೀ ಭತ್ತ ನಾಟಿ ಮಾಡುವ ಯಂತ್ರ ಬಂದಿರುವುದು ರೈತರಿಗೆ ಖುಷಿಯಾಗಿದೆ.

ಪ್ರಸ್ತುತ ವರ್ಷ 100 ಎಕರೆ ಯಂತ್ರದಿಂದ ನಾಟಿ ಮಾಡಿದ್ದು ಉತ್ತಮ ರೀತಿಯಲ್ಲಿ ಭತ್ತದ ಬೆಳವಣಿಗೆ ಆಗಿದೆ. ಇದನ್ನು ನೋಡಿದ ರೈತರು ಈ ವರ್ಷ 4000 ಎಕರೆಯಲ್ಲಿ ನಾಟಿ ಮಾಡುವಲ್ಲಿ ಮುಂದಾಗಿದ್ದಾರೆ. ಈ ಸಾರಿ ಯಂತ್ರದಿಂದ ನಾಟಿ ಮಾಡಿಸುತ್ತೆವೆ ಎಂಬ ಅಭಿಪ್ರಾಯವನ್ನು ವ್ಯಕ್ತಪಡಿಸುತ್ತಿದ್ದಾರೆ.

ಹಸಿರು ಇಂಧನ ಕಾರ್ಯಕ್ರಮ: ಹಸಿರು ಇಂಧನ ಕಾರ್ಯಕ್ರಮಕ್ಕೆ ಪೂರಕವಾಗಿ 36 ಗೋಬರ್‌ಗ್ಯಾಸ್‌ ಘಟಕಗಳ ನಿರ್ಮಾಣ, 4248 ಸೋಲಾರ್‌ ಅಳವಡಿಕೆಯನ್ನು ಪ್ರಗತಿನಿಧಿ  ಮತ್ತು ಕ್ಷೇತ್ರದ ಅನುದಾನ ನೀಡಿ ಮಾಡಿಸಲಾಗಿದೆ ಮತ್ತು ಪರಿಸರ ಪೂರಕ 16780 ಗ್ರೀನ್‌ ವೇ ಸ್ಮಾರ್ಟ್‌ ಒಲೆ ವಿತರಣೆ ಮಾಡಲಾಗಿದೆ.

ಶುದ್ಧಗಂಗಾ ಕಾರ್ಯಕ್ರಮ: ಜಿಲ್ಲೆಯಲ್ಲಿ ಅತಿ ಹೆಚ್ಚು ಫ್ಲೋರೈಡ್‌ಯುಕ್ತ ಗ್ರಾಮಗಳ ಜನರಿಗೆ ಶುದ್ಧ ಕುಡಿಯುವ ನೀರನ್ನು ನೀಡುವ ನಿಟ್ಟಿನಲ್ಲಿ 9 ಶುದ್ಧಗಂಗಾ ಘಟಕಗಳಿಂದ 1300 ಕುಟುಂಬಗಳು ನೋಂದಾವಣೆಗೊಂಡು ಪ್ರತಿ ದಿನ 20 ಲೀ. ಶುದ್ಧ ನೀರಿನಂತೆ 26 ಸಾವಿರ ಲೀ. ಶುದ್ಧ ನೀರು ವಿತರಿಸಲಾಗುತ್ತಿದೆ. ಶುದ್ಧ ನೀರನ್ನು ಬಳಕೆ ಮಾಡುವ ಬಗ್ಗೆ ಬೀದಿ ನಾಟಕ, ಅರಿವು ಮೂಡಿಸುವ 18 ಕಾರ್ಯಕ್ರಮಗಳನ್ನು ನಡೆಸಲಾಗಿದೆ.

