ಹಾಸನ: ದೇಶದ ಪವಿತ್ರ ಗ್ರಂಥ ಭಗವದ್ಗೀತೆ ಸಾರವನ್ನು ಅನುಸರಿಸಿದರೆ ಶಾಂತಿಯುತ ಜೀವನ ಸಾಗಿಸಬಹುದು ಎಂದು ಜಿಲ್ಲಾಧಿಕಾರಿ ಆರ್.ಗಿರೀಶ್ ಅಭಿಪ್ರಾಯಪಟ್ಟರು.
ಜಿಲ್ಲಾಡಳಿತ ಮತ್ತು ಕನ್ನಡ ಸಂಸ್ಕೃತಿ ಇಲಾಖೆ ಹಾಗೂ ಕೃಷ್ಣ ಜಯಂತ್ಯೋತ್ಸವ ಸಮಿತಿ ಸಂಯುಕ್ತಾಶ್ರಯದಲ್ಲಿ ನಡೆದ ಶ್ರೀ ಕೃಷ್ಣ ಜಯಂತಿ ಅಧ್ಯಕ್ಷತೆ ವಹಿಸಿ ಮಾತ ನಾಡಿದ ಅವರು, ಇಂದಿನ ಯುವ ಜನತೆ ಮೊಬೈಲ್ ಬಳಕೆ ಕಡಿಮೆ ಮಾಡಿ, ತಮ್ಮ ವಿದಾಭ್ಯಾಸದ ಜೊತೆಗೆ ಭಗವದ್ಗೀತೆ ಓದುವುದರಿಂದ ಜೀವನದ ಅರ್ಥ ತಿಳಿದು ಬದುಕು ಸಾಗಿಸಬಹುದು ಎಂದು ಹೇಳಿದರು.
ಸಮಾಜಮುಖಿಯಾಗಿ: ಶ್ರೀ ಕೃಷ್ಣ ಭಗವದ್ಗೀತೆಯಲ್ಲಿ ತಿಳಿಸಿರುವ ಪ್ರಕಾರ, ಮಾನವ ಹುಟ್ಟು ಸಾವಿನ ನಡುವೆ ಇರುವ ಜೀವನವೆಂಬ ಚಕ್ರದಲ್ಲಿ ಸಿಲುಕಿ ಹೇಗೆ ಸುಖ-ದುಃಖಗಳನ್ನು ಅನುಭಸುತ್ತಾನೆ ಎಂಬ ವಿಷಯದ ಕುರಿತು ಪ್ರಸ್ತಾಪ ಮಾಡಿದ್ದು, ಪ್ರತಿಯೊಬ್ಬರೂ ಅರ್ಥ ಪೂರ್ಣವಾದ ಜೀವನ ನಡೆಸಲು ಭಗವದ್ಗೀತೆ ತಿಳಿಯುವುದು ಅತ್ಯಶ್ಯಕ ಎಂದರು. ಜೀವನದಲ್ಲಿ ಇಟ್ಟುಕೊಂಡ ಗುರಿ ಸಾಧಿಸುವುದರ ಕಡೆಗೆ ಮನಸ್ಸನ್ನು ಕೇಂದ್ರಿಕೃತವಾಗಿ ಟ್ಟುಕೊಳ್ಳುವುದರ ಜೊತೆಗೆ ಸಮಾಜಮುಖಿ ಕಾರ್ಯ ಗಳನ್ನು ಮಾಡುವ ಹವ್ಯಾಸ ಗಳನ್ನು ಬೆಳಸಿಕೊಳ್ಳಬೇಕು ಎಂದು ಹೇಳಿದರು.
ಪರಿಪೂರ್ಣ ವ್ಯಕ್ತಿತ್ವವೇ ಶ್ರೀ ಕೃಷ್ಣ: ಜಿಲ್ಲಾ ಕಸಾಪ ಅಧ್ಯಕ್ಷ ಡಾ.ಎಚ್.ಎಲ್. ಮಲ್ಲೇಶಗೌಡ ಅವರು ಮಾತನಾಡಿ, ಸಕಲ ಮಾನವ ಸಂಕುಲವನ್ನು ಉದ್ಧರಿಸಲೆಂದು ಭಗವಾನ್ ಶ್ರೀ ಕೃಷ್ಣ ಪರಮಾತ್ಮ ಭೂಮಿ ಮೇಲೆ ಜನ್ಮ ತಾಳಿದ್ದು, ಜೀವನ ಎಂದರೆ ಏನು? ಮಾನವ ಯಾಕೆ ಜೀವನ ವೆಂಬ ಜಂಜಾಟದಲ್ಲಿ ಸಿಲುಕ್ಕಿದ್ದಾನೆ ಎಂಬುದನ್ನು ಮಾನವ ಕುಲಕ್ಕೆ ಅರ್ಥ ಮಾಡಿಸಿದ ದೈವ. ಕೃಷ್ಣಂ ವಂದೇ ಜಗದ್ಗುರುಂ ಕೃಷ್ಣ ಎಂದರೆ ಪರಿಪೂರ್ಣ ವ್ಯಕ್ತಿತ್ವ ಎಂದು ತಿಳಿಸಿದರು.
ಜಿಪಂ ಉಪಕಾರ್ಯದರ್ಶಿ ಪುನೀತ್, ರಾಜ್ಯ ಸರ್ಕಾರಿ ನೌಕರರ ಸಂಘದ ಜಿಲ್ಲಾ ಘಟಕದ ಅಧ್ಯಕ್ಷ ಈ. ಕೃಷ್ಣೇಗೌಡರು, ಗೊಲ್ಲ ಸಮುದಾಯದ ವಿವಿಧ ಮುಖಂಡರು ಹಾಜರಿದ್ದರು