ಇಸ್ಲಾಮಾಬಾದ್: ಪಾಕಿಸ್ಥಾನದ ಇಸ್ಲಾಮಾಬಾದ್‌ನಲ್ಲಿ ನಿರ್ಮಾಣವಾಗುತ್ತಿರುವ ಶ್ರೀಕೃಷ್ಣ ದೇವಾಲಯದ ವಿರುದ್ಧ ಪ್ರಭಾವಿ ಧಾರ್ಮಿಕ ಸಂಸ್ಥೆಯೊಂದು ಫತ್ವಾ ಹೊರಡಿಸಿದೆ.
ಅಲ್ಲದೆ ನಿರ್ಮಾಣ ಕಾರ್ಯಕ್ಕೆ ತಡೆ ಘೋಷಿಸುವಂತೆ ನ್ಯಾಯಾಲಯದ ಮೊರೆ ಹೋಗಿದೆ.
2018ರಲ್ಲಿ ಇಮ್ರಾನ್‌ಖಾನ್ ಪಾಕ್ ಪ್ರಧಾನಿಯಾಗಿ ಅಧಿಕಾರ ಸ್ವೀಕರಿಸಿದ ವೇಳೆ ದೇಶದ ಅಲ್ಪಸಂಖ್ಯಾತರ ಧಾರ್ಮಿಕ ಸ್ವಾತಂತ್ರ್ಯ ರಕ್ಷಿಸುವುದಾಗಿ ಭರವಸೆ ನೀಡಿದ್ದರು.
ಅದರಂತೆ ಇಸ್ಲಾಮಾಬಾದ್‌ನಲ್ಲಿ ಸ್ಥಳೀಯ ಹಿಂದೂ ಸಮಿತಿಗೆ ಭೂಮಿಯನ್ನೂ ಹಸ್ತಾಂತರಿಸಿ, ಶ್ರೀಕೃಷ್ಣ ದೇಗುಲ ನಿರ್ಮಾಣಕ್ಕೆ ಅನುಮತಿ ನೀಡಲಾಗಿತ್ತು.
ಮೊದಲ ಹಂತದ ನಿರ್ಮಾಣಕ್ಕೆ 10 ಕೋಟಿ ರೂ.ಗಳನ್ನು ಸರಕಾರ ಘೋಷಿ ಸಿತ್ತು. ಸರಕಾರದಿಂದ ಹಣ ತಲುಪದಿದ್ದರೂ ಭಕ್ತರು ತಾವೇ ನಿಧಿ ಸಂಗ್ರಹಿಸಿ ನಿಗದಿತ ಜಾಗದಲ್ಲಿ ದೇಗುಲ ನಿರ್ಮಿ ಸುತ್ತಿದ್ದಾರೆ.
ಇಸ್ಲಾಮ್ ಹೊರತುಪಡಿಸಿ ಇತರ ಧರ್ಮಗಳ ಅನುಯಾಯಿಗಳಿಗೆ ಪೂಜಾ ಕೇಂದ್ರಗಳನ್ನು ನಿರ್ಮಿಸಲು ಅವ ಕಾಶ ಮಾಡಿಕೊಡಬಾರದು ಎಂದು ಜಾಮಿಯಾ ಅಶರ್ಫಿಯಾ ಸಂಸ್ಥೆ ಕೋರ್ಟ್‌ನಲ್ಲಿ ವಾದಿಸಿದೆ.
ಆದರೆ ದೇಗುಲ ನಿರ್ಮಾಣ ಕಾರ್ಯಕ್ಕೆ ಮಧ್ಯಾಂತರ ತಡೆ ನೀಡಲು ಇಸ್ಲಾಮಾಬಾದ್ ಹೈಕೋರ್ಟ್ ಗುರುವಾರ ನಿರಾಕರಿಸಿದೆ.