ಮಾಸಾಶನ ಕಾರ್ಯಕ್ರಮ: ಅತ್ಯಂತ ಕಡು ಬಡವರಿಗೆ, ಆಸರೆ ಇಲ್ಲದ ವೃದ್ಧರು, ದೀರ್ಘ‌ಕಾಲೀನ ರೋಗಕ್ಕೆ ಒಳಪಟ್ಟವರು, ವಿಧವೆಯರು, ಅಂತವರ ಜೀವನ ನಿರ್ವಹಣೆಗೆ ಅನುಕೂಲವಾಗುವಂತೆ ಪ್ರಸ್ತುತ ವರ್ಷ ಶ್ರೀ ಕ್ಷೇತ್ರದಿಂದ 171 ಕುಟುಂಬಗಳಿಗೆ ಪ್ರತಿ ತಿಂಗಳು ರೂ.750 ರಿಂದ 1000 ದವರೆಗೆ ಒಟ್ಟು ರೂ.48.05 ಲಕ್ಷ ಮಾಸಾಶನ ನೀಡಲಾಗಿದೆ. ಪ್ರತಿ ವರ್ಷ ನಿತಂತರವಾಗಿ ನವೀಕರಿಸಿ ನೀಡಲಾಗಿದೆ. ಅಲ್ಲದೇ ಕಳೆದೆರೆಡು ವರ್ಷಗಳಿಂದ ಮಾಸಾಶನ ಫಲಾನುಭವಿಗಳಿಗೆ ಹಾಗೂ ನಿರ್ಗತಿಕರಿಗೆ ವಾತ್ಸಲ್ಯ ಕಿಟ್‌ (3 ತಿಂಗಳಿಗೆ ಆಗುವಷ್ಟು ಆಹಾರ ಸಾಮಾಗ್ರಿಗಳನ್ನೊಳಗೊಂಡ ಬಟ್ಟೆ, ಪಾತ್ರೆ ದಿನಸಿ ಗಳನ್ನೊಳಗೊಂಡ ಕಿಟ್‌ ) ನೀಡಲಾಗಿದೆ.

ಸುಜ್ಞಾನ ನಿಧಿ ಕಾರ್ಯಕ್ರಮ: ಯೋಜನೆ ಪಾಲುದಾರರ ಕುಟುಂಬಗಳ ಮಕ್ಕಳಿಗೆ ತಾಂತ್ರಿಕ ಹಾಗೂ ವೃತ್ತಿಪರ ಶಿಕ್ಷಣಕ್ಕೆ ಅನುಕೂಲವಾಗುವಂತೆ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಬೆಳ್ಳಿ ಹಬ್ಬದ ಪ್ರಯುಕ್ತ ಈ ಕಾರ್ಯಕ್ರಮ ರೂಪಿಸಲಾಗಿದೆ. ಈತನಕ ಒಟ್ಟು 700 ಮಕ್ಕಳಿಗೆ 400 ರಿಂದ 1000 ರ ವರೆಗೆ ಪ್ರತಿ ತಿಂಗಳು ಶಿಷ್ಯ ವೇತನ ನೀಡಲಾಗುತ್ತಿದೆ.

ಜನ ಮಂಗಲ ಕಾರ್ಯಕ್ರಮ: ಪ್ರತಿಯೊಂದು ಮನುಷ್ಯನಿಗೆ ಸಮಾಜದಲ್ಲಿ ಸ್ವತಂತ್ರವಾಗಿ ಬದಕಲು ಅವಕಾಶವಿದೆ. ಆದರೆ ಕೆಲವರು ಸುಖೀಗಳಾಗಿದ್ದಾರೆ ಇನ್ನೂ ಕೆಲವರು ಸಂತೋಷವನ್ನು ಹುಟ್ಟಿನಿಂದಲೇ, ಯೌವನದಲ್ಲಿ ಅಥವಾ ವೃದ್ಧಾಪ್ಯದಲ್ಲಿ ಬೇರೆ ಬೇರೆ ಕಾರಣ ಗಳಿಂದ ಕಳೆದುಕೊಂಡಿರುತ್ತಾರೆ. ಕೆಲವರಿಗೆ ಹುಟ್ಟಿನಿಂದ ಕುರುಡು, ಅಂಗವೈಕಲ್ಯ ಸಮಸ್ಯೆ ಇದ್ದರೆ ಇನ್ನೂ ಕೆಲವರಿಗೆ ದುರದೃಷ್ಟವಶಾತ್‌ ಅಪಘಾತಗಳು, ಮಾರಕ ರೋಗಗಳು ಕಾಣಿಸಿಕೊಳ್ಳುತ್ತದೆ. ಇದನ್ನು ಸಂಪೂರ್ಣ ಸರಿಪಡಿಸಲು ಆಗದಿದ್ದರೆ ಕೆಲವೊಂದು ಬದಲಿ ಪರಿಹಾರಗಳಿವೆ. ಈ ಎಲ್ಲಾ ಸಮಸ್ಯೆಗಳನ್ನು ಮನಗಂಡು ಪೂಜ್ಯರು ವಿಶೇಷ ಚೇತನರಿಗೆ ವಿವಿಧ ಸಲಕರಣೆ ನೀಡುವ ಕೆಲಸದಲ್ಲಿ ಭಾಗಿಯಾಗಿದ್ದು ಈಗಾಗಲೇ ಕೊಪ್ಪಳ ಜಿಲ್ಲೆ ಯಲ್ಲಿ 98 ಫಲಾನಿಭವಿಗಳಿಗೆ ಈ ಕೆಳಗಿನ ಸಲಕರಣೆ ನೀಡಿರುತ್ತಾರೆ.

