Advertisement

Sri Krishna Janmastami: ಕೃಷ್ಣನೂರಿನಲ್ಲಿ ಅಷ್ಟಮಿ ಸಂಭ್ರಮ, ಇಂದು ಶ್ರೀಕೃಷ್ಣ ಲೀಲೋತ್ಸವ

10:26 AM Aug 27, 2024 | Team Udayavani |

ಉಡುಪಿ: ಶ್ರೀಕೃಷ್ಣಮಠದಲ್ಲಿ ಶ್ರೀ ಕೃಷ್ಣ ಜನ್ಮಾಷ್ಟಮಿ ಉತ್ಸವವು ಸೋಮವಾರ ಪರ್ಯಾಯ ಶ್ರೀ ಪುತ್ತಿಗೆ ಮಠದ ಶ್ರೀ ಸುಗುಣೇಂದ್ರತೀರ್ಥ ಶ್ರೀಪಾದರು, ಕಿರಿಯ ಯತಿ ಶ್ರೀ ಸುಶ್ರೀಂದ್ರ ತೀರ್ಥ ಶ್ರೀಪಾದರ ನೇತೃತ್ವದಲ್ಲಿ ವೈಭವದಿಂದ ನಡೆಯಿತು. ಭಂಡಾರಕೇರಿ ಮಠದ ಶ್ರೀವಿದ್ಯೇಶತೀರ್ಥ ಶ್ರೀಪಾದರು ಪಾಲ್ಗೊಂಡಿದ್ದರು. ಅದಮಾ ರು ಮಠದ ಶ್ರೀವಿಶ್ವಪ್ರಿಯತೀರ್ಥ ಶ್ರೀಪಾದರು ಪೂಜೆಗೆ ಸಹಕರಿಸಿದರು. ಬೆಳಗ್ಗೆಯಿಂದಲೇ ಸಾವಿರಾರು ಭಕ್ತರು ದೇವರ ದರ್ಶನ ಪಡೆದರು.

Advertisement

ಸೋಮವಾರ ರಾತ್ರಿ ನೈವೇ ದ್ಯ ಸಮರ್ಪಿಸಿ  ಮಹಾಪೂಜೆ ನಡೆಸಿದ ಶ್ರೀಪಾದರು ಚಂದ್ರೋದಯದ ವೇಳೆ 12.07 ಗಂಟೆಗೆ ಕೃಷ್ಣನಿಗೆ ಅರ್ಘ್ಯ  ಪ್ರದಾನ ಮಾಡಿದರು. ಬಳಿಕ ಭಕ್ತರಿಗೆ ಅರ್ಘ್ಯ ಬಿಡುವ ಅವಕಾಶ ಕಲ್ಪಿಸಲಾಗಿತ್ತು. ಬೆಳಗ್ಗೆ 9 ರ ಸುಮಾರಿಗೆ ಶ್ರೀಪಾದರು ಮಧ್ವಮಂಟಪದಲ್ಲಿ ಮರದ ತೊಟ್ಟಿಲೊಳಗಿರುವ ಶ್ರೀ ಕೃಷ್ಣನ ಮಣ್ಣಿನ ಮೂರ್ತಿಗೆ ಪೂಜೆ ಸಲ್ಲಿಸುವ ಮೂಲಕ ಡೋಲು ಉತ್ಸವಕ್ಕೆ ಚಾಲನೆ ನೀಡಿದರು.

ಶ್ರೀ ಕೃಷ್ಣಮಠವನ್ನು ಸಂಪೂರ್ಣವಾಗಿ ವಿವಿಧ ಹೂವುಗಳಿಂದ ಅಲಂಕರಿಸಲಾಗಿತ್ತು. ಕೃಷ್ಣವೇಷ ಸ್ಪರ್ಧೆ ಎಲ್ಲರ ಗಮನ ಸೆಳೆ ಯಿತು. ಶ್ರೀ ಕೃಷ್ಣಮಠದ ಹೊರಗೆ ಹಾಗೂ ರಥಬೀದಿಯ ಸುತ್ತ ವಿದ್ದುದ್ದೀಪಾಲಂಕಾರ ಕಂಗೊಳಿಸಿತು. ಪರ್ಯಾಯ ಶ್ರೀಪಾದರು ಏಕಾದಶಿಯಂತೆ ನಿರ್ಜಲ ಉಪವಾ ಸದಲ್ಲಿದ್ದು, ಬೆಳಗ್ಗೆ ಮತ್ತು ರಾತ್ರಿ ಮಹಾಪೂಜೆ, ತುಳಸಿ ಅರ್ಚನೆ ನಡೆಸಿದರು. ಯತಿದ್ವಯರು ಬೆಳಗ್ಗೆ ಮಹಾಪೂಜೆ ಬಳಿಕ ರಾತ್ರಿ ನೈವೇದ್ಯಕ್ಕಾಗಿ ಉಂಡೆಗಳನ್ನು ಕಟ್ಟಿ ಮುಹೂರ್ತ ಮಾಡಿದರು.

