Advertisement

ಸಪ್ತೋತ್ಸವದ ಮೂಲಕ ಸಮಾಜ ಸೇವೆಗೆ ಸಹಕರಿಸಿ: ಕೈರಬೆಟ್ಟು

04:42 PM Jul 28, 2017 | Team Udayavani |

ಮುಂಬಯಿ: ಶ್ರೀ ಕೃಷ್ಣ ವಿಟಲ ಪ್ರತಿಷ್ಠಾನ ಮುಂಬಯಿ ಇದರ  ಸಂಸ್ಕೃತಿ ಸಮೃದ್ದಿ ಯೋಜನೆಯ ಅಂಗವಾಗಿ ಹರಿಕಥಾ ಸಪ್ತೋತ್ಸವ- ಶ್ರಾವಣ ಮಾಸದ ಏಳು ದಿನಗಳ ನಿರಂತರ ಸಂಕೀರ್ತನ ಕಾರ್ಯಕ್ರಮವು ಜು. 24ರಂದು ಸಂಜೆ ಸಾಂತಾಕ್ರೂಜ್‌ ಪೂರ್ವದ ಪೇಜಾವರ ಮಠದಲ್ಲಿ ಚಾಲನೆಗೊಂಡಿತು.

Advertisement

ಶ್ರೀ ಕೃಷ್ಣ ವಿಟuಲ ಪ್ರತಿಷ್ಠಾನ ಸಂಸ್ಥಾಪಕಾಧ್ಯಕ್ಷ ಕೈರಬೆಟ್ಟು ವಿಶ್ವನಾಥ್‌ ಅವರು ಅಧ್ಯಕ್ಷತೆ ವಹಿಸಿ ಮಾತನಾಡಿ, ಶ್ರಾವಣ ಮಾಸದಲ್ಲಿ ಧಾರ್ಮಿಕ ಕಥೆಗಳನ್ನು ಮನನ ಮಾಡುವುದರಿಂದ ಜೀವನ ಪಾವನವಾಗುತ್ತದೆ. ಕಳೆದ ಹನ್ನೊಂದು ವರ್ಷಗಳಿಂದ ಸಂಸ್ಥೆಯು ಈ ಹರಿಕಥಾ ಸಪೊ¤àತ್ಸವವನ್ನು ಆಯೋ ಜಿಸುತ್ತಿದ್ದು, ಯುವ ಪೀಳಿಗೆಗೆ ಧಾರ್ಮಿಕತೆಯ ಅರಿವನ್ನು ಮೂಡಿಸುವ ಕಾರ್ಯದಲ್ಲಿ ತೊಡಗಿದೆ. ಹರಿಕಥಾ ಸಪೊ¤àತ್ಸವದ ಮುಖಾಂತರ ಪ್ರತಿಷ್ಠಾನವು ಸಮಾಜ ಸೇವೆಯಲ್ಲಿ ತೊಡಗಿದ್ದು, ಈ ಮಹತ್ಕಾರ್ಯಕ್ಕೆ ಎಲ್ಲರ ಸಹಕಾರ ಅಗತ್ಯವಾಗಿದೆ. ಮುಂದಿನ ಎಲ್ಲಾ ಕಾರ್ಯಕ್ರಮಗಳಿಗೆ ತುಳು-ಕನ್ನಡಿಗರ ಪ್ರೋತ್ಸಾಹ ಸದಾವಿರಲಿ ಎಂದರು.

ಉದ್ಘಾಟನಾ ಸಮಾರಂಭದಲ್ಲಿ ಅತಿಥಿಗಳಾಗಿ ಪೇಜಾವರ ಮಠದ ಪ್ರಬಂಧಕ ಹರಿ ಎಂ. ಭಟ್‌, ಜೆರಿಮೆರಿ ಉಮಾಮಹೇಶ್ವರಿ ಮಂದಿರದ ಎಸ್‌. ಎನ್‌. ಉಡುಪ, ಮೀರಾರೋಡ್‌ ಪಲಿಮಾರು ಮಠದ ಪ್ರಬಂಧಕ ರಾಧಾಕೃಷ್ಣ ಭಟ್‌, ಕನ್ನಡ ಕಲಾಕೇಂದ್ರದ ಅಧ್ಯಕ್ಷ ಬಿ. ಬಿ. ರಾವ್‌, ಹಿರಿಯ ಯಕ್ಷಗಾನ ಅರ್ಥದಾರಿ  ಕೆ. ಕೆ. ಶೆಟ್ಟಿ, ಬಿಲ್ಲವರ ಅಸೋಸಿಯೇಶನ್‌ ಅಧ್ಯಕ್ಷ ನಿತ್ಯಾನಂದ ಡಿ. ಕೋಟ್ಯಾನ್‌, ಕನ್ನಡಿಗ ಕಲಾವಿದರ ಪರಿಷತ್ತು ಮಹಾರಾಷ್ಟ್ರ ಘಟಕದ ಉಪಾಧ್ಯಕ್ಷ ಕಮಲಾಕ್ಷ ಸರಾಫ್‌, ಅಸಲ# ದತ್ತಾತ್ರೇಯ ದುರ್ಗಾಂಬಿಕಾ ಮಂದಿರದ ಧರ್ಮದರ್ಶಿ ದೇವ್‌  ಡಿ. ಪೂಜಾರಿ ಪಾಲ್ಗೊಂಡು ಶುಭ ಹಾರೈಸಿದರು.