ಸಮುದಾಯ ಅಭಿವೃದ್ಧಿ ಕಾರ್ಯಕ್ರಮ, ದೇವಸ್ಥಾನಗಳ ಜೀರ್ಣೋದ್ಧಾರಕ್ಕೆ, ಹಾಲು ಉತ್ಪಾದಕ ಘಟಕಗಳಿಗೆ ಅನುದಾನ: ಯೋಜನೆಯ ಸಮುದಾಯ ಅಭಿವೃದ್ಧಿ ವಿಭಾಗದಿಂದ 139 ದೇವಸ್ಥಾನಗಳ ಜೀರ್ಣೋದ್ಧಾರಕ್ಕೆ ರೂ. 148.65 ಲಕ್ಷ ಅನುದಾನ ನೀಡಲಾಗಿದೆ. ಕೊಪ್ಪಳ ಜಿಲ್ಲೆಯಲ್ಲಿ ಹಾಲು ಉತ್ಪಾದಕ ಸಹಕಾರಿ ಸಂಘಗಳ ಕಟ್ಟಡ ರಚನೆ, ಯಂತ್ರೋಪಕರಣಗಳ ಖರೀದಿಗಾಗಿ ಯೋಜನೆಯಿಂದ 51 ಹಾಲು ಉತ್ಪಾದಕ ಸಹಕಾರಿ ಸಂಘಗಳಿಗೆ ರೂ. 11.26 ಲಕ್ಷ ಅನುದಾನ ವಿತರಣೆ ಮಾಡಲಾಗಿದೆ. ಜಿಲ್ಲೆಯಲ್ಲಿ ಜ್ಞಾನದೀಪ ಶಿಕ್ಷಣ ಕಾರ್ಯಕ್ರಮದ ಅಡಿಯಲ್ಲಿ ಗ್ರಾಮೀಣ ಮಟ್ಟದ ಶಿಕ್ಷಕರ ಕೊರತೆ ಇರುವ 27 ಶಾಲೆಗಳಿಗೆ ತಾಲೂಕಿನ ಶಿಕ್ಷಣಾ ಧಿಕಾರಿಗಳ ಬೇಡಿಕೆ ಪರಿಗಣಿಸಿ 27 ಸ್ವಯಂ ಸೇವಕ ಶಿಕ್ಷಕರನ್ನು ಒದಗಿಸಲಾಗಿದೆ.

ಕೋವಿಡ್‌ ತರಬೇತಿ ವರದಿ: ಜಿಲ್ಲೆಯಲ್ಲಿ ಕೋವಿಡ್‌ನ‌ ಸಮಸ್ಯೆಯಿಂದಾಗಿ ನಮ್ಮ ಸಂಘದ ಸದಸ್ಯರುಗಳಿಗೆ ತರಬೇತಿ ನೀಡುವ ನಿಟ್ಟಿನಲ್ಲಿ ಸ್ಥಳೀಯ ಆಶಾ ಕಾರ್ಯಕರ್ತರು, ಆರೋಗ್ಯ ಸಹಾಯಕರು, ತರಬೇತಿ ಸಹಾಯಕರು, ಮೇಲ್ವಿಚಾರಕರ ಮೂಲಕ 3626 ತರಬೇತಿಗಳನ್ನು 102882 ಸದಸ್ಯರಿಗೆ ತರಬೇತಿಯನ್ನು ನೀಡಲಾಗಿದೆ. ಇದರಿಂದ ಜನರಿಗೆ ಕೋವಿಡ್‌ ಜಾಗೃತಿ ಮೂಡಿಸಿದಂತಾಗಿದೆ. ಪ್ರಸ್ತುತ 10 ಬೀದಿ ನಾಟಕ ಮೂಲಕ ಜಾಗೃತಿ ಮೂಡಿಸಲಾಗಿದೆ. ಅಲ್ಲದೇ ಕೋವಿಡ್‌ ಸಂದರ್ಭದಲ್ಲಿ ಒಟ್ಟು 6 ಕೃತಕ ಆಮ್ಲಜನಕ ತಯಾರಕ ಯಂತ್ರ ( ವೆಂಟಿಲೆಟರ್‌ ) ಗಳನ್ನು ಸರಕಾರಿ ಆಸ್ಪತ್ರೆಗಳಿಗೆ ವಿತರಿಸಲಾಗಿದೆ.