Advertisement

ಸುರತ್ಕಲ್‌ನ ಹೊಸಬೆಟ್ಟು ವಿ| ರಾಜೇಶ್‌ ಬಾಗ್ಲೋಡು ಮತ್ತು ಶಿಷ್ಯರಿಂದ ಅಷ್ಟೋತ್ತರ ಶತ ಕೊಳಲು ವಾದನ, ಮಣಿಪಾಲದ ಶ್ರೀ ದುರ್ಗಾಂಬಾ ಯಕ್ಷಗಾನ ಕಲಾಮಂಡಳಿ ಯಿಂದ ಶ್ರೀ ಕೃಷ್ಣ ಪುಷ್ಪ ವಿಲಾಸ ಯಕ್ಷಗಾನ, ಹುಲಿವೇಷ ಕುಣಿತ ಪ್ರದರ್ಶನಗೊಂಡಿತು.

ರಾಜಾಂಗಣ, ಗೀತಾ ಮಂದಿರ, ಪುತ್ತಿಗೆ ಮಠದಲ್ಲಿ ನಡೆದ ಮುದ್ದುಕೃಷ್ಣ ವೇಷ ಸ್ಪರ್ಧೆ ಎಲ್ಲರ ಗಮನ ಸೆಳೆಯಿತು. ಸಾವಿರಕ್ಕೂ ಅಧಿಕ ಮಕ್ಕಳು ಭಾಗವಹಿಸಿದ್ದರು. ರಥಬೀದಿ, ನಗರದ ಹಲವೆಡೆ ಕೃಷ್ಣ ವೇಷ, ಪೇಪರ್‌ ವೇಷ, ರಕ್ಕಸ ವೇಷ, ಹುಲಿವೇಷಧಾರಿಗಳು ಅಲ್ಲಲ್ಲಿ ಸಂಚರಿಸುತ್ತಾ ಕಣ್ಮನ ಸೆಳೆದರು. ಯುವರಾಜ್‌ ಮಸ್ಕತ್‌ ಅವರ ಸೇವಾರ್ಥ ನಡೆದ ಪುಷ್ಪಾಲಂಕಾರವು ಆಕರ್ಷಣೀಯವಾಗಿತ್ತು.

ನಗರದೆಲ್ಲೆಡೆ ಬಿಗು ಪೊಲೀಸ್‌ ಬಂದೋಬಸ್ತ್ ಕಲ್ಪಿಸಲಾಗಿದೆ. ಜಿಲ್ಲಾ ಎಸ್‌ ಪಿ ನೇತೃತ್ವದಲ್ಲಿ ಇಬ್ಬರು ಹೆಚ್ಚುವರಿ ಪೊಲೀಸ್‌ ವರಿಷ್ಠಾಧಿಕಾರಿಗಳು, ಒಬ್ಬರು ಡಿವೈಎಸ್‌ಪಿ, 4 ಮಂದಿ ಇನ್‌ಸ್ಪೆಕ್ಟರ್‌ಗಳು, 200 ಮಂದಿ ಪೊಲೀಸ್‌ ಸಿಬಂದಿ, 50 ಮಂದಿ ಹೋಂ ಗಾರ್ಡ್‌ಗಳು, 4 ಕರ್ನಾಟಕ ರಾಜ್ಯ ಸಶಸ್ತ್ರ ಮೀಸಲು ಪಡೆ, 3 ಜಿಲ್ಲಾ ಸಶಸ್ತ್ರ ಮೀಸಲು ಪಡೆ, ಶ್ವಾನದಳ, ಎಲ್ಲ ಗೇಟ್‌ಗಳಲ್ಲೂ ತಪಾಸಣೆ ನಡೆಸಲಾಗುತ್ತಿದೆ. ಮುನ್ನೆಚ್ಚರಿಕೆ ಕ್ರಮವಾಗಿ ಪೊಲೀಸ್‌ ಇಲಾಖೆಯಿಂದ ರಥಬೀದಿ ಸಹಿತ ಶ್ರೀಕೃಷ್ಣ ಮಠದ ಆಸುಪಾಸು ಪರಿಸರದಲ್ಲಿ 15ಕ್ಕೂ ಅಧಿಕ ಸಿಸಿಟಿವಿ ಅಳವಡಿಕೆ ಮಾಡಲಾಗಿದೆ.