ಶ್ರೀ ಕೃಷ್ಣ ವಿಟuಲ ಪ್ರತಿಷ್ಠಾನ ಮುಂಬಯಿ ಇದರ ಗೌರವ ಪ್ರಧಾನ ಕಾರ್ಯದರ್ಶಿ ಅಶೋಕ್‌ ಶೆಟ್ಟಿ ಪೆರ್ಮುದೆ, ಇತರ ಪದಾಧಿಕಾರಿಗಳು, ಸದಸ್ಯರಾದ  ಕಳತ್ತೂರು ವಿಶ್ವನಾಥ ಶೆಟ್ಟಿ, ಸುಮಾ ವಿ. ಭಟ್‌, ಸುನಂದಾ ಎಸ್‌. ಉಪಾಧ್ಯಾಯ, ಶಶಿಧರ ಬಿ. ಶೆಟ್ಟಿ, ಸದಾನಂದ್‌ ಶೆಟ್ಟಿ, ಸುಶೀಲಾ ದೇವಾಡಿಗ, ನವೀನ್‌ ಪಡುಇನ್ನ ಮೊದಲಾದವರು ಉಪಸ್ಥಿತರಿದ್ದರು. ರಂಗನಟ ಅಶೋಕ್‌ ಪಕ್ಕಳ ಮತ್ತು ಸುಶೀಲಾ ದೇವಾಡಿಗ ಅವರು ಕಾರ್ಯಕ್ರಮ ನಿರ್ವಹಿಸಿದರು. ಪೆರ್ಮುದೆ ಅಶೋಕ್‌ ಶೆಟ್ಟಿ ಅವರು ಅತಿಥಿಗಳನ್ನು ಸ್ವಾಗತಿಸಿದರು.

ಇದೇ ಸಂದರ್ಭದಲ್ಲಿ ಸಮುದ್ರೋಲ್ಲಂಘನೆ ಮತ್ತು ಸೀತಾನ್ವೇಷಣೆ ಹರಿಕಥಾ ಕಾಲಕ್ಷೇಪ ನಡೆಯಿತು. ಪಕ್ಕವಾದ್ಯದಲ್ಲಿ ಹಾರ್ಮೋನಿಯಂನಲ್ಲಿ ಶೇಖರ ಸಸಿಹಿತ್ಲು, ತಬಲಾದಲ್ಲಿ ಜನಾರ್ದನ ಸಾಲ್ಯಾನ್‌, ತಾಳದಲ್ಲಿ ರವಿ ಪೂಜಾರಿ, ಶ್ರೀನಿವಾಸ ಭಟ್‌ ಅವರು ಸಹಕರಿಸಿದರು. ತುಳು-ಕನ್ನಡಿಗರು ಅಧಿಕ ಸಂಖ್ಯೆಯಲ್ಲಿ ಪಾಲ್ಗೊಂಡಿದ್ದರು.  

Advertisement

ಹರಿಕಥಾ ಸಪೊ¤àತ್ಸವ ಸತ್ಸಂಗವು ಜು. 30ರವರೆಗೆ ಪ್ರತಿ ದಿನ ಸಂಜೆ 5ರಿಂದ ಪೂಜ್ಯ ಪೇಜಾವರ ಶ್ರೀಪಾದರ ಆಶೀರ್ವಾದಗಳೊಂದಿಗೆ ಪೇಜಾವರ ಮಠದಲ್ಲಿ ನಡೆಯಲಿದೆ.

  ಜು. 27 ರಂದು ವೀರ ಅಭಿಮನ್ಯು, ಜು. 28 ರಂದು ಭಕ್ತ ಪುಂಡರೀಕ, ಜು. 29ರಂದು ಭಕ್ತ ಕನಕದಾಸ, ಜು. 30ರಂದು ಶ್ರೀರಾಮ ಸೀತಾಕಲ್ಯಾಣ ಹರಿಕಥಾ 
ಕಾಲಕ್ಷೇಪ ನಡೆಯಲಿದೆ.
ಪ್ರಾಯೋಜಕರಾಗಿ ಕ್ರಮವಾಗಿ ಶ್ರೀ ಕೃಷ್ಣ ವಿಟuಲ ಭಜನ ಮಂಡಳಿ, ಸುಗುಣಾ ಕಾಮತ್‌, ಡಾ| ಎನ್‌. ಎಸ್‌. ಆಳ್ವ, ನಂದಳಿಕೆ ಭರತ್‌ ಶೆಟ್ಟಿ, ರಮಾನಾಥ ಕೋಟ್ಯಾನ್‌, ಜಗನ್ನಾಥ ಪುತ್ರನ್‌, ಜಗನ್ನಾಥ ಕಾಂಚನ್‌, ಅಶೋಕ್‌ ಶೆಟ್ಟಿ ಪೆರ್ಮುದೆ, ಸುರೇಶ್‌ ಭಂಡಾರಿ, ಐಕಳ ಗಣೇಶ್‌ ಶೆಟ್ಟಿ, ಕವಿತಾ ಪುರುಷೋತ್ತಮ ಶೆಟ್ಟಿ, ಸುಧಾ ಕುಂದರ್‌, ವಿಶ್ವನಾಥ ಎನ್‌. ಶೆಟ್ಟಿ, ಮನಿಷಾ ಸಾವಂತ್‌ ಅವರು ಸಹಕರಿಸಲಿದ್ದಾರೆ. 

ಪ್ರಾಯೋಜಕತ್ವವನ್ನು ಪಡೆಯಲು ಇಚ್ಛಿಸುವ ಭಕ್ತಾದಿಗಳು 9820118612, 9757203045 ಈ ನಂಬರನ್ನು ಸಂಪರ್ಕಿಸಬಹುದು ಎಂದು ಸಂಘಟಕರು ತಿಳಿಸಿದ್ದಾರೆ. 
 

Advertisement

Udayavani is now on Telegram. Click here to join our channel and stay updated with the latest news.

Next