ಕೊಪ್ಪಳ ಸಿರಿ ರೈತ ಉತ್ಪಾದಕ ಕಂಪನಿ ಸ್ಥಾಪನೆ: 2020 ರಲ್ಲಿ ಜಿಲ್ಲೆಯ ಇರಕಲಗಡ ಹೋಬಳಿಯಲ್ಲಿ ಸಿರಿಧಾನ್ಯಗಳನ್ನು ಬೆಳೆಯುವ ಬೆಳೆಗಾರರನ್ನೊಳಗೊಂಡ 1000 ಜನ ರೂ. 1000/-ದಂತೆ ಶೇರುಗಳೊಂದಿಗೆ 10 ಲಕ್ಷ ರೂ. ಕೃಷಿ ಚಟುವಟಿಕೆಗಳಾದ ಸಿರಿ ಧಾನ್ಯಗಳ ಉತ್ಪಾದನೆ, ಮಾರಾಟ, ಖರೀದಿ, ಬಿತ್ತನೆ ಬೀಜ ಹಾಗೂ ಸಾವಯವ ಗೊಬ್ಬರಗಳ ಮಾರಾಟವನ್ನು ಮಾಡುತ್ತ ರೈತರಿಂದ ಸಿರಿಧಾನ್ಯಗಳನ್ನು ಖರೀದಿಸಿ ಸಿರಿಧಾನ್ಯ ಸಂಸ್ಕರಣಾ ಘಟಕ ಧಾರವಾಡಕ್ಕೆ ಕಳುಹಿಸಿ ಸದ್ರಿ ಘಟಕದಿಂದ ಮೌಲ್ಯವ ರ್ಧಿತ ಉತ್ಪನ್ನಗಳನ್ನು ಮತ್ತು ಸಂಸ್ಕರಿಸಿದ ಸಿರಿಧಾನ್ಯಗಳನ್ನು ರೈತ ಉತ್ಪಾದಕ ಕಂಪನಿಯ ಮೂಲಕ ಮಾರಾಟ ಮಾಡಲಾಗುತ್ತಿದೆ.

ಪ್ರಗತಿನಿ ಧಿ ಕಾರ್ಯಕ್ರಮ ವಿತರಣೆ ವರದಿ: ಸಂಘಗಳ ಸದಸ್ಯರ ಅವಶ್ಯಕತೆಗನುಗುಣವಾಗಿ ಈಗಾಗಲೇ ಹಾಕಿಕೊಂಡ ವಾರ್ಷಿಕ ಯೋಜನೆಗೆ ಪೂರಕವಾಗಿ ಕೃಷಿ, ಹೈನುಗಾರಿಕೆ, ಸ್ವ-ಉದ್ಯೋಗ, ಮನೆ ರಚನೆ, ಮಕ್ಕಳ ಶಿಕ್ಷಣ ಮೂಲಭೂತ ಸೌಕರ್ಯಗಳ ಅಭಿವೃದ್ಧಿಗೆ ಇದುವರೆಗೆ ಒಟ್ಟು 1560 ಕೋಟಿ ಪ್ರಗತಿನಿಧಿ  ವಿತರಿಸಲಾಗಿದೆ. ಸದಸ್ಯರು ಹಣದ ಸದ್ಬಳಕೆಯೊಂದಿಗೆ ಮರುಪಾವತಿಯೂ ಶೇ. 99 ರಷ್ಟಿದೆ. ಪ್ರಸ್ತುತ ರೂ. 415 ಕೋಟಿ ಹೊರಬಾಕಿ ಇದೆ. ಪ್ರಗತಿನಿಧಿ  ಕಾರ್ಯಕ್ರಮಕ್ಕೆ ಸಂಬಂಧಿ ಸಿದಂತೆ ಕೊಪ್ಪಳ ದಲ್ಲಿ ಯೂನಿಯನ್‌ ಬ್ಯಾಂಕ್‌ ನ ಪ್ರತಿನಿಧಿ ಯಾಗಿ ಕಾರ್ಯನಿರ್ವಹಿಸುತ್ತಿದೆ.

