Advertisement
ಸಾಂತಾಕ್ರೂಜ್ ಪೂರ್ವದ ಪೇಜಾವರ ಮಠದಲ್ಲಿ ಶ್ರೀ ಕೃಷ್ಣ ವಿಟ್ಠಲ ಪ್ರತಿಷ್ಠಾನ ಮುಂಬಯಿ ಹಾಗೂ ಗೋಪಾಲಕೃಷ್ಣ ಪಬ್ಲಿಕ್ ಟ್ರಸ್ಟ್ ಮತ್ತು ಮುಂಬಯಿ ಮಹಾನಗರದ ತುಳು-ಕನ್ನಡಿಗ ಭಕ್ತಾಭಿಮಾನಿಗಳ ವತಿಯಿಂದ ಜೂ. 29ರಂದು ನಡೆದ ಸ್ವಾಮೀಜಿಯವರ ರಜತ ತುಲಾಭಾರ ಸೇವೆಯಲ್ಲಿ ಆಶೀರ್ವಚನ ನೀಡಿದ ಅವರು, ಮಹಾನಗರದಲ್ಲಿ ಶ್ರೀ ಕೃಷ್ಣನ ಮಂದಿರ ನಿರ್ಮಾಣಗೊಳ್ಳುತ್ತಿದ್ದು, ಇದು ಕೇವಲ ತುಳು-ಕನ್ನಡಿಗರಿಗೆ ಮಾತ್ರವಲ್ಲ, ಮುಂಬಯಿಯ ಎಲ್ಲ ಸಮುದಾಯಕ್ಕೆ ಪ್ರಾಯೋಜಕಾರಿಯಾಗಲಿ. ದೇವರ ಅನುಗ್ರಹದಿಂದ ತನ್ನ ಈ ಪ್ರಾಯದಲ್ಲೂ ತುಲಾಭಾರ ಸೇವೆಯು ಯಶಸ್ವಿಯಾಗಿ ನಡೆದಿದೆ. ಇದು ಶ್ರೀ ಕೃಷ್ಣನಿಗೆ ಅರ್ಪಣೆಯಾಗಲಿದೆ ಎಂದರು.
Related Articles
ನಮಗೆಲ್ಲರಿಗೂ ಶ್ರೀ ಕೃಷ್ಣನ ದರ್ಶನ ಪಡೆದಂತಾಗಿದೆ. ಪೇಜಾವರ ಶ್ರೀಗಳನ್ನು ದೊಡ್ಡ ಮಟ್ಟದಲ್ಲಿ ಸಮ್ಮಾನಿಸಬೇಕು ಎನ್ನುವ ಕೈರಬೆಟ್ಟು ವಿಶ್ವನಾಥ ಭಟ್ ಅವರ ಯೋಜನೆ, ಯೋಚನೆ ಸಫಲಗೊಂಡಿದೆ ಎಂದು ನುಡಿದರು.
Advertisement
ವೇದಿಕೆಯಲ್ಲಿ ಸುರೇಶ್ ಶೆಟ್ಟಿ ಯೆಯ್ನಾಡಿ, ಸೋನಿ ಸ್ಟೀಲ್‌ನ ಪಾಂಡುರಂಗ ಶೆಟ್ಟಿ, ಗಾಣಿಗ ಸಮಾಜ ಸೇವಾ ಸಂಘದ ಗೌರವಾಧ್ಯಕ್ಷ ಜಗನ್ನಾಥ ಗಾಣಿಗ, ಸಿಎ ಸುಧೀರ್ ಆರ್. ಎಲ್. ಶೆಟ್ಟಿ, ಉದ್ಯಮಿ ವಿಶ್ವನಾಥ ಶೆಟ್ಟಿ ಕಾಪು, ನಟ-ನಿರ್ದೇಶಕ ಮನೋಹರ ಶೆಟ್ಟಿ ನಂದಳಿಕೆ, ಪ್ರತಿಷ್ಠಾನದ ಕೋಶಾಧಿಕಾರಿ ಅವಿನಾಶ್ ಶಾಸ್ತ್ರೀ, ಟ್ರಸ್ಟಿಗಳಾದ ಸುಮಾ ವಿ. ಭಟ್, ಮಹಿಳಾ ವಿಭಾಗದ ಕಾರ್ಯಾಧ್ಯಕ್ಷ ಸುನಂದಾ ಉಪಾಧ್ಯಾಯ, ಕಾರ್ಯದರ್ಶಿ ಸುಶೀಲಾ ದೇವಾಡಿಗ ಅವರು ಉಪಸ್ಥಿತರಿದ್ದರು.
ಪ್ರತಿಷ್ಠಾನದ ಸಂಸ್ಥಾಪಕ ಕೈರಬೆಟ್ಟು ವಿಶ್ವನಾಥ ಭಟ್ ಪ್ರಾಸ್ತಾವಿಕವಾಗಿ ಮಾತನಾಡಿ, ಅಪಾರ ಸಂಖ್ಯೆಯಲ್ಲಿ ಉಪಸ್ಥಿತರಿದ್ದ ಭಕ್ತರಿಂದ ತುಲಾಭಾರ ಸೇವೆ, ಯತಿಕುಲ ಚಕ್ರವರ್ತಿ ಪೇಜಾವರ ಶ್ರೀಗಳಿಗೆ ನಡೆಸುವಂತೆ ಆಯಿತು. ಪ್ರತಿಷ್ಠಾನ ವಿವಿಧ ರೀತಿಯಲ್ಲಿ ಸಮಾಜದ ಅಶಕ್ತರಿಗೆ ಸಹಕಾರ ನೀಡುತ್ತಿದೆ ಎಂದರು.
ಕಾರ್ಯದರ್ಶಿ ಸುಶೀಲಾ ದೇವಾಡಿಗ ಮತ್ತು ಡಾ| ಕರ್ನೂರು ಮೋಹನ್ ರೈ ಕಾರ್ಯಕ್ರಮ ನಿರ್ವಹಿಸಿದರು. ಮಧೆÌàಷ ಭಜನಾ ಮಂಡಳಿಯಿಂದ ಭಜನಾ ಕಾರ್ಯಕ್ರಮ ನಡೆಯಿತು. ಕು| ನಿಖೀತಾ ಎಸ್. ಅಮೀನ್ ತಂಡದಿಂದ ನೃತ್ಯ ವೈಭವ ನಡೆಯಿತು. ಕಾರ್ಯಕ್ರಮಕ್ಕೆ ಕುಕ್ಕೆಹಳ್ಳಿ ಸದಾನಂದ ಶೆಟ್ಟಿ, ಶಶಿಧರ ಬಿ. ಶೆಟ್ಟಿ, ಶೇಖರ್ ಸಸಿಹಿತ್ಲು, ಜನಾರ್ದನ ಸಾಲ್ಯಾನ್, ನವೀನ್ ಪಡುಇನ್ನ, ಪ್ರಭಾಕರ ಬೆಳುವಾಯಿ, ಬಾಲಚಂದ್ರ ಭಟ್ ಮೊದಲಾದವರು ಸಹಕರಿಸಿದರು.