Advertisement
ಆಶ್ರಮ ನೀಡಿದ ಮತ್ತು ವಿದ್ಯೆ ನೀಡಿದ ಗುರುಗಳಿಬ್ಬರ ಮಾರ್ಗದರ್ಶನದಲ್ಲಿ ಶ್ರೀಕೃಷ್ಣ ಪೂಜೆಯನ್ನು ನಡೆಸುವುದಾಗಿ ಶ್ರೀ ಈಶಪ್ರಿಯತೀರ್ಥ ಶ್ರೀಪಾದರು ನುಡಿದರು.
Related Articles
Advertisement
ಪರಿಸರ ಕಾಳಜಿಗೆ ಶ್ಲಾಘನೆಸ್ವಾಮೀಜಿ ಅವರ ಪರಿಸರ ಕಾಳಜಿ ಶ್ಲಾಘನೀಯ. ಜಗತ್ತಿನೆಲ್ಲೆಡೆ ಪರಿಸರ ಮಾಲಿನ್ಯ ಉಂಟಾಗಿರುವ ಈ ಸಂದರ್ಭದಲ್ಲಿ ಪರಿಸರವನ್ನು ಉಳಿಸುವ ಕಾಳಜಿ ತೋರಬೇಕಾಗಿದೆ. ಸರಕಾರ ಸಂಪೂರ್ಣ ಸಹಕಾರವನ್ನು ಪರ್ಯಾಯಕ್ಕೆ ನೀಡಲಿದೆ ಎಂದು ಸಚಿವ ಅಶೋಕ್ ಹೇಳಿದರು. ಹಿಂದಿನ ಎಸ್‌ಪಿ ಅಣ್ಣಾಮಲೈ ಶುಭಾಶಂಸನೆಗೈದರು. ಸಂಸದೆ ಶೋಭಾ ಕರಂದ್ಲಾಜೆ, ಜಿಲ್ಲಾಧಿಕಾರಿ ಜಿ. ಜಗದೀಶ್, ಮಾಜಿ ಸಚಿವರಾದ ಪ್ರಮೋದ್ ಮಧ್ವರಾಜ್, ವಿನಯಕುಮಾರ ಸೊರಕೆ, ಮಾಜಿ ಶಾಸಕ ಯು.ಆರ್.ಸಭಾಪತಿ, ಪೌರಾಯುಕ್ತ ಆನಂದ ಕಲ್ಲೋಳಿಕರ್, ಅದಮಾರು ಮಠದ ದಿವಾನ್ ಲಕ್ಷ್ಮೀನಾರಾಯಣ ಮುಚ್ಚಿಂತಾಯ ಉಪಸ್ಥಿತರಿದ್ದರು. ವೆಬ್‌ಸೈಟ್ ಅನಾವರಣ
ದಿಯಾ ಸಿಸ್ಟಮ್ಸ್‌ನವರು ಅಭಿವೃದ್ಧಿಪಡಿಸಿದ ಅದಮಾರು ಮಠದ ವೆಬ್‌ಸೈಟ್‌ನ್ನು ಪಲಿಮಾರು ಶ್ರೀಗಳು ಬಿಡುಗಡೆಗೊಳಿಸಿದರು. ವೆಬ್‌ಸೈಟ್ ಕುರಿತು ರಾಜಿತ್ ವಿವರಿಸಿದರು. ಶ್ರೀಕೃಷ್ಣ ಸೇವಾ ಬಳಗದ ಗೌರವಾಧ್ಯಕ್ಷ, ಶಾಸಕ ಕೆ. ರಘುಪತಿ ಭಟ್ ಸ್ವಾಗತಿಸಿ ಅಧ್ಯಕ್ಷ ಪ್ರೊ| ಎಂ.ಬಿ.ಪುರಾಣಿಕ್ ಪ್ರಸ್ತಾವನೆಗೈದರು. ಪೂರ್ಣಪ್ರಜ್ಞ ಕಾಲೇಜಿನ ಪ್ರಾಧ್ಯಾಪಕ ಡಾ| ಟಿ.ಎಸ್. ರಮೇಶ್ ಕಾರ್ಯಕ್ರಮ ನಿರ್ವಹಿಸಿದರು. ಬದ್ಧತೆಯಿಂದ ನಿರ್ವಹಣೆ
ನಾನು ಯಾವುದೇ ಕೆಲಸಗಳನ್ನು ಮುಂಚಿತವಾಗಿ ಮಾಡುತ್ತೇನೆ ಎಂದು ಹೇಳುವುದಿಲ್ಲ. ಆದರೆ ಆ ಕೆಲಸಗಳನ್ನು ಮಾಡಲು ಬದ್ಧನಾಗಿ ಅದನ್ನು ಮುಗಿಸಲು ಪ್ರಯತ್ನಿಸುತ್ತೇನೆ. ಪ್ಲಾಸ್ಟಿಕ್ ಬಳಕೆಯನ್ನು ಸಂಪೂರ್ಣವಾಗಿ ನಿಷೇಧಿಸುವುದಾಗಿ ಈಗಲೇ ಘೋಷಿಸುವುದಿಲ್ಲ. ಆದರೆ ಅದರ ಬಗ್ಗೆ ಬದ್ಧನಾಗಿ ಕಾರ್ಯನಿರ್ವಹಿಸುತ್ತೇನೆ ಎಂದು ಶ್ರೀ ಈಶಪ್ರಿಯತೀರ್ಥ ಶ್ರೀಪಾದರು ಹೇಳಿದರು. ಪಲಿಮಾರು ಸ್ವಾಮೀಜಿ ಅವರು ನಮ್ಮ ಪರ್ಯಾಯದ ಅವಧಿಯಲ್ಲಿ ಎರಡು ವರ್ಷ ನಮ್ಮೊಡನೆ ಇದ್ದು, ಶಾಸ್ತ್ರ ಪಾಠಗಳನ್ನು ಹೇಳುವುದಾಗಿ ಒಪ್ಪಿಕೊಂಡಿದ್ದಾರೆ. ಅದಕ್ಕಾಗಿ ನಾನು ಅವರಿಗೆ ಚಿರಋಣಿ ಎಂದು ತಿಳಿಸಿದರು.