ನಿರಂತರ ಪತ್ರಿಕೆ: ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ವತಿಯಿಂದ ರಾಜ್ಯ ಸರಕಾರದ ವಾರ್ತಾ ಇಲಾಖೆಯ ಮಾಧ್ಯಮ ಪಟ್ಟಿಗೆ ಸೇರಿದ ಹಾಗೂ ಅಂತರಾಷೀrÅಯ ಮಾನ್ಯತೆ ಪಡೆದ ನಿರಂತರ ಮಾಸಿಕ ಪತ್ರಿಕೆಯ ಮೂಲಕ ಕೃಷಿ ಹಾಗೂ ಸ್ವ ಉದ್ಯೋಗ ಹಾಗೂ ಇತರೆ ಚಟುವಟಿಕೆಗಳ ಕುರಿತಾದ ಮಾಹಿತಿ ಹಾಗೂ ಪೂಜ್ಯರ ಮಾರ್ಗದರ್ಶನವನ್ನು ಒಳಗೊಂಡ ಪುಸ್ತಕವನ್ನು ತಂಡದ ಸದಸ್ಯರಿಗೆ ವಾರ್ಷಿಕ ಚಂದಾದಾರನ್ನಾಗಿಸುವ ಮೂಲಕ ವಿತರಿಸಲಾಗುತ್ತಿದೆ. ಜಿಲ್ಲೆಯಲ್ಲಿ ಪ್ರತಿ ತಿಂಗಳು 11481 ಪತ್ರಿಕೆ ವಿತರಣೆಯಾಗುತ್ತವೆ.

ಸಿಎಸ್‌ಸಿ ಕಾರ್ಯಕ್ರಮಗಳು: ಸಾಮಾನ್ಯ ಸೇವಾ ಕೇಂದ್ರಗಳನ್ನು ಈ ವರ್ಷದಲ್ಲಿ ಪ್ರಾರಂಭಿಸುವ ಮೂಲಕ ಜನಸಾಮಾನ್ಯರಿಗೆ ಕೇಂದ್ರ ಹಾಗೂ ರಾಜ್ಯ ಸರಕಾರದ ಯೋಜನೆಗಳನ್ನು, ಸೇವೆಗಳನ್ನು ಸರಕಾರ ನಿರ್ಧರಿಸಿದ ದರದಲ್ಲಿ ತಲುಪಿಸಲು ಪೂಜ್ಯರು ವಿಶೇಷ ಕಾಳಜಿಯಿಂದ ಪ್ರಾರಂಭಿಸಿದ ಕಾರ್ಯಕ್ರಮವಾಗಿದ್ದು ಪ್ರಸ್ತುತ ಜಿಲ್ಲೆಯಲ್ಲಿ 168 ಗ್ರಾಮಗಳಲ್ಲಿ ಪ್ರಾರಂಭವಾಗಿದ್ದು ಈಗಾಗಲೇ 168 ಉದ್ಯೋಗಗಳನ್ನು ಸೃಷ್ಟಿಸಿ ಸ್ಥಳೀಯರಿಗೆ ಅನುಕೂಲ ಮಾಡಿಕೊಡಲಾಗಿದೆ.

ಪ್ರಗತಿ ರಕ್ಷಾ ಕವಚ ವಿಮಾ ಯೋಜನೆ: ಸಂಘದ ಸದಸ್ಯರಿಗೆ ಎಲ್‌ಐಸಿ ಅವರ ಕಿರು ವಿಮೆಯ ಅಡಿಯಲ್ಲಿ ಇದುವರೆಗೆ 23,500 ಜನರಿಗೆ ಮೈಕ್ರೋ ಬಚತ ಎನ್ನುವ ಕಿರು ವಿಮಾ ಪಾಲಸಿಯನ್ನು ಮಾಡಿಸಲಾಗಿದೆ. ಪ್ರಗತಿ ನಿಧಿ ಪಡೆದ ಎಲ್ಲಾ ಸದಸ್ಯರಿಗೆ ಪ್ರಗತಿ ರಕ್ಷಾ ಕವಚ ಎನ್ನುವ ವಿಮೆ ಮಾಡಿಸಲಾಗಿದೆ.