3ಡಿಯಲ್ಲಿ ಕೃಷ್ಣಾವತಾರ
ಶ್ರೀ ಕೃಷ್ಣನ ಬಾಲಲೀಲೆ ಸಹಿತವಾಗಿ ಹಲವು ಪ್ರಮುಖ ಘಟನಾವಳಿಗಳ ಮಾಹಿತಿಗಳನ್ನು 3ಡಿ ಮೂಲಕ ಭಕ್ತರಿಗೆ ಕಣ್ತುಂ ಬಿಕೊಳ್ಳಬಹುದಾದ ವ್ಯವ ಸ್ಥೆಯನ್ನು ಗೀತಾಮಂದಿರದ ಮುಂಭಾಗದಲ್ಲಿ ಮಾಡಲಾ ಯಿತು. ಬೃಹತ್‌ ಪರದೆಯ ಮೇಲೆ ಸುಮಾರು 7 ನಿಮಿಷಗಳ 3ಡಿ ವೀಡಿಯೋ ಮೂಲಕ ಶ್ರೀಕೃಷ್ಣ ಲೀಲಾವಿನೋದಗಳನ್ನು ಭಕ್ತರಿಗೆ ಉಣಬಡಿಸಲಾಯಿತು.

ಇಂದು ಗೋವಳರ ಸಂಭ್ರಮ
ಮಂಗಳವಾರ ಶ್ರೀ ಕೃಷ್ಣ ಲೀಲೋತ್ಸವ (ವಿಟ್ಲಪಿಂಡಿ) ಹಿನ್ನೆಲೆಯಲ್ಲಿ 9 ಮಂದಿ ಗೋವಳರು (ಗೊಲ್ಲರು) ಬಿಳಿಕಚ್ಚೆ, ನೀಲಿ ಬನಿಯನ್‌, ಸೊಂಟಕ್ಕೆ ಬೈಹುಲ್ಲಿನ ಪಟ್ಟಿ ಮೊದಲಾದ ಸಾಂಪ್ರದಾಯಿಕ ದಿರಿಸನ್ನು ಧರಿಸಿ ತಲೆಗೆ ಬೈಹುಲ್ಲುಟೋಪಿ, ಕೈಯಲ್ಲಿ ಬಿದಿರಿನ ಕೊಲು ಹಿಡಿದು ರಥಬೀದಿಯಲ್ಲಿ ಮೊಸರು, ಅರಶಿನ ಕುಂಕುಮ ಹಾಗೂ ಅರಳು ಹುಡಿ ತುಂಬಿದ ಕುಡಿಕೆಗಳನ್ನು ಒಡೆದು ಸಂಭ್ರಮಿಸುವರು.

ಶ್ರೀ ಅನಂತೇಶ್ವರ ಹಾಗೂ ಶ್ರೀ ಚಂದ್ರಮೌಳೀಶ್ವರ ದೇಗುಲದ ವತಿಯಿಂದ 6 ಗುರ್ಜಿ ಹಾಗೂ ಶ್ರೀ ಕೃಷ್ಣ ಮಠದಿಂದ 7 ಗುರ್ಜಿ ಅಳವಡಿಸಲಾಗಿದೆ. ಲಕ್ಷಾಂತರ ಭಕ್ತರು ಲೀಲೋತ್ಸವದಲ್ಲಿ ಭಾಗಿಯಾಗುವರು. ಬಳಿಕ ಮೃಣ್ಮಯ ಮೂರ್ತಿಯನ್ನು ಮಧ್ವ ಸರೋವರದಲ್ಲಿ ವಿಸರ್ಜಿಸಲಾಗುತ್ತದೆ. ಅಪರಾಹ್ನ 3 ಕ್ಕೆ ಉತ್ಸವ ಆರಂಭವಾಗಿ ಮಧ್ವ ಸರೋವರದಲ್ಲಿ ತೀರ್ಥಸ್ನಾನ
ಮಾಡಿ ಸಂಪನ್ನಗೊಳ್ಳಲಿದೆ. ಮೆರವಣಿಗೆ, ಸಾಂಸ್ಕೃತಿಕ, ಹುಲಿ ವೇಷಗಳ ಪ್ರದರ್ಶನ ಸಹಿತ ಜಾನಪದ ವೇಷಧಾರಿಗಳ ತಂಡಗಳು ಗಮನ ಸೆಳೆಯಲಿವೆ. ಬೆಳಗ್ಗೆ 11 ಗಂಟೆಯಿಂದ ಭಕ್ತರಿಗೆ ಅನ್ನಪ್ರಸಾದ ವಿತರಣೆ ಇರಲಿದೆ.

 ದಕ್ಷಿಣ ಕನ್ನಡ  ಜಿಲ್ಲಾದ್ಯಂತ ಸಂಭ್ರಮದ ಕೃಷ್ಣಾಷ್ಟಮಿ
ಮಂಗಳೂರು: ದಕ್ಷಿಣ ಕನ್ನಡ ಜಿಲ್ಲಾದ್ಯಂತ ಸೋಮವಾರ ಶ್ರದ್ಧಾ ಭಕ್ತಿಯಿಂದ ಶ್ರೀ ಕೃಷ್ಣ ಜನ್ಮಾಷ್ಟಮಿಯನ್ನು ಆಚರಿಸಲಾಯಿತು. ಕೃಷ್ಣ ದೇಗುಲದಲ್ಲಿ ವಿಶೇಷ ಪೂಜೆ ನೆರವೇರಿತು. ವಿವಿಧ ದೇಗುಲಗಳಲ್ಲಿ ಪೂಜೆ ನಡೆಯಿತು. ಜತೆಗೆ ಮನೆಗಳಲ್ಲಿ ಕೃಷ್ಣ ಪೂಜೆ ನಡೆಯಿತು. ಆಸ್ತಿಕರು ಸೋಮವಾರ ರಾತ್ರಿ ಚಂದ್ರೋದಯದ ವರೆಗೆ ಉಪವಾಸವಿದ್ದು, ಶ್ರೀಕೃಷ್ಣನ ಜನನವನ್ನು ಭಕ್ತಿಯಿಂದ ಸ್ವಾಗತಿಸಿ ಅರ್ಘ್ಯ ಪ್ರದಾನ ಮಾಡಿದರು.

ಶ್ರೀ ಕೃಷ್ಣ ಜನ್ಮಾಷ್ಟಮಿಯ ಪ್ರಮುಖ ಆಕರ್ಷಣೆಯಲ್ಲಿ ಒಂದಾಗಿರುವ ಮೊಸರುಕುಡಿಕೆ ಉತ್ಸವವನ್ನು ಕೆಲವೆಡೆ ಸೋಮವಾರ ಆಚರಿಸಲಾಗಿದ್ದು, ಹಲವೆಡೆ ಮಂಗಳವಾರ ನಡೆಯಲಿದೆ. ಕಲ್ಕೂರ ಪ್ರತಿಷ್ಠಾನ ವತಿಯಿಂದ ಕದ್ರಿ ದೇಗುಲದಲ್ಲಿ ಶ್ರೀ ಕೃಷ್ಣ ವೇಷ ಸ್ಪರ್ಧೆಯನ್ನು ಆಯೋಜಿಸಲಾಗಿದ್ದು, ನೂರಾರು ಪುಟಾಣಿಗಳು ಪಾಲ್ಗೊಂಡರು. ಜತೆಗೆ ಜಿಲ್ಲೆಯ ವಿವಿಧ ಕಡೆಯಲ್ಲಿ ದೇವಸ್ಥಾನ, ಸಂಘ ಸಂಸ್ಥೆಗಳ ವತಿಯಿಂದ ಕೃಷ್ಣ ವೇಷ ಸ್ಪರ್ಧೆಗಳು ಜರಗಿದವು. ನಗರ ಸಹಿತ ವಿವಿಧೆಡೆ ಕೃಷ್ಣವೇಷ ಸ್ಪರ್ಧೆ ನಡೆದಿದ್ದು, ಬಹುತೇಕರು ತಮ್ಮ ಮಕ್ಕಳಿಗೆ ಕೃಷ್ಣ, ರಾಧೆಯರ ವೇಷ ತೊಡಿಸಿ ಸಂಭ್ರಮಿಸಿದರು.

ಸೋಮವಾರ ರಾತ್ರಿ ನೈವೇದ್ಯ ಸಮರ್ಪಿಸಿ ಮಹಾಪೂಜೆ ನಡೆಸಿದ ಶ್ರೀಪಾದರು ಚಂದ್ರೋದಯದ ವೇಳೆ 12.07 ಗಂಟೆಗೆ ಕೃಷ್ಣನಿಗೆ ಅರ್ಘ್ಯ ಪ್ರದಾನ ಮಾಡಿದರು. ಬಳಿಕ ಭಕ್ತರಿಗೆ ಅರ್ಘ್ಯ ಬಿಡುವ ಅವಕಾಶ ಕಲ್ಪಿಸಲಾಗಿತ್ತು…

 

Advertisement

Udayavani is now on Telegram. Click here to join our channel and stay updated with the latest news.

Next