ಜನ ಜಾಗೃತಿ ವೇದಿಕೆಯಿಂದ ವಿವಿಧ ಕಾರ್ಯಕ್ರಮಗಳು
ಜಿಲ್ಲೆಯಲ್ಲಿ ಅಖೀಲ ಕರ್ನಾಟಕ ಜನ ಜಾಗೃತಿ ವೇದಿಕೆ 30 ವಿವಿಧ ಕ್ಷೇತ್ರದಲ್ಲಿ ಸಮಾಜ ಸೇವೆ ಮಾಡುವ ಗಣ್ಯರ ಸಹಕಾರದೊಂದಿಗೆ ದುಶ್ಚಟ ಸಮಾಜ ಮುಕ್ತ ಸಮಾಜ ನಿರ್ಮಾಣ ಮಾಡಲು ವಿವಿಧ ಜಾಗೃತಿ ಕಾರ್ಯಕ್ರಮಗಳನ್ನು ನಡೆಸಲಾಗುತ್ತಿದೆ. ಇದುವರೆಗೆ 21 ಮದ್ಯವರ್ಜನ ಶಿಬಿರ ನಡೆಸಿ 1490 ಮದ್ಯವ್ಯಸನಿಗಳಗೆ ಚಿಕಿತ್ಸೆ ನೀಡಿ ಮದ್ಯವ್ಯಸನ ಮುಕ್ತರನ್ನಾಗಿ ಮಾಡಲಾಗಿದೆ. ಶಾಲಾ ಮಕ್ಕಳಿಗೆ ದುಶ್ಚಟದಿಂದ ದೂರವಿರುವ ಕುರಿತಂತೆ 63 ಶಾಲೆಗಳಲ್ಲಿ 9446 ವಿದ್ಯಾರ್ಥಿಗಳಿಗೆ ಸ್ವಾಸ್ಥÂಸಂಕಲ್ಪ ಮಾಹಿತಿ ನೀಡಲಾಗಿದೆ. ಅಕ್ಟೋಬರ್‌ 2 ರ ಗಾಂ ಧಿ ಜಯಂತಿ ಯಂದು ಕೊಪ್ಪಳ ಜಿಲ್ಲಾದ್ಯಂತ 5 ತಾಲೂಕಿನಲ್ಲಿ ಜಿಲ್ಲಾ ಮಟ್ಟದಲ್ಲಿ 5 ವರ್ಷಗಳಿಂದ ಜನಜಾಗೃತಿ ಜಾಥಾ ಮತ್ತು ಪಾನಮುಕ್ತರ ಅಭಿನಂದನಾ ಸಮಾವೇಶ ನಡೆಸಿ ಜಾಗೃತಿ ಮೂಡಿಸಲಾಗಿದೆ.

ಜ್ಞಾನ ವಿಕಾಸ ಕಾರ್ಯಕ್ರಮ
ಜಿಲ್ಲೆಯಲ್ಲಿ ವರದಿ ವರ್ಷ 150 ಜ್ಞಾನವಿಕಾಸ ಮಹಿಳಾ ಕೇಂದ್ರಗಳ ಮೂಲಕ ಪ್ರತಿ ತಿಂಗಳು ಮಹಿಳೆಯರಿಗೆ ಸ್ವತ್ಛತೆ, ಆರೋಗ್ಯ ಮತ್ತು ನೈರ್ಮಲ್ಯ, ಕಾನೂನು, ಮಹಿಳಾ ಸಬಲೀಕರಣ, ಪೌಷ್ಠಿಕ ಆಹಾರ, ಕೌಟುಂಬಿಕ ಸಮಸ್ಯೆಗಳ ಬಗ್ಗೆ ಮಾಹಿತಿ ನೀಡಲಾಗಿದ್ದು ಇದುವರೆಗೂ 12360 ತರಬೇತಿಗಳನ್ನು ನೀಡಲಾಗಿದ್ದು ತರಬೇತಿಯಲ್ಲಿ 1,65,288 ಜನ ಮಹಿಳೆಯರು ಮಾಹಿತಿ ಪಡೆದುಕೊಂಡು ಜಾಗೃತರಾಗಿರುತ್ತಾರೆ ಮತ್ತು ವಿವಿಧ ಸ್ವಉದ್ಯೋಗ ಮಾಡಿ ಸ್ವಾವಲಂಬಿ ಜೀವನ ಸಾಗಿಸುತ್ತಿದ್ದಾರೆೆ.

Advertisement

Udayavani is now on Telegram. Click here to join our channel and stay updated with the latest news.